ಜಿಲ್ಲಾ ಸುದ್ದಿ

ಆರ್ಕಿಡ್ಸ್ ಶಾಲೆ ವಿರುದ್ದ ಕ್ರಮ?

ಕಾನೂನು ಪ್ರಕಾರ ಹೋದರೆ ಆರ್ಕಿಡ್ಸ್ ಶಾಲೆಯನ್ನು ಮುಚ್ಚುವುದು ಅನಿವಾರ್ಯ. ಆದಾಗ್ಯೂ ಮಾನ್ಯತೆಯಿಲ್ಲದೇ ನಡೆಯುತ್ತಿರುವ ...

ಆರ್ಕಿಡ್ಸ್ ಶಾಲೆ ವಿರುದ್ದ ಕ್ರಮ?
Published On :

ಬೆಂಗಳೂರು: ಕಾನೂನು ಪ್ರಕಾರ ಹೋದರೆ ಆರ್ಕಿಡ್ಸ್ ಶಾಲೆಯನ್ನು ಮುಚ್ಚುವುದು ಅನಿವಾರ್ಯ. ಆದಾಗ್ಯೂ ಮಾನ್ಯತೆಯಿಲ್ಲದೇ ನಡೆಯುತ್ತಿರುವ ಶಾಲೆಗಳ ಮೇಲಿನ ಕ್ರಮದ ಕುರಿತಂತೆ ಇನ್ನೆರಡು ದಿನದಲ್ಲಿ ಕಾನೂನು ಇಲಾಖೆ ಸಲಹೆ ಪಡೆದು ಮುಂದುವರೆಯುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯಿದೆ ಹಾಗೂ ಕರ್ನಾಟಕ ಶಿಕ್ಷಣ ಕಯಿದೆಗೆ ವಿರುದ್ದವಾಗಿ ಆರ್ಕಿಡ್ಸ್ ಶಾಲೆ ನಡೆಯುತ್ತಿದೆ. ಈ ಶಾಲೆ ವಿರುದ್ದ ತೆಗೆದುಕೊಳ್ಳುವ ಕ್ರಮ ಇತರ ಅಕ್ರಮ ಶಾಲೆಗಳಿಗೂ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಸಲಹೆ ಪಡೆದು ಮುಂದುವರೆಯುತ್ತೇವೆ. ಇದರಿಂದ ಆಗಲಿರುವ ತೊಂದರೆ ಎದುರಿಸಲು ರಾಜ್ಯ ಸರ್ಕಾರ ಸಿದ್ದವಾಗಿದೆ ಎಂದು ಅವರು ವಿಧಾನಸೌಧದಲ್ಲಿ ಸ್ಪಷ್ಟಪಡಿಸಿದ್ದಾರೆ. ಆರ್ಕಿಡ್ಸ್ ಶಾಲೆಗೆ ಸಂಬಂಧಿಸಿದಂತೆ ಅಕ್ರಮ ನಡೆದಿರುವುದು ಸಾಬೀತಾಗಿದೆ. ಯಾವುದೇ ಮಾನ್ಯತೆಯಿಲ್ಲದೇ ಪೂರ್ವ ಪ್ರಾಥಮಿಕ ಹಾಗೂ 6, 7ನೇ ತರಗತಿ ನಡೆಸಲಾಗುತ್ತಿದೆ. ಇನ್ನು 1 ರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅನುಮತಿ ಪಡೆದು ಸಿಬಿಎಸ್‌ಇ ಪಠ್ಯಕ್ರಮದ ಶಿಕ್ಷಣ ನೀಡಲಾಗುತ್ತಿದೆ.
ಕಾನೂನಿನ ಪ್ರಕಾರ ಶಾಲೆ ನಡೆಸಲು ಅವಕಾಶವಿಲ್ಲ. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಮತಿ ನೀಡುವಂತೆ ಪಾಲಕರು ಮನವಿ ಮಾಡಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಇನ್ನೆರಡು ದಿನದಲ್ಲಿ ಸರ್ಕಾರ ಪ್ರಕಟಿಸಲಿದೆ. ಒಂದೊಮ್ಮೆ ಸರ್ಕಾರದ ನಿರ್ಧಾರ ಆಡಳಿತ ಮಂಡಳಿಗೆ ವಿರುದ್ದವಾಗಿದ್ದರೆ ಎಲ್ಲ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ಕಿಮ್ಮನೆ ಹೇಳಿದರು.

ಶಾಲಾ ಆಡಳಿತ ಮಂಡಳಿ ಕಪ್ಪುಪಟ್ಟಿಗೆ:
ಸುಳ್ಳು ಮಾನ್ಯತೆಯ ಹಾಗೂ ವಿದ್ಯಾರ್ಥಿ, ಪಾಲಕರಿಗೆ ಮೋಸ ಮಾಡುವ ಶಿಕ್ಷಣ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ. ಇದಲ್ಲದೇ ಕ್ರಮಿನಲ್ ಮೊಕದ್ದಮೆ ಹೂಡಿ ಆಡಳಿತ ಮಂಡಳಿಗಳ ವಿರುದ್ದ ಸರ್ಕಾರ ಚಾಟಿ ಬೀಸಲಿದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ವಿಚಾರಕ್ಕೆ ಸಂಬಂಧಿ ನನ್ನ ಮೇಲೆ ಯಾರಿಂದಲೂ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಕಿಮ್ಮನೆ ಹೇಳಿದರು. ಬಿಇಒಗಳು ನೀಡುವ ವರದಿ ಸರಿಯಿಲ್ಲ ಎಂದು ತಿಳಿದಬಂದರೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಿ ಈ ಅಕ್ರಕ್ಕೆ ತೆರೆ ಎಳೆಯುತ್ತೇವೆ. ಬಿಇಒಗಳಿಗೆ 20 ದಿನದ ಗಡುವು ನೀಡಲಾಗಿದೆ ಎಂದು ಅವರು ತಿಳಿಸಿದರು.

ನನ್ನಿಂದ ಯಾವುದೇ ಕಡತ ಹೋಗಿಲ್ಲ
ಆರ್ಕಿಡ್ಸ್ ಹಾಗೂ ವಿಬ್‌ಗ್ಯೊರ್‌ನಂಥ ಬೇರೆ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡುವಲ್ಲಿ ಶಿಕ್ಷಣ ಇಲಾಖೆಯ ಹಿರಿಯರ ಪಾತ್ರವಿರುವುದಿಲ್ಲವೇ ಎಂಬ ಪ್ರಶ್ನೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಪ್ರತಿಕ್ರಿಯಿಸಿದ ಸಚಿವ ಕಿಮ್ಮನೆ, ನನ್ನಿಂದ ಯಾವುದೇ ಇಂತಹ ಕಡತ ಹೋಗಿಲ್ಲ. ಇಲಾಖೆಯಲ್ಲಿ ಅಕ್ರಮವಾಗಿಲ್ಲ ಎಂದು ಉತ್ತರಿಸಿದರು..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.