ರೈಲ್ವೆ ಮಾರ್ಗ ಕಾಮಗಾರಿ ತ್ವರಿತಕ್ಕೆ ಆಗ್ರಹ
ನೂತನ ರೈಲ್ವೆ ಮಾರ್ಗವನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ವೇದಿಕೆ ಒತ್ತಾಯ

ಬೆಂಗಳೂರು: ತುಮಕೂರು-ರಾಯದುರ್ಗ ನಡುವಿನ ನೂತನ ರೈಲ್ವೆ ಮಾರ್ಗ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬಕ್ಕೆ ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ತೀವ್ರ ಬೇಸರ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ತಕ್ಷಣವೇ ಇತ್ತ ಗಮನ ಹರಿಸುವ ಮೂಲಕ ನೂತನ ರೈಲ್ವೆ ಮಾರ್ಗವನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ವೇದಿಕೆ ಒತ್ತಾಯಿಸಿದೆ. ಈ ಸಂಬಂಧ ವೇದಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ರವಾನಿಸಿದೆ.
2007-08ರಲ್ಲಿ ಮಂಜುರಾದ ತುಮಕೂರು-ರಾಯದುರ್ಗದ ನೂತನ ರೈಲ್ವೆ ಮಾರ್ಗ ಈಗಲೂ ನಿರ್ಮಾಣದ ಹಂತದಲ್ಲಿದೆ. ಈಗಾಗಲೇ ಆಂಧ್ರದ ರಾಯದುರ್ಗದಿಂದ ಕರ್ನಾಟಕದ ಗಡಿ ತನಕವೂ ಮಾರ್ಗದ ನಿರ್ಮಾಣ ಮುಗಿದಿದೆ.
ಆದರೆ, ತುಮಕೂರಿನಿಂದ ಪಾವಗಡದತನಕದ ಮಾರ್ಗ ನಿಮಾಣಕ್ಕೆ ಊರುಕೆರೆ ಬಳಿ ಭೂ ಸ್ವಾಧೀನ ಪ್ರಕ್ರಿಯೆಯ ವಿಳಂಭವೇ ಕಾರಣ. ಊರುಕೆರೆ ಬಳಿ ಜಂಕ್ಷನ್ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ ಈ ಹಿಂದೆ ಎಕರೆಗೆ ರೂ.1 ಕೋಟಿಯಷ್ಟು ಪರಿಹಾರ ನೀಡುವುದಾಗಿ ಸರ್ಕಾರ, ರೈತರಿಗೆ ಭವರಸೆ ನೀಡಿತ್ತು.
ಆದರೆ ನೂತನ ಜಿಲ್ಲಾಧಿಕಾರಿ ತುಮಕೂರಿಗೆ ಬಂದ ನಂತರ ಜಿಲ್ಲಾಡಳಿತ ಎಕರೆಗೆ ರೂ.6 ಲಕ್ಷ ಪರಿಹಾರ ಘೋಷಿಸಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ ಕಾರಣ ತುಮಕೂರು ಕಡೆಯಿಂದ ಶುರುವಾಗಬೇಕಿದ್ದ ರೈಲ್ವೆ ಮಾರ್ಗ ನೆನೆಗುದಿಗೆ ಬಿದ್ದಿದೆ ಎಂದು ವೇದಿಕೆ ಕಾರ್ಯದರ್ಶಿ ಕರಣಂ ರಮೇಶ್ ಮನವಿಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಗಮನ ಹರಿಸಬೇಕು. ಪಾವಗಡ ಭಾಗದಿಂದ ತಕ್ಷಣವೇ ಮಾರ್ಗದ ನಿರ್ಮಾಣ ಕಾರ್ಯ ಶುರುಮಾಡಬೇಕು. ಕನಿಷ್ಠ ಕೋರ ತನಕವಾದರೂ ಮಾರ್ಗವನ್ನು ಪೂರ್ಣಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


