ಬೆಂಗಳೂರು ವಿವಿ: 3 ವಿಭಾಗಗಳ ವಿಂಗಡಣೆಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚನೆ
3 ವಿಭಾಗಗಳಾಗಿ ವಿಂಗಡಿಸಲು ಬೆಂ.ವಿವಿ ವಿಸಿ ಪ್ರೊ.ಬಿ.ತಿಮ್ಮೇಗೌಡ ವಿರೋಧ...

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವನ್ನು 3 ವಿಭಾಗಗಳಾಗಿ ವಿಭಜನೆ ಮಾಡಲು ಅಂತಿಮ ವರದಿ ನೀಡುವಂತೆ ವಿವಿ ವಿಭಜನೆ ಅಧ್ಯಯನ ಸಮಿತಿಗೆ ಸರ್ಕಾರ ಸೂಚನೆ ನೀಡಿದೆ.
ಹಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯ ವಿಂಗಡನೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸರ್ಕಾರ ಸೂಚನೆ ಹೊರಡಿಸಿದೆ.
ಬೆಂಗಳೂರು ವಿವಿಯನ್ನು 3 ವಿಭಾಗಗಳಾಗಿ ವಿಂಗಡಿಸಲು ವಿಶ್ವವಿದ್ಯಾಲಯದ ವಿಸಿ ಪ್ರೊ.ಬಿ.ತಿಮ್ಮೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವಿವಿ ವಿಂಗಡನೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆ ಅಧ್ಯಯನ ಸಮಿತಿಯೊಂದನ್ನು ರಚಿಸಿ, ವರದಿ ನೀಡುವಂತೆ ಸೂಚನೆ ನೀಡಿತ್ತು. ಬೆಂಗಳೂರು ವಿವಿ ಅಧ್ಯಯನ ಸಮಿತಿ ಬೆಂಗಳೂರು ವಿವಿಯನ್ನು 5 ವಿಭಾಗಳಾಗಿ ವಿಂಗಡಿಸುವಂತೆ ವರದಿಯನ್ನು ಸಿದ್ದಪಡಿಸಿತ್ತು.
ಇದನ್ನು ಪರಿಶೀಲಿಸಿದ ರಾಜ್ಯ ಸರ್ಕಾರ, ಅಧ್ಯಯನ ಸಮಿತಿಯ 5 ವಿಭಾಗಳಾಗಿ ವಿಂಗಡಿಸುವ ವರದಿಯನ್ನು ತಿರಸ್ಕರಿಸಿ, ಬೆಂಗಳೂರು ವಿವಿಯನ್ನು 3 ವಿಭಾಗಗಳಾಗಿ ವಿಭಜನೆ ಮಾಡಲು ಅಂತಿಮ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಅಲ್ಲದೆ ಬೆಂಗಳೂರು ವಿವಿ ವಿಭಜನೆಯ ಅಧ್ಯಯನ ಸಮಿತಿಯ ವಿಶೇಷ ಅಧಿಕಾರಿ ಡಾ.ಕೆ.ಆರ್ ವೇಣುಗೋಪಾಲ್ ಅವರಿಗೆ ಈ ಕುರಿತು ಅಂತಿಮ ವರದಿ ನೀಡುವಂತೆ ತಿಳಿಸಿದೆ.
ಹೊಸಕೋಟೆಯ ಡಿವಿಜಿ ಜ್ಞಾನವಾಹಿನಿ, ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯ ಹಾಗೂ ಜ್ಞಾನಭಾರತಿ ನೂತನವಾಗಿ ವಿಭಜನೆಗೊಳ್ಳಲಿರುವ ವಿಶ್ವವಿದ್ಯಾಲಯಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


