ಕಳಪೆ ಕಾಮಗಾರಿ: ಆಯುಕ್ತರ ಹಾಜರಿಗೆ ಲೋಕಾ ಆದೇಶ
ಬಹುತೇಕ ಕಾಮಗಾರಿಗಳು ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಬೇಕೆಂದು...

ಬೆಂಗಳೂರು: ಕಳಪೆ ಕಾಮಗಾರಿ ಹಗರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಆಯುಕ್ತರೇ ಖುದ್ದು ಹಾಜರಾಗಿ ವರದಿ ಸಲ್ಲಿಸಬೇಕು ಎಂದು ಉಪ ಲೋಕಾಯುಕ್ತರು ಆದೇಶಿಸಿದ್ದಾರೆ.
ಆಷ್ಟೇ ಅಲ್ಲ, ಕಳೆದೊಂದು ವರ್ಷದಲ್ಲಿ ರಸ್ತೆಗಳ ಅಭಿವೃದ್ದಿಗೆ ರೂ.100 ಕೋಟಿ ವೆಚ್ಚ ಮಾಡಿರುವುದು ನಿಜವಾಗಿದ್ದರೆ ವಿವರಗಳನ್ನು ನೀಡಬೇಕು.
ಜತೆಗೆ ರಸ್ತೆ ಕಾಮಗಾರಿಗಳನ್ನು ಮಳೆಗಾಲದಲ್ಲೇ ಏಕೆ ಕೈಗೆತ್ತಿಕೊಳ್ಳಲಾಗುತ್ತಿದೆ ಎನ್ನುವ ಬಗ್ಗೆಯೂ ಮಾಹಿತಿ ನೀಡಬೇಕೆಂದು ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಸೂಚಿಸಿದ್ದಾರೆ.
ಬಿಬಿಎಂಪಿ ಕೈಗೊಂಡಿರುವ ಬಹುತೇಕ ಕಾಮಗಾರಿಗಳು ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಬೇಕೆಂದು ಕರ್ನಾಟಕ ಜನಹಿತ ವೇದಿಕೆ ನೀಡಿದ ದೂರಿನ ಅನ್ವಯ ಉಪ ಲೋಕಾಯುಕ್ತರು ಈ ಕ್ರಮ ಕೈಗೊಂಡಿದ್ದಾರೆ. ಜನಹಿತ ವೇದಿಕೆ ಅಧ್ಯಕ್ಷ ಸಾಯಿದತ್ತ, ಪಾಲಿಕೆ ಕಳೆದೊಂದು ವರ್ಷದಲ್ಲಿ ರಸ್ತೆ ನಿರ್ವಹಣೆಗೆಂದೇ ರೂ.1000 ಕೋಟಿ ವ್ಯಯಿಸಿರುವ ಬಗ್ಗೆಯೂ ಅನುಮಾನವಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.
ಬಿಬಿಎಂಪಿ 2014ರ ಏಪ್ರಿಲ್‌ನಿಂದ ಈ ವರೆಗೆ ಕೈಗೊಂಡಿರುವ ಎಲ್ಲ ಕಾಮಗಾರಿಗಳೂ ಬಹುತೇಕ ಕಳಪೆಯಾಗಿವೆ. ಬಿಬಿಎಂಪಿ ಗುಣಮಟ್ಟ ನಿಯಂತ್ರಣ ವಿಭಾಗದ ಅಧಿಕಾರಿಗಳು ನಡೆಸಿದ ಪರೀಕ್ಷೆ ವೇಳೆ 189 ಕಾಮಗಾರಿಗಳಲ್ಲಿ 171 ಕಾಮಗಾರಿಗಳು ಕಳೆಪೆಯಾಗಿರುವುದು ಪತ್ತೆಯಾಗಿತ್ತು. ಈ ಬಗ್ಗೆಯೂ ಅವರು ತನಿಖೆಗಾಗಿ ಮನವಿ ಸಲ್ಲಿಸಿದ್ದರು.
ಎರಡು ವಾರಗಳ ಹಿಂದೆ 'ಕನ್ನಡಪ್ರಭ' ಬಿಬಿಎಂಪಿಯಲ್ಲಿ ಕಳೆದುದೊಂದು ವರ್ಷದಲ್ಲಿ ರಸ್ತೆಗಳ ಅಭಿವೃದ್ಧಿಗೆ ರೂ.1000 ಕೋಟಿ ವ್ಯಯಿಸಿರುವ ಬಗ್ಗೆ ವರದಿಯೊಂದನ್ನು ಪ್ರಕಟಿಸಿತ್ತು. ಇದನ್ನಾಧರಿಸಿ ಜನಹಿತ ವೇದಿಕೆ ಅಧ್ಯಕ್ಷ ಸಾಯಿದತ್ತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


