'ಪಾಕಿಸ್ತಾನವನ್ನು ನಂಬಿರಿ': ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿಗೆ ಏಳು ಆಟಗಾರರ ವಜಾಗೊಳಿಸಿದ PCBಗೆ ಹರ್ಷ ಭೋಗ್ಲೆ ಪಾಠ!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕಳಪೆ ಫಲಿತಾಂಶದ ಹಿನ್ನೆಲೆಯಲ್ಲಿ ಸರಣಿಯ ಮಧ್ಯದಲ್ಲೇ ಪಿಸಿಬಿಯು ಪಾಕಿಸ್ತಾನ ತಂಡದಿಂದ ಏಳು ಆಟಗಾರರನ್ನು ಬಿಡುಗಡೆ ಮಾಡಿದೆ.

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ತಂಡ ಸೋತ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಪ್ರವಾಸದಲ್ಲಿದ್ದ ಏಳು ಆಟಗಾರರನ್ನು ಕೈಬಿಟ್ಟು ಮನೆಗೆ ಕಳುಹಿಸಲು ನಿರ್ಧರಿಸಿತು. ಜೊತೆಗೆ ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನು ವಜಾಗೊಳಿಸಿತು. ಪಿಸಿಬಿಯ ಇಂತಹ ಅವ್ಯವಸ್ಥಿತ ನಿರ್ಧಾರವನ್ನು ಕ್ರಿಕೆಟ್ ಜಗತ್ತು ನೋಡುತ್ತಿರುವಂತೆಯೇ, ಪಾಕಿಸ್ತಾನ ಕ್ರಿಕೆಟ್‌ನ ಸದ್ಯದ ಸ್ಥಿತಿಯ ಬಗ್ಗೆ ಭಾರತದ ಖ್ಯಾತ ಕಾಮೆಂಟೇಟರ್ ಹರ್ಷ ಭೋಗ್ಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಾಕಿಸ್ತಾನ ಕ್ರಿಕೆಟ್ ತಪ್ಪು ಕಾರಣಗಳಿಗಾಗಿ ಪ್ರಪಂಚದಾದ್ಯಂತ ಹೇಗೆ ಪ್ರಸಿದ್ಧವಾಗಿದೆ ಎಂಬುದನ್ನು ತಿಳಿಸಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಭೋಗ್ಲೆ, ಬದಲಿ ಆಟಗಾರರು ಯುನೈಟೆಡ್ ಕಿಂಗ್‌ಡಮ್‌ಗೆ ಪ್ರಯಾಣಿಸಲು ಇನ್ನೂ ವೀಸಾಗಳನ್ನು ಪಡೆದಿಲ್ಲದಿರುವ ಪರಿಸ್ಥಿತಿಯಲ್ಲಿಯೂ, ಪಿಸಿಬಿ ಆಡುವ ಹನ್ನೊಂದರ ಬಳಗ ಮತ್ತು ಕೋಚಿಂಗ್ ಸಿಬ್ಬಂದಿ ಎರಡರಲ್ಲೂ ಹೇಗೆ ವ್ಯಾಪಕ ಬದಲಾವಣೆಗಳನ್ನು ಮಾಡಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.
'ನಂಬಲು ಅಸಾಧ್ಯವಾದುದನ್ನು ಮಾಡಬೇಕೆಂದರೆ ಮೊದಲು ಪಾಕಿಸ್ತಾನ ಕ್ರಿಕೆಟ್ ಅನ್ನು ನಂಬಿರಿ. ಮೊದಲ ಟೆಸ್ಟ್‌ನಲ್ಲಿ ನಾಯಕನಾಗಿದ್ದ ಸಲ್ಮಾನ್ ಅಲಿ ಆಘಾ ಅವರನ್ನು ಎರಡನೇ ಪಂದ್ಯದಿಂದ ಕೈಬಿಡಲಾಯಿತು, ಮೂರನೇ ಪಂದ್ಯಕ್ಕೂ ಮೊದಲು ಮನೆಗೆ ಕಳುಹಿಸಲಾಯಿತು! ಸರಣಿಯ ಮಧ್ಯದಲ್ಲಿ ಕೋಚ್ ಮತ್ತು ಬೌಲಿಂಗ್ ಕೋಚ್ ಹೋಗಿದ್ದರು. ಹಿರಿಯ ಕೀಪರ್ ಅನ್ನು ಮನೆಗೆ ಕಳುಹಿಸಲಾಯಿತು. ಟೆಸ್ಟ್ ಪಂದ್ಯಕ್ಕೆ ಸಿದ್ಧರಾಗುವುದನ್ನು