ಜಿಲ್ಲಾ ಸುದ್ದಿ

ಕೋಲಾರ ಜಿಲ್ಲಾಧಿಕಾರಿ ವರ್ಗ- ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಕೋಲಾರ ಜಿಲ್ಲಾಧಿಕಾರಿ ವರ್ಗ- ಬಂದ್‌ಗೆ ಉತ್ತಮ ಪ್ರತಿಕ್ರಿಯೆ
Published On :

ಕೋಲಾರ: ಜಿಲ್ಲಾಧಿಕಾರಿ ಡಿ.ಕೆ.ರವಿ ವರ್ಗಾವಣೆ ಖಂಡಿಸಿ ಜಿಲ್ಲಾ ಸಮಾನ ಮನಸ್ಥರ ವೇದಿಕೆ ನೀಡಿದ್ದ ಕರೆ ಮೇರೆಗೆ ಗುರುವಾರ ನಡೆದ ಬಂದ್‌ಗೆ ಕೋಲಾರ, ಮುಳಬಾಗಲು ಹಾಗೂ ಶ್ರೀನಿವಾಸಪುರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂಗಾರಪೇಟೆಯಲ್ಲಿ ವಿವಿಧ ಸಂಘಟನೆಗಳು ಸಭೆ ಸೇರಿ ಶುಕ್ರವಾರ ಬಂದ್ ಆಚರಿಸಲು ನಿರ್ಧರಿಸಿವೆ. ಮಾಲೂರು ಮತ್ತು ಕೆಜಿಎಫ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ದತೆಗಳ ಕೊರತೆಯಿಂದ ಸಾಧ್ಯವಾಗಿಲ್ಲ. ಕೋಲಾರದಲ್ಲಿ ಭಾಗಶಹಃ ಸ್ಥಗಿತಗೊಂಡಿತ್ತು. ಡಿಸಿ ಕಚೇರಿ ವೃತ್ತದಲ್ಲಿ ಸರ್ಕಾರದ ಪ್ರತಿ ಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು. ಡಿಸಿ ವರ್ಗಾವಣೆಗೆ ಜಿಲ್ಲೆಯ ಪ್ರತಿನಿಧಿಗಳೇ ಕಾರಣವೆಂದು ಆರೋಪಿಸಿ ಧಿಕ್ಕಾರ ಕೂಗಿದರು.  ಮೂರು ಬಸ್ಸುಗಳಿಗೆ ಕಲ್ಲು ತೂರಿದ್ದರಿಂದ ವಾಹನಗಳು ಜಖಂಗೊಂಡವು. ಉಳಿದಂತೆ ಬಂದ್ ಶಾಂತಿಯುತವಾಗಿತ್ತು. ಪ್ರತಿಭಟನಾಕಾರರು  ಸಂಸದ ಕೆ.ಎಚ್.ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು.

ಪ್ಲೀಸ್ ನಾನು ಹೋಗಲು ಅವಕಾಶ ಮಾಡಿಕೊಡಿ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಋಣಿ. ಪ್ರತಿಭಟನೆಗಳನ್ನು ಮಾಡಿ ನನ್ನ ಭವಿಷ್ಯಕ್ಕೆ ತೊಂದರೆ ಮಾಡಬೇಡಿ- ಡಿ.ಕೆ.ರವಿ, ಜಿಲ್ಲಾಧಿಕಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.