ಹುಟ್ಟಿದ ಕೂಡಲೇ ಮಗು ಅಳಲಿಲ್ಲ ಅಂತ ಬರೆ ಹಾಕಿದ್ರು!
ಹುಟ್ಟಿದ ಕೂಡಲೇ ಮಗು ಅಳಲಿಲ್ಲ ಎಂಬ...

ಬಳ್ಳಾರಿ: ಹುಟ್ಟಿದ ಕೂಡಲೇ ಮಗು ಅಳಲಿಲ್ಲ ಎಂಬ ಕಾರಣದಿಂದ ನವಜಾತ ಶಿಶುವಿಗೆ ಏಳೆಂಟು ಕಡೆ ಬರೆ ಹಾಕಲಾಗಿದ್ದು, ತೀವ್ರ ಅಸ್ವಸ್ಥಗೊಂಡ ಶಿಶುವನ್ನು ಇಲ್ಲಿನ ವಿಮ್ಸ್‌ಗೆ ದಾಖಲು ಮಾಡಲಾಗಿದೆ.
ವಾರದ ಹಿಂದೆ ತಾಲೂಕಿನ ಹರಗಿನದೋಣಿ ನಿವಾಸಿ ನೀಲಮ್ಮ ಎಂಬುವವರಿಗೆ ಜನಿಸಿದ್ದ ಗಂಡು ಮಗು ಹುಟ್ಟಿದ್ದ ಕೂಡಲೇ ಅಳಲಿಲ್ಲ ಎಂಬ ಕಾರಣಕ್ಕೆ ಸೂಜಿಯನ್ನು ಬಿಸಿ ಮಾಡಿ ಬರೆ ಹಾಕಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಮಗುವನ್ನು ನಗರದ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುಟ್ಟ ಗಾಯಗಳಿಂದಾಗಿ ಮಗುವಿನ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದಿದ್ದು, ಮಗುವನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಡಲಾಗಿದೆ.
ನವಜಾತ ಶಿಶು ಹುಟ್ಟಿದಾಗ ಅಳಲಿಲ್ಲ. ಹಾಗಾಗಿ, ಮಗು ಚುರುಕಾಗಿಲ್ಲ. ಯಾವುದೋ ದುಷ್ಟಶಕ್ತಿಯ ಕಾಟವಿದೆ. ಕಾದ ಸೂಜಿಯಿಂದ ದೇಹದ ಮೇಲೆ ಬರೆ ಹಾಕಿದರೆ ದುಷ್ಟಶಕ್ತಿ ದೂರವಾಗಿ, ಮಗು ಸರಿಹೋಗುತ್ತದೆ ಎಂಬ ಮೂಢನಂಬಿಕೆಯಿಂದ ಪೋಷಕರು ಅಮಾನುಷವಾಗಿ ಬರೆ ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


