ಜಿಲ್ಲಾ ಸುದ್ದಿ

ಜಿಸ್ಯಾಟ್-16 ಸಂವಹನ ಉಪಗ್ರಹ ಉಡಾವಣೆ ಯಶಸ್ವಿ

ಭಾರತದ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲು ಜಿಸ್ಯಾಟ್-16 ಸಹಾಯಕಾರಿಯಾಗಲಿದೆ...

ಜಿಸ್ಯಾಟ್-16 ಸಂವಹನ ಉಪಗ್ರಹ ಉಡಾವಣೆ ಯಶಸ್ವಿ
ಜಿಸ್ಯಾಟ್-16 ಸಂವಹನ ಉಪಗ್ರಹ ಉಡಾವಣೆ
Published On :

ಬೆಂಗಳೂರು: ಭಾರತದ ಇಸ್ರೋ ಬಾಹ್ಯಕಾಶ ಕ್ಷೇತ್ರಕ್ಕೆ ಮತ್ತೊಂದು ಗರಿ ಮೂಡಿದೆ. ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-16 ಅನ್ನು ಫ್ರೆಂಚ್ ಗಯಾನ ಪ್ರದೇಶದಲ್ಲಿರುವ ಕೌರು ಬಾಹ್ಯಾಕಾಶ ಉಡಾವಣ ಕೇಂದ್ರದಿಂದ ಇಂದು ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಈ ಕುರಿತು ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಇಸ್ರೋ, ಭಾರತದ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲು ಜಿಸ್ಯಾಟ್-16 ಸಹಾಯಕಾರಿಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 2.10 ರಂದು ಫ್ರೆಂಚ್ ಗಯಾನ ಪ್ರದೇಶದಲ್ಲಿರುವ ಕೌರು ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಇದೀಗ ಉಪಗ್ರಹವು ಸಮರ್ಥವಾಗಿ ಕಾರ್ಯ ನಿರ್ವಹಿಸುವ ಹಂತದಲ್ಲಿದೆ ಎಂದು ಇಸ್ರೋ ಟ್ವಿಟರ್‌ನಲ್ಲಿ ತಿಳಿಸಿದೆ.

ಯಶಸ್ವಿ ಉಡಾವಣೆಯ ಬಳಿಕ, ಹಾಸನದಲ್ಲಿರುವ ಇಸ್ರೋ ಮಾಸ್ಟರ್ ಕಂಟ್ರೋಲ್ ಫೆಸಲಿಟಿಯು, ಜಿ-ಸ್ಯಾಟ್ 16 ಉಪಗ್ರಹ ಕಾರ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ನಾಳೆ ಮುಂಜಾನೆ 3.50ರ ಸಮಯದಲ್ಲಿ ಜಿಸ್ಯಾಟ್-16 ಉಪಗ್ರಹದ ಕಕ್ಷೆ ಬದಲಿಸಲು ಇಸ್ರೋ ಮಾಸ್ಟರ್ ಕಂಟ್ರೋಲ್ ಫೆಸಲಿಟಿ ಕಾರ್ಯ ನಿರ್ವಹಿಸಲಿದೆ ಎಂದು ಇಸ್ರೋ ವಿವರಿಸಿದೆ.

ಪ್ರತಿಕೂಲ ಹವಾಮಾನ ಕಾರಣ ಜಿಸ್ಯಾಟ್-16 ಉಪಗ್ರಹ ಉಡಾವಣೆ ದಿನಾಂಕ ಮತ್ತು ಸಮಯವನ್ನು ಎರಡು ಬಾರಿ ಮುಂದೂಡಲ್ಪಟ್ಟಿತ್ತು. ಇಂದು ಅನುಕೂಲ ವಾತಾವಣರದಂತೆ ನಿಗಧಿತ ಸಮಯಕ್ಕೆ ಉಪಗ್ರಹ ಉಡಾವಣೆ ಮಾಡಲಾಗಿದೆ.

3,181 ತೂಕದ ಜಿಸ್ಯಾಟ್-16, 48 ಸಂವಹನ ಟ್ರಾನ್ಸ್‌ಪಾಂಡರ್‌ಗಳನ್ನು ಹೊತ್ತು ಸಾಗಿದೆ. ಇಸ್ರೋ ಸಾಧನೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ದೊಡ್ಡ ಮಟ್ಟದ ಸಂವಹನ ಸಾಧನೆಯಾಗಿದೆ.

ಇದೇ ವೇಳೆ ಜಿಸ್ಯಾಟ್-16 ಉಪಗ್ರಹದ ಯಶಸ್ವಿ ಉಡಾವಣೆಗೆ ಬಳಿಕ ಪ್ರಧಾನಿ ನರೇಂದ್ರ ಮೋದಿ, ಇಸ್ರೋ ವಿಜ್ಞಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಭಾರತೀಯ ಬಾಹ್ಯಕಾಶ ಕಾರ್ಯದಲ್ಲಿ ಸಂವಹನ ಉಪಗ್ರಹ ಭಾರತದ ಕೊಡುಗೆಯಾಗಿ ಪರಿಣಮಿಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಸ್ಯಾಟ್-16 ಉಪಗ್ರಹ ಯಶಸ್ವಿ ಉಡಾವಣೆಗೆ ಮಾಹಿತಿ ಮತ್ತು ಪ್ರಸಾರ ಸಚಿವ ರಾಜವರ್ಧನ್ ರಾಥೋಡ್ ಸಹ ಇಸ್ರೋ ಸಾಧನೆಗೆ ಧನ್ಯವಾದ ಅರ್ಪಿಸಿದ್ದಾರೆ. ಭಾರತೀಯ ಸಂವಹ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲು ಜಿಸ್ಯಾಟ್-16 ಪ್ರಮುಖ ಪಾತ್ರವಹಿಸಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.