ಜಿಲ್ಲಾ ಸುದ್ದಿ

ವಿಧಾನಸೌಧ ಅಂದಗೊಳಿಸಲು 20 ಕೋಟಿ

ವಿಧಾನಸೌಧ ಅಂದಗೊಳಿಸಲು 20 ಕೋಟಿ
Published On :

ಬೆಂಗಳೂರು: ವಿಧಾನಸೌಧದ ಸೌಂದರ್ಯೀಕರಣಕ್ಕೆ ಕೊನೆಗೂ ಮುಂದಾಗಿರುವ ರಾಜ್ಯ ಸರ್ಕಾರ 20 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ. ಶೌಚಾಲಯ ನವೀಕರಣ, ಮೆಟ್ಟಿಲುಗಳಿಗೆ ಟೈಲ್ಸ್ ಅಳವಡಿಸುವುದು, ವಿಧಾಸೌದದ ಗೋಡೆಗಳನ್ನು ಸ್ಟೋನ್ ವಾಶ್ ಮಾಡುವುದು ಸೇರಿದಂತೆ ಹಲವು ಉದ್ದೇಶಗಳಿಗಾಗಿ ಈ ಹಣವನ್ನು ವಿನಿಯೋಗಿಸಲು ನಿರ್ಧರಿಸಿದ್ದು, ಈ ಬಗ್ಗೆ ವಿಸ್ತೃತ ಯೋಜನೆ ತಯಾರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ವಾಸ್ತುಶಿಲ್ಪಿಗೆ ಸೂಚನೆ ನೀಡಿದೆ.

ವಿಧಾಸೌಧದ ಅವ್ಯವಸ್ಥೆ ಬಗ್ಗೆ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಕಿತ್ತು ಹೋದ ಶೌಚಾಲಯ, ಎಲ್ಲೆಂದರಲ್ಲಿ ರಾಶಿ ಬಿದ್ದ ಖುರ್ಚಿಗಳು, ಒಡೆದು ಹೋದ ಪೈಪ್‌ಗಳಿಂದ ಶಕ್ತಿಸೌಧದ ಕಳೆ ವಿಹೀನವಾಗಿರುವ ಬಗ್ಗೆ ಪತ್ರಿಕೆ ಸರ್ಕಾರದ ಗಮನ ಸೆಳೆದಿದ್ದರಿಂದ ಸರ್ಕಾರ ಎಚ್ಚೆತ್ತಿದೆ. 20 ಕೋಟಿ ವೆಚ್ಚ ಮಾಡಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿದೆ.

ವಿಧಾಸೌಧದಲ್ಲಿರುವ 15 ಶೌಚಾಲಯಗಳ ನವೀಕರಣವೂ ಸೇರಿದೆ. ಹೋಟೆಲ್ ಲಲಿತ್ ಅಶೋಕ್ ಹಾಗೂ ಯುಬಿ ಸಿಟಿ ಮಾದರಿಯಲ್ಲಿ ಶೌಚಾಲಯ ನಿರ್ಮಾಣಗೊಳ್ಳಲಿದೆ. ವಿಧಾನಸೌಧದ ಎಲ್ಲ ಮೆಟ್ಟಿಲುಗಳಿಗೆ ವೆಟ್ರಿಫೈಡ್ ಟೈಲ್ಸ್ ಅಳವಡಿಸಲು ನಿರ್ಧರಿಸಲಾಗಿದೆ.

ವಿಧಾನಸೌಧ ಗೋಡೆಗಳ ಹೊರ ಆವರಣ ಮಬ್ಬಾಗಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ಸ್ಟೋನ್ ವಾಶ್ ಮಾಡಿ ಹೊಳಪು ತರಿಸಲು ಸಿದ್ಧವಾಗಿದ್ದ ಯೋಜನೆಗೆ ಚಾಲನೆ ನೀಡಲು ಮುಂದಾಗಿರುವ ಸರ್ಕಾರ ಅಮೆರಿಕದ ಸಂಸ್ಥೆಯೊಂದಕ್ಕೆ ಜವಾಬ್ದಾರಿ ನೀಡಲು ನಿರ್ಧರಿಸಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕೃತ ಟೆಂಡರ್ ಪ್ರಕಟಿಸಲು ನಿರ್ಧರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.