ಗಗನಸಖಿಯರಿಗೆ ಮೈಸೂರು ಸಿಲ್ಕ್
ಇನ್ನು ಮುಂದೆ ಏರ್ ಇಂಡಿಯಾ ಗಗನಸಖಿಯರು ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಲಿದ್ದಾರೆ...

ಮೈಸೂರು: ಇನ್ನು ಮುಂದೆ ಏರ್ ಇಂಡಿಯಾ ಗಗನಸಖಿಯರು ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಲಿದ್ದಾರೆ.
ಗಗನಸಖಿಯರಿಗಾಗಿ 10,000 ಮೈಸೂರು ರೇಷ್ಮೆ ಸೀರೆಗಳನ್ನು ಪೂರೈಸುವಂತೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮಕ್ಕೆ (ಕೆಎಸ್‌ಐಸಿ) ಏರ್ ಇಂಡಿಯಾ ಬೇಡಿಕೆ ಸಲ್ಲಿಸಿದೆ. ಈ ಸೀರೆಗಳ ಮೌಲ್ಯ ರು.6.5 ಕೋಟಿ. ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ನಿಗಮದ ಅಧ್ಯಕ್ಷ ಡಿ. ಬಸವರಾಜ್, ಮೈಸೂರು ರೇಷ್ಮೆ ಸೀರೆಗಳ ಗುಣಮಟ್ಟವನ್ನು ಪರಿಶೀಲಿಸಿದ ನಂತರ ಏರ್ ಇಂಡಿಯಾವು ಬೇಡಿಕೆ ಸಲ್ಲಿಸಿದೆ. ಇದು ನಿಗಮದ ಪ್ರತಿಷ್ಠೆ ಹೆಚ್ಚಿಸಿದೆ ಎಂದು ಹೇಳಿದರು.
ನಿಗಮವು ಅಂತಾರಾಷ್ಟ್ರೀಯ ಗುಣಮಟ್ಟದ ಸೀರೆಗಳನ್ನು ಉತ್ಪಾದಿಸುತ್ತಿದ್ದು, ರು.12 ಸಾವಿರದಿಂದ ರು.2.50 ಲಕ್ಷ ದರದಲ್ಲಿ ಸೀರೆಗಳು ಲಭ್ಯ ಇವೆ. ದೇಶ-ವಿದೇಶಗಳ ಗಣ್ಯರು, ಚಲನಚಿತ್ರ ತಾರೆಯರು ಹಾಗೂ ರೂಪದರ್ಶಿಗಳನ್ನು ನಿಗಮದ ಸೀರೆಗಳು ಆಕರ್ಷಿಸಿವೆ.
ಇದಲ್ಲದೇ ರಾಷ್ಟ್ರಪತಿಗಳು ದೇಶಕ್ಕೆ ಬರುವ ವಿದೇಶಿ ಗಣ್ಯರಿಗೆ ನೀಡುವ ಉಡುಗೊರೆಯಲ್ಲಿ ರೇಷ್ಮೆ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಈ ಸಂಬಂಧ ರಾಷ್ಟ್ರಪತಿ ಭವನದಿಂದಲೂ ಬೇಡಿಕೆ ಬಂದಿದ್ದು, ರೇಷ್ಮೆ ಶಲ್ಯ ಮತ್ತಿತರ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


