ಜಿಲ್ಲಾ ಸುದ್ದಿ

ಸಾಗರ ಬಳಿ ಅಪಘಾತ: ಹುಬ್ಬಳ್ಳಿಯ ಐವರ ಸಾವು

ತಾಲೂಕಿನ ಸಿಗಂದೂರು ಮಾರ್ಗದಲ್ಲಿನ ಹುಲಿದೇವರಬನಗ್ರಾಮದ ಸಮೀಪ...

ಸಾಗರ ಬಳಿ ಅಪಘಾತ: ಹುಬ್ಬಳ್ಳಿಯ ಐವರ ಸಾವು
ಅಪಘಾತದಲ್ಲಿ ಮೃತಪಟ್ಟವರು
Published On :

ಸಾಗರ: ತಾಲೂಕಿನ ಸಿಗಂದೂರು ಮಾರ್ಗದಲ್ಲಿನ ಹುಲಿದೇವರಬನಗ್ರಾಮದ ಸಮೀಪ ಶನಿವಾರ ಕಾರು ಮತ್ತು ಖಾಸಗಿ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಮೃತಪಟ್ಟಿದ್ದಾರೆ.

ಸಂತೋಷ್‌ನಾಯರ್(40), ಅವರ ಪತ್ನಿ ಬಿಂದು (38) ಪುತ್ರಿ ಸಾಧಿಕಾ (6) ಊಮೇಶ್ ಜಾಡರ್ (40) ಅವರ ಪುತ್ರ ರೋಹನ್ (8) ಮೃತರು. ಉಮೇಶ್ ಜಾಡರ್ ಪತ್ನಿ ನಂದಾ, ಮಗಳು ಸುಹಾನಾ ತೀವ್ರವಾಗಿ ಗಾಯಗೊಂಡಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಹುಬ್ಬಳ್ಳಿಯ ಬೊಮ್ಮಾಪುರ ಹೋಲಿಮಠ ಪ್ರದೇಶದವರು ಎಂದು ಗುರುತಿಸಲಾಗಿದೆ. ಸಿಂಗದೂರಿಗೆ ಹೋಗೂತ್ತಿರುವಾಗ ವಾಹನವೊಂದನ್ನು ಹಿಂದಿಕ್ಕಲು ಪ್ರಯತ್ನಿಸಿ, ಎದುರಿನಿಂದ ಬರುತ್ತಿದ್ದ ಬೆಂಗಳೂರಿನ ಖಾಸಗಿ ಬಸ್ಸಿಗೆ ನೇರವಾಗಿ ಅಪ್ಫಳಿಸಿದೆ. ಅಪಘಾತದ ರಭಸಕ್ಕೆ ಕಾರು ಸುಮಾರು 30 ಅಡಿ ಹಿಂದಕ್ಕೆ ಹೋಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಬಸ್ಸಿನ ಮುಂಭಾಗ ಜಖಂಗೊಂಡಿದೆ. ಸ್ಥಳಕ್ಕೆ ಸಾಗರ ಡಿವೈಎಸ್ಪಿ ಬಿ.ಎನ್.ನಂದಿನಿ, ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಮಾದಪ್ಪ. ಪಿಎಸ್‌ಐ ಶಶಿಕಾಂತ್ ಮೊದಲಾದವರು ಭೇಟಿ ನೀಡಿ ಕಾನೂನು ಕ್ರಮ ಜರುಗಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.