ಮುದ್ರಣ ಮಾಧ್ಯಮದ ಓದು ಹೆಚ್ಚು ಜನಪ್ರಿಯ
ಭಾರತದ ಯುವಜನತೆ ತಮ್ಮ ಓದಿಗೆ ಮುದ್ರಣ ಮಾಧ್ಯಮವನ್ನೇ ಹೆಚ್ಚು ಅವಲಂಬಿಸಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಿದೆ...

ಬೆಂಗಳೂರು: ಭಾರತದ ಯುವಜನತೆ ತಮ್ಮ ಓದಿಗೆ ಮುದ್ರಣ ಮಾಧ್ಯಮವನ್ನೇ ಹೆಚ್ಚು ಅವಲಂಬಿಸಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಟಾಟಾ ಲಿಟರೇಚರ್ ಲೈವ್‌ನ 5ನೇ ಆವೃತ್ತಿಯ ನಂತರ ಆನ್‌ಲೈನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.
ಅತಿ ಹೆಚ್ಚು ಟೆಕ್ನೋಸೇವಿಗಳಾಗಿರುವ ಯುವಕರೇ ಆನ್‌ಲೈನ್ ನಲ್ಲಿ ಪಿಡಿಎಫ್ ರೂಪದಲ್ಲಿ ಪುಸ್ತಕ ಓದಲು ಬಯಸುತ್ತಿಲ್ಲ. ಇದು ಮುದ್ರಣ ಜಗತ್ತಿಗೆ ದೊರೆತಿರುವ ಶುಭ ಸಂದೇಶ ಎಂದು ಸಮೀಕ್ಷೆ ಹೇಳಿದೆ.
ದೇಶದ 5 ಮಹಾನಗರಗಳಲ್ಲಿ ಸುಮಾರು 1426 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ. 78 ರಷ್ಟು ಮುಂದಿ ಇ-ಪುಸ್ತಕಕ್ಕಿಂತ ಮುದ್ರಿತ ರೂಪದಲ್ಲಿಯೇ ಪುಸ್ತಕ ಓದಲು ಖುಷಿ ಪಡುತ್ತೇವೆ ಎಂದು ಹೇಳಿದ್ದಾರೆ.
ಆದರೆ ಮಹಾನಗರಗಳಲ್ಲಿ ನಿಧಾನವಾಗಿ ಇ-ಪುಸ್ತಕದತ್ತ ಜನ ವಾಲುತ್ತಿರುವುದು ಸಾಬೀತಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಇ- ಪುಸ್ತಕ ಓದುಗರ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದ್ದು, ಚೆನ್ನೈ ಮೊದಲ ಸ್ಥಾನದಲ್ಲಿದೆ.
ಯುವಕರೇ ಪುಸ್ತಕ ಪ್ರಿಯರು
ಮುದ್ರಿತ ಪುಸ್ತಕ ಓದುವವರಲ್ಲಿ ಮೊದಲನೇ ಸ್ಥಾನವನ್ನು 20 ವರ್ಷದೊಳಗಿನವರೇ ಪಡೆದಿದ್ದಾರೆ. ಶೇ. 81 ರಷ್ಟು 20 ವರ್ಷದೊಳಗಿನ ಯುವಕರು ಮುದ್ರಿತ ರೂಪದಲ್ಲಿ ಪುಸ್ತಕ ಓದುವುದನ್ನು ಇಷ್ಟಪಟ್ಟರೆ, 21-30 ವಯೋವಾನದ ಶೇ.79 , 31-40 ವಯೋವಾನ ಮತ್ತು 41-50 ವಯೋವಾನದ ಶೇ.75ರಷ್ಟು ಮಂದಿ ಮುದ್ರಿತ ಪುಸ್ತಕದ ಪರವಾಗಿ ನಿಂತಿದ್ದಾರೆ. ಇನ್ನು ನಗರವಾರ ನೋಡಿದಾಗ ಮುಂಬೈನಲ್ಲಿ ಶೇ. 80ರಷ್ಟು ಮಂದಿ ಮುದ್ರಿತ ಜಗತ್ತನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಂತರ ದಿಲ್ಲ (ಶೇ.79), ಕೊಲ್ಕತ್ತಾ (ಶೇ.78), ಬೆಂಗಳೂರು (ಶೇ.77) , ಚೆನ್ನೈ (ಶೇ.76) ರಷ್ಟು ಜನ ಇ-ಪುಸ್ತಕ ಓದಲು ಇಷ್ಟಪಟ್ಟಿಲ್ಲ.
ಈ ಸಮೀಕ್ಷೆ ಭಾರತ ಹೇಗೆ ಓದುತ್ತಿದೆ ಎಂಬುದನ್ನು ಬಹಿರಂಗಗೊಳಿಸಿದೆ. ಬರಹದ ಜಗತ್ತನ್ನು ಭಾರತ ಪ್ರೀತಿಸುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ . ಮುಂದಿನ ಟಾಟಾ ಲಿಟರೇಚರ್ ಲೈವ್ ಲಿಟ್ ಫೆಸ್ಟ್ ಆವೃತ್ತಿಗೆ ಇದು ನಮ್ಮನ್ನು ಪ್ರೋತ್ಸಾಹಿಸಿದೆ.
-ಅನಿಲ್ ವಿಧಾರ್ಕರ್
ಟಾಟಾ ಲಿಟೆರೇಚರ್ ಲೈವ್, ದಿ ಮುಂಬೈ ಲಿಟ್‌ಫೆಸ್ಟ್ ಸಂಸ್ಥಾಪಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


