'ಇಂಪ್ಯಾಕ್ಟ್ ಪ್ಲೇಯರ್' ನಿಯಮ ರದ್ದುಗೊಳಿಸಬೇಕು: ಸಚಿನ್ ತೆಂಡೂಲ್ಕರ್ ಹೀಗೆ ಹೇಳಿದ್ಯಾಕೆ?
2023ರಲ್ಲಿ ಪರಿಚಯಿಸಲಾದ ಇಂಪ್ಯಾಕ್ಟ್ ಪ್ಲೇಯರ್ ನಿಯಮವು, ತಂಡಗಳು ಪಂದ್ಯದ ಯಾವುದೇ ಹಂತದಲ್ಲಿ ತಮ್ಮ ಪ್ಲೇಯಿಂಗ್ ಇಲೆವೆನ್‌ನ ಒಬ್ಬ ಆಟಗಾರನ ಬದಲಿಗೆ ನಾಮನಿರ್ದೇಶಿತ ಐದು ಬದಲಿ ಆಟಗಾರರಲ್ಲಿ ಒಬ್ಬರನ್ನು ಕಣಕ್ಕಿಳಿಸಬಹುದಾಗಿದೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ವಿವಾದಾತ್ಮಕ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ರದ್ದುಗೊಳಿಸಬೇಕೆಂದು ಹೇಳಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನವನ್ನು ಪುನಃಸ್ಥಾಪಿಸಲು ಒಂದೆರಡು ಬದಲಾವಣೆಗಳನ್ನು ಸೂಚಿಸಿದ್ದಾರೆ.
2023ರಲ್ಲಿ ಪರಿಚಯಿಸಲಾದ ಇಂಪ್ಯಾಕ್ಟ್ ಪ್ಲೇಯರ್ ನಿಯಮವು, ತಂಡಗಳು ಪಂದ್ಯದ ಯಾವುದೇ ಹಂತದಲ್ಲಿ ತಮ್ಮ ಪ್ಲೇಯಿಂಗ್ ಇಲೆವೆನ್‌ನ ಒಬ್ಬ ಆಟಗಾರನ ಬದಲಿಗೆ ನಾಮನಿರ್ದೇಶಿತ ಐದು ಬದಲಿ ಆಟಗಾರರಲ್ಲಿ ಒಬ್ಬರನ್ನು ಕಣಕ್ಕಿಳಿಸಬಹುದಾಗಿದೆ.
ಈ ಹಿಂದೆ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ಮಾಜಿ ನಾಯಕರಾದ ಎಂಎಸ್ ಧೋನಿ, ರೋಹಿತ್ ಶರ್ಮಾ ಹಾಗೂ ಭಾರತ ತಂಡದ ನಾಯಕ ಶುಭಮನ್ ಗಿಲ್ ಸೇರಿದಂತೆ ಹಲವು ಪ್ರಮುಖ ಭಾರತೀಯ ಕ್ರಿಕೆಟಿಗರು ವ್ಯಾಪಕವಾಗಿ ವಿರೋಧಿಸಿದ್ದರು. ಇದೀಗ ಸಚಿನ್ ಸಹ ವಿರೋಧಿಸಿದ್ದಾರೆ.
"ಐಪಿಎಲ್ ಗೆ ಸಂಬಂಧಿಸಿದಂತೆ ವೈಯಕ್ತಿಕವಾಗಿ, ನಾನು ಹೇಳಬಹುದಾದ ಕೆಲವು ವಿಷಯಗಳಿವೆ. ಮೊದಲು ಇಂಪ್ಯಾಕ್ಟ್ ಪ್ಲೇಯರ್ ನಿಯಮ ರದ್ದುಗೊಳಿಸಬೇಕು" ಎಂದು ತೆಂಡೂಲ್ಕರ್ ಅವರು ESPNcricinfo ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದಾರೆ.
ಟಿ20 ಪಂದ್ಯವೇ ಕೇವಲ 20 ಓವರ್‌ಗಳದ್ದು. ಅದರಲ್ಲೂ ಹೆಚ್ಚುವರಿಯಾಗಿ ಒಬ್ಬ ಬ್ಯಾಟರ್‌ರನ್ನು ಆಡಿಸುವುದರಿಂದ ಬೌಲರ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇದರಿಂದ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನ ಕಳೆದುಹೋಗಿದೆ ಎಂದು ಸಚಿನ್ ಹೇಳಿದ್ದಾರೆ.
ಇನ್ನು ಪ್ರಸ್ತುತ ಇರುವ 6 ಓವರ್‌ಗಳ ಪವರ್‌ಪ್ಲೇ ನಿಯಮವನ್ನು ಬದಲಾಯಿಸಬೇಕು ಎಂದು ಸಚಿನ್ ಸಲಹೆ ನೀಡಿದ್ದಾರೆ. ಅವರ ಪ್ರಕಾರ ಮೊದಲ 4 ಓವರ್‌ಗಳು ಈಗಿರುವಂತೆ ಬ್ಯಾಟರ್‌ಗಳಿಗೆ ಅನುಕೂಲಕರವಾಗಿರಲಿ. ಉಳಿದ 2 ಓವರ್‌ಗಳ ಪವರ್‌ಪ್ಲೇಯನ್ನು ಫೀಲ್ಡಿಂಗ್ ತಂಡದ ನಾಯಕ ತನ್ನ ಇಚ್ಛೆಯ ಸಮಯದಲ್ಲಿ ಬಳಸುವ ಅವಕಾಶ ನೀಡಬೇಕು. ಈಗ ಟಿ20 ಕ್ರಿಕೆಟ್‌ನಲ್ಲಿ ಒಬ್ಬ ಬೌಲರ್ ಗರಿಷ್ಠ 4 ಓವರ್ ಮಾತ್ರ ಬೌಲಿಂಗ್ ಮಾಡಬಹುದು. ಆದರೆ ತಂಡದ ಪ್ರಮುಖ ಬೌಲರ್‌ಗೆ 5ನೇ ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಬೇಕು ಎಂದು ಸಚಿನ್ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



