ಉಪ ಚುನಾವಣೆ: ಮತದಾನ ಮುಕ್ತಾಯ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ವಿಧಾನಸಭಾ ಚುನಾವಣೆ ಮತದಾನ ಮುಕ್ತಾಯಗೊಂಡಿದೆ. ಮತದಾನ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅವಘಡಗಳು ಸಂಭವಿಸಿದ ವರದಿಯಾಗಿಲ್ಲ.
ಬಳ್ಳಾರಿ ಗ್ರಾಮಾಂತರದಲ್ಲಿ ಶೇ. 73, ಚಿಕ್ಕೋಡಿ ಕ್ಷೇತ್ರದಲ್ಲಿ ಶೇ. 86, ಶಿಕಾರಿಪುರದಲ್ಲಿ ಶೇ. 70 ರಷ್ಟು ಮತದಾನವಾಗಿದೆ.
ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್. ಯಡಿಯೂರಪ್ಪ ಮತಗಟ್ಟೆ ಸಂಖ್ಯೆ 132ರಲ್ಲಿ ಮತ ಚಲಾಯಿಸಿದರು. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಂತ ವೀರಪ್ಪಗೌಡ ಸಹ ಕುಟುಂಬ ಸಮೇತರಾಗಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಸಂಸದರನ್ನು ನಿಷೇಧಿತ ಪ್ರದೇಶದೊಳಗೆ ಪ್ರವೇಶ ನೀಡಿದ್ದಕ್ಕೆ ಗಾಂಧಿ ಮಾರ್ಕೆಟ್ ಮತಗಟ್ಟೆಯ ಚುನಾವಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ
ಶಿಕಾರಿಪುರ ಬಿ.ವೈ.ರಾಘವೇಂದ್ರ - ಬಿಜೆಪಿ
ಶಾಂತವೀರಪ್ಪ ಗೌಡ - ಕಾಂಗ್ರೆಸ್
ಸಕಲೇಶ್ ಹುಲ್ಮಾರ್ - ಕರ್ನಾಟಕ ಜನತಾ ಪಕ್ಷ
ಬಳ್ಳಾರಿ ಗ್ರಾಮಾಂತರ
ಓಬಳೇಶ್ - ಬಿಜೆಪಿ
ಎನ್.ವೈ.ಗೋಪಾಲಕೃಷ್ಣ - ಕಾಂಗ್ರೆಸ್
ಬಿ.ರಘು - ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ
ಜಿ.ಚಂದ್ರಶೇಖರ - ಪಕ್ಷೇತರ
ಬಿ.ರಾಮುಡು - ಪಕ್ಷೇತರ ಸೇರಿ ಒಟ್ಟು 5 ಅಭ್ಯರ್ಥಿಗಳು.
ಚಿಕ್ಕೋಡಿ-ಸದಲಗಾ
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ - ಬಿಜೆಪಿ
ಗಣೇಶ್ ಪ್ರಕಾಶ ಹುಕ್ಕೇರಿ -ಕಾಂಗ್ರೆಸ್
ಬಿ.ವೆಂಕಟೇಶ್ -ಕರುನಾಡ ಪಾರ್ಟಿ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


