ಯುವತಿ ಫೋಟೋ ತೆಗೆದ ಕೆಎಫ್‌ಸಿ ಮ್ಯಾನೇಜರ್ ಸೆರೆ
ಕೆಎಫ್‌ಸಿ ರೆಸ್ಟೋರೆಂಟ್‌ನಲ್ಲಿ ಯುವತಿಯ ಆಕ್ಷೇಪಾರ್ಹ ಫೋಟೋ ಕ್ಲಿಕ್ಕಿಸಿದ ಆರೋಪದ ಮೇಲೆ ಮ್ಯಾನೇಜರ್ ವಿಕಾಸ್ (28) ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಹುಳಿಮಾವು ಕೆಂಟಕಿ ಫ್ರೈಡ್ ಚಿಕನ್ (ಕೆಎಫ್‌ಸಿ) ರೆಸ್ಟೋರೆಂಟ್‌ನಲ್ಲಿ ಯುವತಿಯ ಆಕ್ಷೇಪಾರ್ಹ ಫೋಟೋ ಕ್ಲಿಕ್ಕಿಸಿದ ಆರೋಪದ ಮೇಲೆ ಮ್ಯಾನೇಜರ್ ವಿಕಾಸ್ (28) ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ನ.2ರಂದು ಅಸ್ಸಾಂ ಮೂಲದ 22 ವರ್ಷದ ಯುವತಿ ಮೀನಾಕ್ಷಿ ಮಾಲ್‌ನಲ್ಲಿರುವ ಕೆಎಫ್‌ಸಿಗೆ ತನ್ನ ಸ್ನೇಹಿತನೊಂದಿಗೆ ತೆರಳಿದ್ದಳು. ಅವರಿಬ್ಬರು ಅಹಾರ ಸೇವಿಸುತ್ತಿದ್ದಾಗ ಅಲ್ಲಿನ ಮ್ಯಾನೇಜರ್ ವಿಕಾಸ್, ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುತ್ತಿರುವುದನ್ನು ಅವರು ಗಮನಿಸಿದ್ದರು. ಕೂಡಲೇ ಮ್ಯಾನೇಜರ್ ಬಳಿ ತೆರಳಿದ ಯುವತಿ ಫೋಟೋ ತೆಗೆಯುತ್ತಿರುವುದನ್ನು ಆಕ್ಷೇಪಿಸಿ, ಮೊಬೈಲ್ ಫೋನ್ ತೋರಿಸುವಂತೆ ಕೇಳಿದ್ದಳು. ಫೋಟೋ ತೋರಿಸಲು ವಿಕಾಸ್ ನಿರಾಕರಿಸಿದ್ದ. ಈ ನಡೆಯಿಂದ ಆಕ್ರೋಶಗೊಂಡ ಯುವತಿ ಕಿರುಚಾಡಿ, ಇತರೆ ಗ್ರಾಹಕರ ಗಮನವನ್ನು ತನ್ನತ್ತ ಸೆಳೆದಳು. ಎಲ್ಲರೂ ಮೊಬೈಲ್ ತೋರಿಸುವಂತೆ ವಿಕಾಸ್ ಮೇಲೆ ಒತ್ತಡ ಹೇರಿದಾಗ ಯುವತಿ ಹಾಗೂ ಆಕೆಯ ತೊಡೆಯ ಭಾಗದ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿರುವುದು ಕಂಡುಬಂದಿತ್ತು.
ತೊಡೆ ಮೇಲೆ ಹಾಕಿದ್ದ ಕೊಂಡಿದ್ದ ಟ್ಯೂಟೂ ಚೆನ್ನಾಗಿ ಕಾಣುತ್ತಿತ್ತು. ಅಂಥದ್ದೇ ಟ್ಯಾಟೂವನ್ನು ತಾನೂ ಹಾಕಿಸಿಕೊಳ್ಳಬೇಕೆಂದು ಫೋಟೋ ತೆಗೆದಿರುವುದಾಗಿ ವಿಕಾಸ್ ಹೇಳಿದ್ದ. ಘಟನೆಗೆ ಸಂಬಂಧಿಸಿದಂತೆ ನ.18ರಂದು ಹುಳಿಮಾವು ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು. ಈ ಹಿನ್ನಲೆಯಲ್ಲಿ ಪೊಲೀಸರು ಕೋಡಿ ಚಿಕ್ಕನಹಳ್ಳಿಯಲ್ಲಿ ವಾಸವಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಫೋಟೋ ತೆಗೆದಿದ್ದ ಎನ್ನಲಾದ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
ಘಟನೆ ನಡೆದ ದಿನವೇ ವಿಕಾಸ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದ ಕೆಎಫ್‌ಸಿ ಆಪರೇಷನಲ್ ಮ್ಯಾನೇಜರ್ ಹಾಗೂ ಸಿಬ್ಬಂದಿ ದೂರು ನೀಡದಂತೆ ಯುವತಿಯ ಮನವೊಲಿಸಲು ಯತ್ನಿಸಿದ್ದರು. ಫೋಷಕರನ್ನು ಸಂಪರ್ಕಿಸಿ, ನಿರ್ಧರಿಸಿದ್ದರಿಂದ ದೂರು ನೀಡಲು ತಡವಾಯಿತು ಯುವತಿ ಪೊಲೀರಿಗೆ ತಿಳಿಸಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


