ಕೃಷ್ಣನ ಪ್ರಸಾದ ಭಕ್ತರ ಕೈಗೆ!
ಮಾಧ್ವ ಪರಂಪರೆಯಂತೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಆರಂಭವಾಗಿರುವ ಶ್ರೀಕೃಷ್ಣ ಜಯಂತ್ಯುತ್ಸವದ...

ಉಡುಪಿ: ಮಾಧ್ವ ಪರಂಪರೆಯಂತೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಆರಂಭವಾಗಿರುವ ಶ್ರೀಕೃಷ್ಣ ಜಯಂತ್ಯುತ್ಸವದ ಸಂದಂರ್ಭದಲ್ಲಿ ಪರ್ಯಾಯ ಕಾಣಿಕಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಬುಧವಾರ ಕೃಷ್ಣ ಮಠದ ರಥಬೀದಿಯಲ್ಲಿ ನಡೆಯುವ ಶ್ರೀಕೃಷ್ಣ ಲೀಲೋತ್ಸವದ ಸಂದಂರ್ಭ ಭಕ್ತರ ಮೇಲೆ ಪ್ರಸಾದ ಎಸೆಯುವ ಸಂಪ್ರದಾಯವನ್ನು ಅವರು ಕೈಬಿಟ್ಟಿದ್ದಾರೆ.
ಏನಿದು ಹಿನ್ನೆಲೆ?:
ಉಡುಪಿ ರಥಬೀದಿಯಲ್ಲಿ ನಡೆಯುವ ರಥೋತ್ಸವಗಳ ಸಂದರ್ಭದಲ್ಲಿ ಅದರಲ್ಲೂ ಶ್ರೀಕೃಷ್ಣಲೀಲೋತ್ಸವದ ಸಂದರ್ಭದಲ್ಲಿ ಅಷ್ಟಮಠದ ಶ್ರೀಗಳು ರಥಬೀದಿಯಲ್ಲಿ ಅಲ್ಲಲ್ಲಿ ಹಾಕಿರುವ ವೇದಿಕೆಯಲ್ಲಿ ನಿಂತು ಕೃಷ್ಣನ ಪ್ರಸಾದದ ರೂಪದಲ್ಲಿ ಬುಟ್ಟಿಗಟ್ಟಲೆ ಉಂಡೆ(ವಿವಿಧ ಬಗೆಯ ಲಡ್ಡುಗಳು), ಚಕ್ಕುಲಿ, ಹಣ್ಮು, ತೆಂಗಿನಕಾಯಿ, ನಾಣ್ಯ ಇತ್ಯಾದಿಗಳನ್ನು ಸೇರುವ ಭಕ್ತರ ಮೇಲೆ ಎಸೆಯುವ ಕ್ರಮ ಇದೆ.
ಇದನ್ನು ಹಿಡಿಯಲು ಭಕ್ತರು ನಾಮೇಲು ತಾಮೇಲು ಎಂದು ಪೈಪೋಟಿ ನಡೆಸುತ್ತಾರೆ. ಕೈಯಲ್ಲಿರುವ ಪ್ರಸಾದ ಎಸೆಯುವಂತೆ ಮಾಡಿ ಎಸೆಯದೆ ಭಕ್ತರನ್ನು ಬೇಸ್ತು ಬೀಳಿಸಿ, ಒಂದಷ್ಟು ಆಸೆ ತೋರಿಸಿ ಕೊನೆಗೆ ಎಸೆಯುತ್ತಾರೆ.
ಹೀಗೆ ಎಸೆದ ತೆಂಗಿನ ಕಾಯಿ, ಹಣ್ಣು ಅದೃಷ್ಠವಂತ ಭಕ್ತರ ಕೈಗೆ ಸಿಗುತ್ತವೆ. ಆದರೆ ಭಕ್ತರ ಮತ್ತು ಶ್ರೀಗಳ ಮೇಲಾಟದಿಂದಾಗಿ ಬಹುಪಾಲು ಉಂಡೆ-ಚಕ್ಕುಲಿ ಪ್ರಸಾದ ಭಕ್ತರ ಕೈಗೆ ಸಿಗುವುದೇ ಇಲ್ಲ. ಅದು ಭಕ್ತರ ಕಾಲ ಕೆಳಗೆ ಬಿದ್ದು ವ್ಯರ್ಥವಾಗುವುದೇ ಹೆಚ್ಚು. ಈ ರೀತಿ ಪ್ರಸಾದವನ್ನು ವ್ಯರ್ಥ ಮಾಡುವ ಬಗ್ಗೆ ಅನೇಕ ಬಾರಿ ಆಕ್ಷೇಪಗಳೂ ವ್ಯಕ್ತವಾಗಿದ್ದವು.
