ಸಚಿವ ಸ್ಥಾನಕ್ಕೆ ಜಾತಿ ಲಾಬಿ
ವಿಧಾನಸಭೆ ಉಪಚುನಾವಣೆ ಫಲಿತಾಂಶ ಆಧರಿಸಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ...

ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.33:
ವಿಧಾನಸಭೆ ಉಪಚುನಾವಣೆ ಫಲಿತಾಂಶ ಆಧರಿಸಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಸ್ವರೂಪ ನಿಗದಿಯಾಗಲಿದ್ದು, ಜಾತಿವಾರು ಲಾಬಿ ಆರಂಭವಾಗಿದೆ.
ಶಾಸಕರ ಒತ್ತಡದ ಹಿನ್ನೆಲೆಯಲ್ಲಿ, ಚುನಾವಣೆ ನಂತರ ಸಂಪುಟ ಪುನಾರಚನೆಗೆ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗ ಎಲ್ಲ ಮಜಲುಗಳಿಂದಲೂ ಸಂಪುಟ ಪುನಾರಚನೆ ಆಗ್ರಹ ಕೇಳಿಬರುತ್ತಿರುವುದರಿಂದ ತಕ್ಷಣಕ್ಕೆ ಮೂವರನ್ನು ಸೇರಿಸಿಕೊಂಡು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಮೂಲಗಳ ಪ್ರಕಾರ, ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದರೂ, ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋತನೆ, ಈ ಪ್ರಕ್ರಿಯೆ ಇನ್ನಷ್ಟು ಮುಂದೆ ಹೋಗಬಹುದು. ಆಘ ಹೊಸ ಆಕಾಂಕ್ಷಿಗಳು ಹುಟ್ಟಿಕೊಳ್ಳುವ ಜತೆಗೆ ಸಿದ್ದರಾಮಯ್ಯನವರ ವಿರುದ್ಧ 'ಆಳಿಗೊಂದು ಕಲ್ಲು' ಎಸೆಯುವ ನಾಯಕರ ಸಂಖ್ಯೆ ಹೆಚ್ಚಬಹುದು. ಎರಡರಲ್ಲಿ ಗೆದ್ದರೆ ಹೈಕಮಾಂಡ್ ಮಟ್ಟದಲ್ಲಿ ಅವರ ಕೈ ಇನ್ನಷ್ಟು ಬಿಗಿಯಾಗುತ್ತದೆ. ಹೀಗಾಗಿ ಅವರು ತಮಗೆ ಇಷ್ಟ ಬಂದವರನ್ನೇ ಸಂಪುಟಕ್ಕೆ ಸೇರಿಸಿಕೊಂಡು, ಕಷ್ಟ ಎನಿಸುವವರನ್ನು ಸಂಪುಟದಿಂದ ಕೈ ಬಿಡಬಹುದೆಂದು ವ್ಯಾಖ್ಯಾನಿಸಲಾಗುತ್ತಿದೆ.
ಒಂದೊಮ್ಮೆ ಎರಡರಲ್ಲಿ ಸೋತು ಒಂದರಲ್ಲಿ ಗೆದ್ದರೆ, ಆಗ ಹೈಕಮಾಂಡ್ ಸಲಹೆಯಂತೆ ಸಂಪುಟ ವಿಸ್ತರಣೆಗೆ ಕೈ ಹಾಗ ಬೇಕಾಗುತ್ತದೆ. ಅವರ ವಿರುದ್ಧ ಮುನಿಸಿಕೊಂಡಿರುವ ಪ್ರಬಲ ವರ್ಗಕ್ಕೆ ಆದ್ಯತೆ ನೀಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎನ್ನಲಾಗುತ್ತಿದೆ.
ಇಂಥ ಸನ್ನಿವೇಶ ಸೃಷ್ಟಿಯಾದರೆ ಲಿಂಗಾಯಿತ, ಒಕ್ಕಲಿಗ ಮತ್ತು ಪರಿಶಿಷ್ಟ ಜಾತಿಯಿಂದ ತಲಾ ಒಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ. ಇನ್ನೊಂದು ಸ್ಥಾನವನ್ನು ಕುರುಬ ಅಥವಾ ಇತರೆ ಹಿಂದುಳಿದ ಜಾತಿಗೆ ನೀಡಬೇಕಾಗುತ್ತದೆ. ಆದರೆ ಸಿಎಂ ಸಿದ್ದರಾಮಯ್ಯನವರು ಕೇವಲ ಮೂರು ಸ್ಥಾನವನ್ನು ಭರ್ತಿ ಮಾಡಿ ಉಳಿದೆರಡನ್ನು ಅತೃಪ್ತರ ಮೂಗಿಗೆ ತುಪ್ಪ ಸುರಿಯಲ ಬಳಸಿಕೊಳ್ಳವು ಸಾಧ್ಯತೆ ಇದೆ.
ಯಾರ್ಯಾರು?: ಸಂಪುಟ ಸೇರುವುದಕ್ಕೆ ಜಾತಿವಾರು ಪ್ರಬಲ ಲಾಬಿ ಇದೆ. ಒಕ್ಕಲಿಗ ಸಮುದಾಯದಿಂದ ಅರಕಲಗೂಡಿನ ಎ.ಮಂಜು ಹೆಸರು ಪ್ರಬಲವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸುವಾಗಲೇ ಅವರಿಗೆ ಸಿದ್ದರಾಮಯ್ಯ ಈ ಭರವಸೆ ನೀಡಿದ್ದರು ಎನ್ನಲಾಗಿದೆ. ಜತೆಗೆ ಹಾಸನ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲ.
ವೀರಶೈವರ ದಂಡು: ಇನ್ನು ವೀರಶೈವ ಸಮುದಾಯದಿಂದ ಆಕಾಂಕ್ಷಿಗಳ ದಂಡೇ ಇದೆ. ಬಸವರಾಜ ರಾಯರೆಡ್ಡಿ, ಡಾ. ಎಂ.ಬಿ ಮಾಲಕರೆಡ್ಡಿ, ಅಶೋಕ್ ಪಟ್ಟಣ್, ಕೋಳಿವಾಡ ಸೇರಿದಂತೆ ಹಲವರ ಸಚಿವರಾಗುವು ಉಮೇದುವಾರಿಕೆ ತೋರಿದ್ದಾರೆ.
ಈ ಪೈಕಿ ಅಶೋಕ್ ಪಟ್ಟಣ್ ಹೆಸರು ಮುಂಚೂಣಿಯಲ್ಲಿದೆ. ಬೆಳಗಾವಿ-ಚಿಕ್ಕೋಡಿ ಜಿಲ್ಲೆ ವ್ಯಾಪ್ತಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಆದರೆ ಯಾವುದೇ ಸರ್ಕಾರ ಬಂದಾಗಲೂ ಚಿಕ್ಕೋಡಿ ಭಾಗದಿಂದ ಬಂದವರಿಗೆ ಸಚಿವ ಸಂಪುಟದಲ್ಲಿ ಸಿಂಹಪಾಲು ದೊರಕುತ್ತಿದೆ. ಈ ಅಸಮಾನತೆ ಹೋಗಲಾಡಿಸಲು ಬೆಳಗಾವಿಯನ್ನು ಪ್ರತಿನಿಧಿಸುವ ಅಶೋಕ್ ಪಟ್ಟಣ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬ ಒತ್ತಡ ಹೆಚ್ಚುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


