ವೀರಪ್ಪನ್ ವಿರುದ್ಧ ಹೋರಾಡಿದ ಪೊಲೀಸರಿಗೆ ನಿವೇಶನಗಳು?
ಕಾಡುಗಳ್ಳ ವೀರಪ್ಪನ್ ವಿರುದ್ಧದ

ಬೆಳಗಾವಿ: ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ ೧೫ ಜನ ಪೊಲೀಸರಿಗೆ ಮಂಗಳೂರಿನ ಹೊರವಲಯದಲ್ಲಿ ನಿವೇಶನಗಳನ್ನು ಹಂಚುವ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮೂಡಾ) ಎರಡು ವರ್ಷದ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಶೀಘ್ರ ಪರಿಶೀಲಿಸುವಂತೆ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ೧೫ ಜನ ಪೊಲೀಸರು ದಕ್ಷಣ ಕನ್ನಡದಲ್ಲಿ ಉಚಿತ ನಿವೇಶನದ ಪಲಾನುಭವಿಗಳಾಗಲಿದ್ದಾರೆ ಎಂದು ಮೂಡ ಮಹಾ ನಿರ್ದೇಶಕ ಮೊಹಮದ್ ನಜೀರ್ ತಿಳಿಸಿದ್ದಾರೆ.
ಮಂಗಳೂರು ತಾಲ್ಲೂಕಿನ ಪದವು ಗ್ರಾಮದ ಬಳಿ ಗುರುತಿಸಲಾಗಿರುವ ೧.೫ ಎಕರೆ ಜಾಗದಲ್ಲಿ ೧೯ ನಿವೇಶನಗಳು ಇದ್ದು, ಅವುಗಳಲ್ಲಿ ೧೫ ನಿವೇಶನಗಳನ್ನು ಪೊಲೀಸರಿಗೆ ಉಚಿತವಾಗಿ ಹಂಚಲಾಗುವುದು. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ ಬಹುಮಾನಗಳನ್ನು ಈ ಹಿಂದೆಯೆ ಸರ್ಕಾರ ಘೋಷಿಸಿದ್ದರು ಕೂಡ, ವೀರಪ್ಪನ್ ಹತನಾದ ಕಾರ್ಯಾಚರಣೆಯಲ್ಲಿ ಭಾಗಿಯಾಗದ ಪೊಲೀಸರು ಈ ಬಹುಮಾನಗಳಿಂದ ವಂಚಿತರಾಗಿದ್ದರು.
ಜಿಲ್ಲೆಯ ಕೆಲವು ಪೊಲೀಸರು ತಾವೂ ಕೂಡ ಸರ್ಕಾರ ಘೋಷಿಸಿದ ಬಹುಮಾನಕ್ಕೆ ಅರ್ಹರು ಎಂದು ಸಾಬೀತು ಪಡಿಸಲು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಸರ್ಕಾರದ ವಾದವನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ಅರ್ಜಿಯನ್ನು ವಜಾ ಮಾಡಿತ್ತು.
ಆದರೆ ಈಗ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ ನಿವೇಶನಗಳನ್ನು ಹಂಚುವ ಸರ್ಕಾರದ ಚಿಂತನೆ, ಹಲವು ಪೊಲೀಸರಲ್ಲಿ ಭರವಸೆ ಹುಟ್ಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


