ಸಮಾಜಕ್ಕೆ ಕೊಡುಗೆ ನೀಡುವವನೇ ನಿಜವಾದ ಕನ್ನಡಿಗ: ಸಚಿವ ಡಿವಿ
ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಕಾಲಕಾಲಕ್ಕೆ ಅರ್ಥಗರ್ಭಿತವಾದ ಕೊಡುಗೆ ನೀಡುವವನೇ ನಿಜವಾದ ಕನ್ನಡಿಗ

ಬೆಂಗಳೂರು: ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಕಾಲಕಾಲಕ್ಕೆ ಅರ್ಥಗರ್ಭಿತವಾದ ಕೊಡುಗೆ ನೀಡುವವನೇ ನಿಜವಾದ ಕನ್ನಡಿಗ. ನಮ್ಮ ಕೊಡುಗೆಯನ್ನು ಸಮಾಜದ ಜತೆ ಜೋಡಿಸುತ್ತಾ ಮುಂದಿನ ಪೀಳಿಗೆಗೂ ವರ್ಗಾಯಿಸಬೇಕು ಎಂದು ರೈಲ್ವೆ ಸಚಿವ ಸದಾನಂದ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಶಿಕ್ಷಕರ ಸದನದಲ್ಲಿ ಸಪ್ನ ಬುಕ್ ಆಯೋಜಿಸಿದ್ದ 59ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಹಿತಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಅವರು ಮಾತನಾಡಿದರು. ಸಪ್ನ ಬುಕ್ ಹೌಸ್ ಈ ರೀತಿಯ ಕಾರ್ಯಕ್ರಮದ ಮೂಲಕ ನಾಡಿನ ಸಂಸ್ಕೃತಿ ಉಳಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಪ್ರಾದೇಶಿಕ ಭಾಷೆ ಉಳಿಯಬೇಕಾದರೆ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಿದ ಎಂದು ತಿಳಿಸಿದರು.
ಸಿರಿಗೆರೆಯ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಅಳತೆಗೋಲಿನಲ್ಲಿ ಅಳೆದರೆ ಅಮೆರಿಕ ಅತ್ಯಂತಬಡ ರಾಷ್ಚ್ರ ಎನ್ನಬಹುದು. ದೇಶದ ಅಭಿವೃದ್ದಿಯನ್ನು ಆರ್ಥಿಕ ಮಾನದಂಡದಲ್ಲಿ ಅಳೆಯುವ ಬದಲು ಆಧ್ಯಾತ್ಮಿಕ ಅಳತೆಗೋಲಿನಲ್ಲಿ ಅಳೆಯಬೇಕು. ಈ ವಿಚಾರದಲ್ಲಿ ವಿಶ್ವದಲ್ಲೇ ಭಾರತ ಶ್ರೀಮಂತ ದೇಶ ಎನಿಸಿಕೊಳ್ಳುತ್ತದೆ. ಹಿಂದಿನಿಂದಲೂ ಸಂಸ್ಕೃತ ಮತ್ತು ಕನ್ನಡ ಭಾಷೆಯನ್ನು ತಾಯಿ-ಮಗಳು ಎನ್ನಲಾಗುತ್ತಿತ್ತು. ಆದರೆ ಇತ್ತೀಚೆಗೆ ಇವೆರಡೂ ಭಾಷೆಗಳ ಸಂಬಂಧ ಅತ್ತೆ-ಸೊಸೆ ಯಂತಾಗಿರುವುದು ವಿಪರ್ಯಾಸ ಎಂದರು.
ಇನ್‌ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಮತ್ತು ಲೇಖಕಿ ಡಾ.ಸುಧಾಮೂರ್ತಿ, ನಮ್ಮ ಮನೆಗಳಲ್ಲಿ ಮಕ್ಕಳ ಕೈಗೆ ದುಡ್ಡು ನೀಡಿದರೆ ಚಾಲೋಲೇಟ್ ತಿನ್ನುತ್ತಾರೆ. ಆದರೆಪ್ರತಿ ತಾಯಿಯೂ ತನ್ನ ಮಗುವಿಗೆ ದುಡ್ಡು ನೀಡುವ ಬದಲು ಪುಸ್ತಕ ಹಿಡಿಸುವ ಕೆಲಸ ಮಾಡಬೇಕು ಎಂದರು.
ಸಪ್ನ ಬುಕ್ ಹೌಸ್ ವತಿಯಿಂದ ಸಾಹಿತಿಗಳಾದ ಡಾ.ಎಂ.ಚಿದಾನಂದ ಮೂರ್ತಿ, ಪ್ರೋ.ಮಲ್ಲೇಪುರಂ ಜಿ.ವೆಂಕಟೇಶ್, ಡಾ.ಚಂದ್ರಶೇಖರ ಕಂಬಾರ, ಡಾ.ಚನ್ನವೀರ ಕಣವಿ, ಪ್ರೋ.ಕೆ.ಎಸ್ ನಿಸಾರ್ ಅಹಮದ್, ಡಾ.ನಲ್ಲೂರ್ ಪ್ರಸಾದ್ ಸೇರಿದಂತೆ 58 ಸಾಹಿತಿಗಳನ್ನು ಸನ್ಮಾನಿಸಲಾಯಿತು. ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಸಪ್ನ ಬುಕ್ ಹೌಸ್‌ನ ಅಧ್ಯಕ್ಷ ಸುರೇಶ್ ಷಾ ಮತ್ತು ನಿರ್ದೇಶಕ ನಿತಿನ್ ಷಾ ಉಪಸ್ಥಿತರಿದ್ದರು.
ಕುರುಡು ಆಂಗ್ಲಾಭಿಮಾನದಿಂದ ಮಾತೃಭಾಷೆಗಳ ಉಳಿವಿಗೆ ಸಂವಿಧಾನದಲ್ಲಿ ತಿದ್ದುಪಡಿ ಮಾಡುವುದೊಂದೇ ಮಾರ್ಗ. ಇದಕ್ಕೆ ಮತ್ತೆ ಜನರ ಹೋರಾಟ ಅಗತ್ಯವಿದೆ - ನ್ಯಾ.ಡಾ.ಎಂ.ರಾಮಾಜೋಯಿಸ್, ಮಾಜಿ ರಾಜ್ಯಪಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


