ಜಿಲ್ಲಾ ಸುದ್ದಿ

ತೆಪ್ಪ ಮುಳುಗಿ ಆರು ಮಂದಿ ಸಾವು

ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಬುಧವಾರ ಮಧ್ಯಾಹ್ನ ತೆಪ್ಪ ಮುಳುಗಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಜಲಸಮಾಧಿಯಾಗಿದ್ದಾರೆ.

ತೆಪ್ಪ ಮುಳುಗಿ ಆರು ಮಂದಿ ಸಾವು
ಇಂದವಾರ ಬಳಿ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ತೆಪ್ಪ ಮುಳುಗಡೆ (ಸಾಂದರ್ಭಿಕ ಚಿತ್ರ)
Published On :

ಹುನಗುಂದ: ತಾಲೂಕಿನ ಇಂದವಾರ ಬಳಿ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಬುಧವಾರ ಮಧ್ಯಾಹ್ನ ತೆಪ್ಪ ಮುಳುಗಿ ಇಬ್ಬರು ಮಕ್ಕಳು ಸೇರಿ ಆರು ಮಂದಿ ಜಲಸಮಾಧಿಯಾಗಿದ್ದಾರೆ.

ಇಬ್ಬರು ಈಜಿ ದಡ ಸೇರಿದ್ದಾರೆ. ಕೌಜಗನೂರು ಗ್ರಾಮದ ಮಲ್ಲವ್ವ ಯಲ್ಲಪ್ಪ ಮಡಿವಾಳ (40), ಮಂಜವ್ವ ಭೀಮಪ್ಪ ಮಡಿವಾಳ (21) ಹುಲಿಗೆವ್ವ ಮಹಾಂತೇಶ ಮಡಿವಾಳರ (20), ಸಾವಿತ್ರಿ ಯಮನಪ್ಪ ಮಡಿವಾಳರ (6) ಸಚಿನ ಯಮನಪ್ಪ ಮಡಿವಾಳರ (4) ತೆಪ್ಪದ ನಾವಿಕ ಅಮರಮಾಡಗಿ ಗ್ರಾಮದ ಕರಿಯಪ್ಪ ಪರಸಪ್ಪ ಬಾರಕೇರ (42) ಮೃತರು. ರೇಣವ್ವ ಯಮನಪ್ಪ ಮಡಿವಾಳರ, ಮಹಾಂತೇಶ ಶಿವಸಂಗಪ್ಪ ಮಡಿವಾಳರ ಈಜಿ ದಡ ಸೇರಿದ್ದಾರೆ.

ರೇಣವ್ವಳ ಇಬ್ಬರು ಪುಟ್ಟ ಮಕ್ಕಳು, ಮಹಾಂತೇಶನ ಪತ್ನಿ ಮೃತಪಟ್ಟಿದ್ದಾರೆ. ಇವರೆಲ್ಲರೂ ಮದುವೆಗೆ ತೆರಳುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.