ಸಾವಿನಲ್ಲೂ ರಾಜಕೀಯ; ವ್ಯಾಪಕ ಖಂಡನೆ
ಸಾಹಿತಿ ಅನಂತಮೂರ್ತಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪಟಾಕಿ ಹಚ್ಚಿ ಸಂಭ್ರಮಾಚರಣೆ ನಡೆಸಿದ ಕಿಡಿಕೇಡಿಗಳ ವರ್ತನೆಗೆ ದೇಶಾದ್ಯಂತ ವ್ಯಾಪಕ ಟೀಕೆವ್ಯಕ್ತವಾಗಿದೆ.

ಚಿಕ್ಕಮಗಳೂರು: ಸಾಹಿತಿ ಅನಂತಮೂರ್ತಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಶುಕ್ರವಾರ ಚಿಕ್ಕಮಗಳೂರು ಹಾಗೂ ಮೂಡಿಗೆರೆಯಲ್ಲಿ ಪಟಾಕಿ ಹಚ್ಚಿ ಸಂಭ್ರಮಾಚರಣೆ ನಡೆಸಿದ ಕಿಡಿಕೇಡಿಗಳ ವರ್ತನೆಗೆ ದೇಶಾದ್ಯಂತ ವ್ಯಾಪಕ ಟೀಕೆವ್ಯಕ್ತವಾಗಿದೆ.
ಸಾವಿನಲ್ಲೂ ರಾಜಕೀಯ, ಇದೆಂಥಾ ಅವಮಾನ, ಅಮಾನವೀಯವರ್ತನೆ, ಇದು ಸುಸಂಸ್ಕೃತರು ನಡೆದುಕೊಳ್ಳುವ ರೀತಿಯೇ ಎಂಬಿತ್ಯಾದಿ ಟೀಕೆಗಳು ದೇಶಾದ್ಯಂತ ವ್ಯಕ್ತವಾಗಿದೆ. ಮಂಗಳೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಈ ಘಟನೆ ನಡೆದಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಮಂಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ವಿಹಿಂಪ ಕಚೇರಿ ಮುಂದೆ ಸೇರಿದ್ದ ಕಾರ್ಯಕರ್ತರು ಸುದ್ದಿವಾಹಿನಿಗಳಲ್ಲಿ ವೈದ್ಯರು ನಿಧನವನ್ನು ದೃಢಪಡಿಸುತ್ತಿದ್ದಂತೆ ಈ ಕೆಲಸ ಮಾಡಿದ್ದಾರೆ.
ಮೂಡಿಗೆರೆ ಪಟ್ಟಣದಲ್ಲೂ ಹಿಂದೂಪರ ಸಂಘಟನೆಯ ಕೆಲ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿ, ಪಟಾಕಿ ಸಿಡಿಸಿದ್ದಾರೆ. ಸಂಘಟನೆಯ ಹುಲ್ಲೆಮನೆ ಚಂದ್ರ, ಪ್ರವೀಣ್, ಭರತ್ ಕನ್ನಳ್ಳಿ, ಗಿರೀಶ್, ಪ್ರವೀಣ್ ಪೂಜಾರಿ ಮತ್ತಿತ್ತರರ ಮೇಲೆ ಸೆಕ್ಷನ್ 290, 143ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


