ಶೆಟ್ಟರ್ ಕೊರಳಿಗೆ ಭೂ ಹಗರಣ
ಮಠದ ಭೂಮಿ ಖರೀದಿ ಸಂಬಂಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರು.63 ಕೋಟಿ ಹಗರಣ ನಡೆಸಿದ್ದಾರೆ...

ಬೆಂಗಳೂರು: ಮಠದ ಭೂಮಿ ಖರೀದಿ ಸಂಬಂಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರು.63 ಕೋಟಿ ಹಗರಣ ನಡೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಆರೋಪಿಸಿದ್ದಾರೆ.
ಕೆಐಎಡಿಬಿ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಗಾಂಧಿನಗರದ ಆಚಾರ್ಯ ತುಳಸಿ ಮಾರ್ಗದ ಜೋಡಿ ರಸ್ತೆಯಲ್ಲಿರುವ ವಿದ್ಯಾಪೀಠದ 28,500 ಚದರಡಿ ಜಾಗವನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಖರೀದಿಸಿದೆ.
ಸೆ.6ರಂದು ರು.63,55,50,000ಕ್ಕೆ ಭೂಮಿ ಖರೀದಿಸುವ ಸಂಬಂಧ ಕಾನೂನು ಸಲಹೆ ಪಡೆಯದೇ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಇದಾದ ವಾರಗಳ ನಂತರ ಸೆ.13ರಂದು ಕಾನಕೂನು ಸಲಹೆ ಕೇಳುತ್ತದೆ.
ಸೆ.15ರಂದು ಸಲಹೆ ನೀಡಿರುವ ಇಲಾಖಾ ವರದಿಯಲ್ಲಿ ಮಠದ ಭೂಮಿ ಖರೀದಿ ಬದಲಿಗೆ ಅದನ್ನು ವಶಕ್ಕೆ ಪಡೆಯುವ ಅದಿಕಾರ ರಾಜ್ಯ ಸರ್ಕಾರಕ್ಕಿದೆ. ಹೀಗೆ ಮಾಡುವುದರಿಂದ ಮುದ್ರಣಾ ಶುಲ್ಕವೂ ಉಳಿತಾಯವಾಗುತ್ತದೆ ಎಂಬ ಉಪಯುಕ್ತ ಸಲಹೆ ನೀಡುತ್ತದೆ.
ಆದರೆ, ಇದನ್ನು ಪರಿಗಣಿಸದ ರಾಜ್ಯ ಸರ್ಕಾರ ಅ.22ರಂದು ಚಿತ್ರದುರ್ಗದ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳ ಹೆಸರಿನಲ್ಲಿ ರು.29,19,41,000 ಡಿಡಿ ನೀಡುತ್ತದೆ. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದಿರುವ ಈ ಅಕ್ರಮದ ವಿರುದ್ಧ ಸಿಐಡಿ ಅಥವಾ ಸಿಒಡಿ ತನಿಖೆಯಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಒತ್ತಾಯಿಸಿದರು.
ರಾಜ್ಯ ಸರ್ಕಾರ ಯಾವುದೇ ಜಾಗವನ್ನು ಖರೀದಿಸುವ ಮುನ್ನ ಕಾನೂನು ಸಲಹೆ ಮೊದಲೇ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ನಂತರ ಸಲಹೆ ಪಡೆದ ಹಿಂದಿನ ಉದ್ದೇಶವೇನು ಹಾಗೂ ಜಾಗ ಖರೀದಿಸಲು ಆತುರದ ನಿರ್ಧಾರ ಕೈಗೊಳ್ಳಲು ಕಾರಣವೇನು, ಭೂಮಿ ಖರೀದಿ ಬದಲಿಗೆ ವಶಕ್ಕೆ ಪಡೆಯುವ ಅವಕಾಶವಿದ್ದರೂ ಹಾಗೆ ಮಾಡದಿರಲು ಕಾರಣವೇನು? ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಹಣ ಸಂದಾಯ ಮಾಡಿದ್ದೇಕೆ, ಬ್ಯಾಂಕಿನಲ್ಲಿ ಮಠದ ಆಸ್ತಿ ಮೇಲೆ ಸಾಲ ಪಡೆಯಲಾಗಿತ್ತೆ?
ಹಾಗಿದ್ದರೆ, ಯಾರ ಸಾಲ ತೀರಿಸಲು ಬ್ಯಾಂಕಿಗೆ ಹಣ ನೀಡಲಾಯಿತು ಎಂಬುದರ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