ಬಿಟ್ಟು, ಸಮಯಕ್ಕೆ ಸರಿಯಾಗಿ ವೀಸಾ ಪಡೆಯುವ ಆಶಯದೊಂದಿಗೆ ಬದಲಿ ಆಟಗಾರರು ಕಾಯುತ್ತಿದ್ದಾರೆ. ಯಾವಾಗಲೂ ಹಾಗೆ, ಮೈದಾನದ ಹೊರಗೆ ಹೆಚ್ಚಿನ ಆಕ್ಷನ್ ಇರುತ್ತದೆ!' ಎಂದು ಅವರು ಎಕ್ಸ್ ಖಾತೆಯಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಒಟ್ಟು 10 ಪಂದ್ಯಗಳ ಅನುಭವ ಹೊಂದಿರುವ ಸೈಮ್ ಅಯೂಬ್ ಮತ್ತು ಅಬ್ದುಲ್ಲಾ ಫಜಲ್ ಅವರೊಂದಿಗೆ ಪಾಕಿಸ್ತಾನ ತಂಡವು ಐದು ಅನ್‌ಕ್ಯಾಪ್ಡ್ ಆಟಗಾರರನ್ನು ಕರೆತಂದಿದೆ. ತಂಡಕ್ಕೆ ಸೇರ್ಪಡೆಯಾದ ಐವರು ಅನ್‌ಕ್ಯಾಪ್ಡ್ ಆಟಗಾರರೆಂದರೆ ಅರಾಫತ್ ಮಿನ್ಹಾಸ್, ಮೊಹಮ್ಮದ್ ಇಮ್ರಾನ್ ಜೂನಿಯರ್, ಸಾದ್ ಬೇಗ್, ಮೊಹಮ್ಮದ್ ಇಮ್ರಾನ್ ರಾಂಧವಾ ಮತ್ತು ರಜಾವುಲ್ಲಾ.
ಪಾಕಿಸ್ತಾನದ ವೈಟ್-ಬಾಲ್ ಕೋಚಿಂಗ್ ವ್ಯವಸ್ಥೆಯ ಭಾಗವಾಗಿರುವ ಮೈಕ್ ಹೆಸ್ಸನ್ ಮತ್ತು ಆಶ್ಲೇ ನೋಫ್ಕೆ ಕ್ರಮವಾಗಿ ಮುಖ್ಯ ಕೋಚ್ ಮತ್ತು ಬೌಲಿಂಗ್ ಕೋಚ್ ಆಗಿದ್ದಾರೆ ಎಂದು ವರದಿ ತಿಳಿಸಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕಳಪೆ ಫಲಿತಾಂಶದ ಹಿನ್ನೆಲೆಯಲ್ಲಿ ಪಿಸಿಬಿಯು ಪಾಕಿಸ್ತಾನ ತಂಡದಿಂದ ಏಳು ಆಟಗಾರರನ್ನು ಬಿಡುಗಡೆ ಮಾಡಿದೆ. ಅವರಲ್ಲಿ ಮೊಹಮ್ಮದ್ ರಿಜ್ವಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಆಘಾ, ಅಲಿ ಉಸ್ಮಾನ್, ಆಮೀರ್ ಜಮಾಲ್, ಅವೈಸ್ ಜಾಫರ್ ಮತ್ತು ಖುರ್ರಂ ಶಹಜಾದ್ ಸೇರಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ತಂಡವು ಹಲವಾರು ಪ್ರಮುಖ ಬದಲಾವಣೆಗಳನ್ನು ಕಂಡಿದೆ. ಆದರೆ, ಟೆಸ್ಟ್ ಸರಣಿಯ ಮಧ್ಯದಲ್ಲಿಯೇ ಇಂತಹ ವ್ಯಾಪಕ ಬದಲಾವಣೆಗಳನ್ನು ಮಾಡುವುದು ಅಸಾಮಾನ್ಯ ನಡೆಯಾಗಿದೆ.
ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸದಲ್ಲಿ ಮೊಹಮ್ಮದ್ ರಿಜ್ವಾನ್ ಅವರ ವಿಕೆಟ್ ಕೀಪಿಂಗ್ ಉತ್ತಮವಾಗಿದ್ದರೂ, ಅವರ ಬ್ಯಾಟಿಂಗ್ ಫಾರ್ಮ್ ಕುಸಿದಿರುವುದಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರು 12 ಮತ್ತು 41 ರನ್ ಗಳಿಸಿದರು. ನಂತರ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 7 ಮತ್ತು 1 ರನ್ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



