ಜಿಲ್ಲಾ ಸುದ್ದಿ

ರಾಜನಿಲ್ಲದ ಏಳನೇ ದಸರಾ

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾದ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ದಸರಾ ಮಹೋತ್ಸವ ಇದು.

ರಾಜನಿಲ್ಲದ ಏಳನೇ ದಸರಾ
Published On :

ನಾಲ್ಕನೆ ಬಾರಿ ಪಟ್ಟದ ಕತ್ತಿ ಸಿಂಹಾಸನದಲ್ಲಿ
ಮೂರು ಬಾರಿ ನಡೆದಿದೆ ಗೃಹಪೂಜೆ

ಮೈಸೂರು:
ಪಟ್ಟಾಭಿಷಿಕ್ತ ರಾಜನಿಲ್ಲದೆ ದಸರಾ ನಡೆಯುತ್ತಿರುವುದು ಇದು ಏಳನೇ ಬಾರಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾದ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ದಸರಾ ಮಹೋತ್ಸವ ಇದು.

ಪಟ್ಟದ ಕತ್ತಿ ಯೇ ರಾಜನ ಸ್ಥಾನದಲ್ಲಿ ಇರುತ್ತದೆ. 1970ರಲ್ಲಿ ಅಂದಿನ ಸರ್ಕಾರ ಮಹಾರಾಜ ಜಯಚಾರಾಜ ಒಡೆಯರ್ ಅವರಿಗಿದ್ದ ಅಧಿಕಾರ ಮೊಟಕುಗೊಳಿಸಿತ್ತು. ಇದರಿಂದ ಬೇಸತ್ತ ಒೆಯರ್ ಅವರು 1971ರಲ್ಲಿ ದಸರಾ ಮಹೋತ್ಸವದಲ್ಲಿ ಖಾಸಗಿ ದರ್ಬಾರ್ ನಡೆಸದಿರಲು ತೀರ್ಮಾನಿಸಿದರು. ಆದರೆ ಯದುವಂಶದ ನಿಯಮದಂತೆ ಸಿಂಹಾಸನವನ್ನು ಖಾಲಿ ಬಿಡುವಂತೆ ಇರಲಿಲ್ಲ. ಈ ಹಿನ್ನಲೆಯಲ್ಲಿ ಪಟ್ಟದ ಕತ್ತಿಯನ್ನು ಸಿಂಹಾಸನದ ಮೇಲಿರಿಸಿ ದರ್ಬಾರ್ ನಡೆಸಲಾಯಿತು. ಅಷ್ಟೊತ್ತಿಗಾಗಲೇ ಅವರ ಪುತ್ರ ಅಂದರೆ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್‌ಗೆ ಯುವರಾಜ ಪಟ್ಟಾಭಿಷೇಕ ನಡೆದಿತ್ತು.

1971ರಿಂದ 1973ರವರೆಗೆ ಮೂರು ವರ್ಷಕಾಲ ಸಿಂಹಾಸನದ ಮೇಲೆ ಕತ್ತಿಯನ್ನು ಇರಿಸಿ ಖಾಸಗಿ ದರ್ಬಾರ್ ನಡೆಸಲಾಯಿತು. ಜಯಚಾಮರಾಜ ಒಡೆಯರ್ ನಿಧನರಾದ ಬಳಿಕ, ಯುವರಾಜನಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಪ್ರತಿ ವರ್ಷ ಖಾಸಗಿ ದರ್ಬಾರ್ ನಡೆಸಿದರು.

ಟಿಪ್ಪು ಕಾಲದಲ್ಲೂ ಆಗಿತ್ತು
ಇದಕ್ಕೂ ಮೊದಲು ಅಂದರೆ ಟಿಪ್ಪು ಸುಲ್ತಾನ್ ಆಳ್ವಿಕೆಯ ಅವಧಿಯಲ್ಲಿ ಮೈಸೂರು ಸಂಸ್ಥಾನದಲ್ಲಿದ್ದ ಖಾಸ ಚಾಮರಾಜ ಒಡೆಯರ್ ಮತ್ತು ಅವರ ಪತ್ನಿ ಕೆಂಪನಂಜಮ್ಮಣ್ಣಿ ಅವರನ್ನು ಹೈದರ್ ಮತ್ತು ಟಿಪ್ಪು ಸುಲ್ತಾನ್ ಗೃಹ ಬಂಧನದಲ್ಲಿಟ್ಟಿದ್ದರು. ಪರಂಪರಾನುಗತವಾಗಿ ಬಂದಿದ್ದ ಸಿಂಹಾಸನವನ್ನು ತಮ್ಮ ಅರಮನೆಯ ನೆಲಮಾಳಿಗೆಯಲ್ಲಿ ಬಚ್ಚಿಟ್ಟಿದ್ದರು. ಇವರಿಗೆ ಜನಿಸಿದ ಮಗು ಮುಮ್ಮಡಿ ಕೃಷ್ಣರಾಜ ಒಡೆಯರ್.

ಈ ನಡುವೆ ಆಂದರೆ 1796ರಲ್ಲಿ ಖಾಸ ಚಾಮರಾಜ ಒಡೆಯರ್ ನಿಧನರಾದರು. ಆ ನಂತರವೂ ಕೆಂಪನಂಜಮ್ಮಣ್ಣಿ ಅವರು ತನ್ನ ಚಿಕ್ಕ ಮಗುವಿನ ಜೊತೆ ಗೃಹಬಂಧನದಲ್ಲಿಯೇ ಇದ್ದರು. ಈ ಅವಧಿಯಲ್ಲಿ ತಾವಿದ್ದ ಕಿರಿದಾದ ಕೋಣೆಯಲ್ಲಿಯೇ ನವರಾತ್ರಿಯ ಪೂಜೆಗಳನ್ನು ನಡೆಸಿದ್ದರು. 1799ರಲ್ಲಿ ಟಿಪ್ಪು ಮೃತಪಟ್ಟ ಬಳಿಕ ಕೆಂಪನಂಜಮ್ಮಣ್ಣಿ ಅವರು ತಮ್ಮ ಮಗನನ್ನು ಮೈಸೂರಿಗೆ ಕರೆತಂದು ಈಗಿನ ಅರಮನೆ ಆವರಣದಲ್ಲಿರುವ ಲಕ್ಷ್ಮೀರಮಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಪ್ಪರ ಹಾಕಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಕಟ್ಟಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.