ಈ ಹಿನ್ನಲೆಯಲ್ಲಿ ಕಾಣಿಯೂರು ಶ್ರೀಗಳು ಈ ಪ್ರಸಾದವನ್ನು ಈ ರೀತಿ ವ್ಯರ್ಥ ಮಾಡುವದಕ್ಕಿಂತ ಪೊಟ್ಟಣ ಕಟ್ಟಿ ಭಕ್ತರ ಕೈಗೆ ನೀಡುವುದಕ್ಕೆ ನಿರ್ಧರಿಸಿದ್ದರಾ.
ಇದು ನೈವೈದ್ಯ ಪ್ರಸದಾ: ಈ ಪ್ರಸಾದಕ್ಕೆ ವಿಶೇಷ ಮಹತ್ವ ಇದೆ. ಕಾರಣ ಇದು ಹಿಂದಿನ ದಿನ ಕೃಷ್ಣ ಅವತಾರ ಎತ್ತಿದ ಗಳಿಗೆಯಲ್ಲಿ ನೈವೇದ್ಯ ಮಾಡಿದ ಪ್ರಸಾದವಾಗಿರುತ್ತದೆ. ಈ ಬಾರಿ 1 ಲಕ್ಷ ಜನರಿಗೆ ಪ್ರಸಾದ ವಿತರಿಸಲು ಕಾಣಿಯೂರು ಶ್ರೀಗಳು ಸಿದ್ಧತೆ ನಡೆಸಿದ್ದಾರೆ.
ಉಂಡೆ- ಚಕ್ಕುಲಿಗಳನ್ನು ಕಾಗದದ ಪೊಟ್ಟಣದಲ್ಲಿ ತುಂಬಿ, ರಥಬೀದಿಯನ್ನು ಪ್ರವೇಶಿಸುವ 4 ಮಹಾದ್ವಾರಗಳಲ್ಲಿ ಭಕ್ತರು ಹೊರಗೆ ಹೋಗುವಾಗ ವಿತರಿಸಲು ಸಿದ್ಥತೆ ನಡೆಸಿದ್ದಾರೆ. ಕೃಷ್ಣನಿಗೆ 9 ಬಗೆಯ ಲಡ್ಡುಗಳು ಮತ್ತು ಚಕ್ಕುಲಿಯ ನೈವೇದ್ಯ ಆಗುತ್ತದೆ. ಅದರಲ್ಲಿ ಭಕ್ತರಿಗೆ ನೀಡಲು 3 ಬಗೆಯ ಲಡ್ಡುಗಳನ್ನು ತಲಾ 1 ಲಕ್ಷದಂತೆ 3 ಲಕ್ಷ ಲಡ್ಡುಗಳನ್ನು, ಜೊತೆಗೆ 1 ಲಕ್ಷ ಚಕ್ಕುಲಿಗಳನ್ನು ಸಿದ್ಧಪಡಿಸಲಾಗಿದೆ.
ಆದರೆ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಒಂದೆರಡು ಹಿಡಿ ಪ್ರಸಾದವನ್ನು ವೇದಿಕೆಯಿಂದ ಭಕ್ತರಿಗೆ ಎರಚಲಾಗುವುದು ಮತ್ತು ಉಡುಪಿಯಲ್ಲಿರುವ ಎಲ್ಲಾ ಅಕ್ಷರದಾಸೋಹದ ಶಾಲೆಗಳಿಗೂ ಈ ಪ್ರಸಾದ ಕಳುಹಿಸಿಕೊಡಲಾಗುವುದು ಎಂದು ಶ್ರೀಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


