ಜಿಲ್ಲಾ ಸುದ್ದಿ

ಅಗ್ರಿ ಇಂಡಿಯಾ ಏಜೆಂಟ್ ನೇಣಿಗೆ ಶರಣು

ಹಣ ವಾಪಸ್ ನೀಡಲಾಗದೇ ಮನೆಯ ಬಳಿ ಜನ ಜಮಾಯಿಸಿದಾಗ ಮರಣ ಪತ್ರ ಬರೆದಿಟ್ಟು ನೇಣಿಗೆ ಶರಣು...

ಅಗ್ರಿ ಇಂಡಿಯಾ ಏಜೆಂಟ್ ನೇಣಿಗೆ ಶರಣು
ಅಗ್ರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಆನೇಕಲ್‌ ಶಾಕೆ
Published On :

ಆನೇಕಲ್: ಅಗ್ರಿ ಇಂಡಿಯಾ ಕಂಪನಿಯಾಗಿ ಹಣ ಸಂಗ್ರಹ ಮಾಡುತ್ತಿದ್ದ ಏಜೆಂಟನೊಬ್ಬ ಹಣ ವಾಪಸ್ ನೀಡಲಾಗದೇ ಮನೆಯ ಬಳಿ ಜನ ಜಮಾಯಿಸಿದಾಗ ಮರಣ ಪತ್ರ ಬರೆದಿಟ್ಟು ನೇಣಿಗೆ ಶರಣಾದ ಘಟನೆ  ಆನೇಕಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ತಿಮ್ಮರಾಯಸ್ವಾಮಿ ಬಡಾವಣೆ ನಿವಾಸಿ ನಾಗರಾಜು(35) ಮೃತ ದುರ್ದೈವಿ. ಈತನಿಗೆ ಹೆಂಡತಿ ಮತ್ತು 1 ಮಗುವಿಗೆ ಎನ್ನಲಾಗಿದೆ.

ಹಾಲು ಮಾರಾಟದ ಜೊತೆಗೆ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ ನಾಗರಾಜ 3 ವರ್ಷಗಳಿಂದ ಅಗ್ರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಏಜೆಂಟ್ ಆಗಿ ಹಣ ಸಂಗ್ರಹ ಮಾಡುತ್ತಿದ್ದ. ಆನೇಕಲ್‌ನಲ್ಲಿನ 100 ಏಜೆಂಟರ ಪೈಕಿ ಟಾಪ್ ಟೆನ್‌ರಲ್ಲಿ ಗುರ್ತಿಸಿಕೊಂಡಿದ್ದ ಈತ ಸುಮಾರು ರೂ.2 ಕೋಟಿಯಷ್ಟು ಡೆಪಾಸಿಟ್ ಸಂಗ್ರಹ ಮಾಡಿದ್ದ ಎನ್ನಲಾಗಿದೆ.

ಮಾಸಿಕ ಶೇ.3 ಬಡ್ಡಿ ದರವನ್ನು ಡೆಪಾಸಿಟ್ ಹಣಕ್ಕೆ ನೀಡಲಾಗುವುದು ಎಂದು ಅಗ್ರಿ ಇಂಡಿಯಾ ಹೊರಡಿಸಿದ್ದ ಸ್ಕೀಮ್‌ಗೆ ನೂರಾರು ಗ್ರಾಹಕರು ಹಣವನ್ನು ತೊಡಗಿಸಿದ್ದರು. ಅವಧಿ ಮುಗಿದು ತನ್ನ ಗ್ರಾಹಕರಿಗೆ ಮೆಚ್ಯುರಿಟಿ ಹಣ ವಾಪಸ್ ಕೊಡಬೇಕಿದ್ದ ಅಗ್ರಿ ಇಂಡಿಯಾದಿಂದ ಹಣ ವಾಪಸ್ ಬರದ ಕಾರಣ ಜನ ಮನೆ ಬಳಿ ಜಮಾಯಿಸಿದ್ದರು.

ಹಣ ಮರು ಪಾವತಿ ಮಾಡಲು ಆಗದ ನಾಗರಾಜು ಸಂಜೆ ತನ್ನ ಮನೆಯಲ್ಲಿ ಮರಣ ಪತ್ರ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ. ಮರಣ ಪತ್ರದಲ್ಲಿ ಸಾರ್ವಜನಿಕರ ಹಾಗೂ ಬಡವರ ಸುಮಾರು ನೂರಾರು ಕೋಟಿಯಷ್ಟು ಹಣ ಸಂಗ್ರಹಿಸಿ ಪರಾರಿಯಾಗಿರುವ ಬ್ಲೇಡ್ ಕಂಪನಿ ವಂಚಕರಿಗೆ ಶಿಕ್ಷೆ ಕೊಡಿಸಿ ಎಂದು ಬರೆದಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.