ವಾಟ್ಸ್ ಆ್ಯಪ್‌ಗೂ ಗವಿಮಠ ಜಾತ್ರೆ
ಜನವರಿ 7 ರಿಂದ ಮೂರು ದಿನ ನಡೆಯುವ ಈ ಬಾರಿಯ ಗವಿಮಠ ಜಾತ್ರೆಯನ್ನು ವ್ಯಾಟ್ಸ್ ಆಪ್‌ನಲ್ಲೇ ವೀಕ್ಷಿಸಬಹುದು...

ಕೊಪ್ಪಳ: ಭಕ್ತರ ಅನುಕೂಲಕ್ಕಾಗಿ ತಾಂತ್ರಿಕತೆ ಮೈಗೂಡಿಸಿಕೊಂಡ ಜಾತ್ರೆ.
ಶುರುವಾಗಿದೆ ಮೊಬೈಲ್ ಸಂಖ್ಯೆ ನೋಂದಣಿ.
500 ನೋಂದಣಿ: ವ್ಯಾಟ್ಸ್ ಆ್ಯಪ್ ನೋಂದಣಿಗೆ ಅವಕಾಶ ನೀಡುತ್ತಿದ್ದಂತೆಯೇ ಮೊದಲ ದಿನವೇ 500 ಭಕ್ತರು ತಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ದಾಖಲಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಗವಿಮಠ ಜಾತ್ರೆಯ ಮಾಹಿತಿ ರವಾನೆಯಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ಅನೇಕ ತಾಂತ್ರಿಕತೆಗಳನ್ನು ಮೈಗೂಡಿಸಿಕೊಳ್ಳುತ್ತ ವಿಶ್ವವ್ಯಾಪಿಯಾಗುತ್ತಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಮಾಹಿತಿಗೆ ಈ ಬಾರಿ ತಡಕಾಡುವಂತಿಲ್ಲ. ನಿಮ್ಮ ವ್ಯಾಟ್ಸ್ ಆ್ಯಪ್‌ನಲ್ಲಿಯೇ ಎಲ್ಲ ಮಾಹಿತಿ ಲಭ್ಯವಾಗಲಿದೆ. ಜನವರಿ 7 ರಿಂದ ಮೂರು ದಿನ ನಡೆಯುವ ಈ ಬಾರಿಯ ಗವಿಮಠ ಜಾತ್ರೆಯನ್ನು ವ್ಯಾಟ್ಸ್ ಆಪ್‌ನಲ್ಲೇ ವೀಕ್ಷಿಸಬಹುದು.
ಕಳೆದ ಸಲ ಎಸ್ಸೆಮ್ಮೆಸ್ ಮೂಲಕ ಜಾತ್ರೆಯ ಮಾಹಿತಿ ನೀಡುವುದು, ಧ್ವನಿ ಕರೆ ನೀಡುವುದು ಹಾಗೂ ಅಂತರ್ಜಾಲದಲ್ಲಿ ನೇರವಾಗಿ ಜಾತ್ರೆ ವೀಕ್ಷಣೆ ಮುಂತಾದ ತಂತ್ರಜ್ಞಾನ ಅಳವಡಿಸಲಾಗಿತ್ತು. ಈಗ ವ್ಯಾಟ್ಸ್ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಿರುವುದರಿಂದ ಇದನ್ನೂ ಬಳಕೆ ಮಾಡಿಕೊಳ್ಳಲು ಮಠ ತೀರ್ಮಾನಿಸಿದೆ. ಅನುಷ್ಠಾನಕ್ಕೂ ತಂದಿದೆ.
ನಿಮ್ಮ ವ್ಯಾಟ್ಸ್ ಆ್ಯಪ್ ಮೊಬೈಲ್ ಸಂಖ್ಯೆಯಿಂದ ಗವಿಮಠದ ವ್ಯಾಟ್ಸ್ ಆ್ಯಪ್ ಸಂಖ್ಯೆ 9980853576ಗೆ ಹೆಸರು ಮತ್ತಿತರ ವಿವರಗಳುಳ್ಳ ಎಸ್ಸೆಮ್ಮೆಸ್ ಕಳುಹಿಸಿದರೆ, ವಿನಂತಿ ತಾನಾಗಿ ದಾಖಲಾಗುತ್ತದೆ. ಜಾತ್ರೆಯ ಎಲ್ಲ ಮಾಹಿತಿಗಳು ನಿಮ್ಮ ವ್ಯಾಟ್ಸ್ ಆ್ಯಪ್‌ಗೆ ಅಪ್‌ಲೋಡ್ ಆಗುತ್ತದೆ. ಫೋಟೊ, ವಿಡಿಯೋ ಹಾಗೂ ಶ್ರೀಗಳ ಸಂದೇಶಗಳೂ ನಿತ್ಯ ನಿಮ್ಮ ಕೈ ಸೇರುತ್ತದೆ.
ಭಕ್ತರಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ವಾಟ್ಸ್ ಆ್ಯಪ್ ಅಳವಡಿಸಿಕೊಳ್ಳಲಾಗಿದೆ. ಮೊಬೈಲ್ ಸಂಖ್ಯೆ ದಾಖಲಿಸಿಕೊಂಡ ಪ್ರತಿಯೊಬ್ಬರಿಗೂ ಜಾತ್ರೆಯ ಮಾಹಿತಿ ಅಂಗೈಯಲ್ಲಿಯೇ ಲಭ್ಯವಾಗುತ್ತದೆ.
-ಮಂಜುನಾಥ ಉಲ್ಲತ್ತಿ, ಆಯೋಜಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


