ಕ್ರಿಕೆಟ್

ಶ್ರೇಯಸ್ ಅಯ್ಯರ್ ಎಲ್ಲಿದ್ದಾರೆ?: ಐಪಿಎಲ್ 2024ರಲ್ಲಿ ಟ್ರೋಫಿ ಗೆದ್ದ ತಂಡದ ನಾಯಕನನ್ನೇ ಕೈಬಿಟ್ಟ KKR ವಿರುದ್ಧ ಫ್ಯಾನ್ಸ್ ಗರಂ!

ಐಪಿಎಲ್ 2026ರಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್, 14 ಪಂದ್ಯಗಳಲ್ಲಿ ಕೇವಲ ಆರು ಗೆಲುವುಗಳನ್ನು ದಾಖಲಿಸಿದ ನಂತರ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.

ಶ್ರೇಯಸ್ ಅಯ್ಯರ್ ಎಲ್ಲಿದ್ದಾರೆ?: ಐಪಿಎಲ್ 2024ರಲ್ಲಿ ಟ್ರೋಫಿ ಗೆದ್ದ ತಂಡದ ನಾಯಕನನ್ನೇ ಕೈಬಿಟ್ಟ KKR ವಿರುದ್ಧ ಫ್ಯಾನ್ಸ್ ಗರಂ!
ಐಪಿಎಲ್ 2024ರಲ್ಲಿ ಕೆಕೆಆರ್ ತಂಡ - ಶ್ರೇಯಸ್ ಅಯ್ಯರ್
Published On :

2024ರ ಐಪಿಎಲ್ ಪ್ರಶಸ್ತಿ ಗೆಲುವಿನ ಎರಡನೇ ವಾರ್ಷಿಕೋತ್ಸವವನ್ನು ಆಚರಿಸುವ ಪೋಸ್ಟ್ ಅನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಫ್ರಾಂಚೈಸಿ ಹಂಚಿಕೊಂಡಿದ್ದು, ತಮ್ಮ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಜೊತೆಗಿನ ಸಂಬಂಧದ ಸುತ್ತಲಿನ ವಿವಾದ ಮತ್ತೆ ಹುಟ್ಟಿಕೊಂಡಿದೆ. 2025ರ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಿತು. ಅಂದಿನಿಂದ ಐಪಿಎಲ್ ಅಭಿಮಾನಿಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಕೆಕೆಆರ್ ನಡುವಿನ ಸಂಬಂಧದ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಶ್ರೇಯಸ್ ಅಯ್ಯರ್ ನಂತರ ಪಂಜಾಬ್ ಕಿಂಗ್ಸ್‌ (PBKS) ತಂಡಕ್ಕೆ ಬಿಕರಿಯಾದರು ಮತ್ತು ನಾಯಕರಾದರು. ಕೆಕೆಆರ್‌ನ ಈ ನಿರ್ಧಾರವು ಅನೇಕ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿತು. ಕೆಕೆಆರ್ ತಮ್ಮ ಮೂರನೇ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ತಂಡವನ್ನು ಮುನ್ನಡೆಸಿದ ಆಟಗಾರನನ್ನು ಅಗೌರವಿಸಿದೆ ಎಂದು ಅಭಿಮಾನಿಗಳು ಆರೋಪಿಸಿದರು.

ಮೇ 26ಕ್ಕೆ ಕೆಕೆಆರ್ ಗೆಲುವಿನ ಎರಡು ವರ್ಷ. ಈ ಸಂದರ್ಭದಲ್ಲಿ, ಫ್ರಾಂಚೈಸಿಯು ತಮ್ಮ ತಂಡವು ಟ್ರೋಫಿಯೊಂದಿಗೆ ಪೋಸ್ ನೀಡುತ್ತಿರುವ ಚಿತ್ರವೊಂದನ್ನು ಹಂಚಿಕೊಂಡಿದೆ. ಆದರೆ, ಪ್ರಶಸ್ತಿ ವಿಜೇತ ಅಭಿಯಾನದ ಸಮಯದಲ್ಲಿ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಅವರೇ ಆ ಚಿತ್ರದಲ್ಲಿ ತಂಡದೊಂದಿಗೆ ಇಲ್ಲ. ಫ್ರಾಂಚೈಸಿಯು ಆ ಆವೃತ್ತಿಯಲ್ಲಿ ಪ್ರಮುಖರ ಫೋಟೊಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿಯೂ ಶ್ರೇಯಸ್ ಅಯ್ಯರ್ ಅವರಿಲ್ಲ.

ಇದನ್ನು ಗಮನಿಸಿದ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೆಕೆಆರ್ ತಂಡವನ್ನು ಟೀಕಿಸಲು ಪ್ರಾರಂಭಿಸಿದರು. ತಂಡದ ಯಶಸ್ಸಿಗೆ ಕಾರಣರಾದ ಅಯ್ಯರ್ ಅವರಿಗೆ ಸರಿಯಾದ ಕ್ರೆಡಿಟ್ ನೀಡಲು ಫ್ರಾಂಚೈಸಿ ವಿಫಲವಾಗಿದೆ ಎಂದು ಹಲವರು ಆರೋಪಿಸಿದರು.

ಕೆಕೆಆರ್ ಇಂತಹ ಟೀಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. 2025ರಿಂದ, ಅಯ್ಯರ್ ಅವರ ಕೊಡುಗೆಯನ್ನು ಕಡೆಗಣಿಸಿ ಕೆಲವೇ ಆಟಗಾರರನ್ನು ಹೈಲೈಟ್ ಮಾಡಿದ್ದಕ್ಕಾಗಿ ಅಭಿಮಾನಿಗಳ ಒಂದು ವಿಭಾಗವು ಫ್ರಾಂಚೈಸಿಯನ್ನು ಟೀಕಿಸುತ್ತಿದೆ.

ಈಮಧ್ಯೆ, ಐಪಿಎಲ್ 2026ರಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್, 14 ಪಂದ್ಯಗಳಲ್ಲಿ ಕೇವಲ ಆರು ಗೆಲುವುಗಳನ್ನು ದಾಖಲಿಸಿದ ನಂತರ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ತಂಡವು ಸತತ ಆರು ಸೋಲುಗಳೊಂದಿಗೆ ಕಳಪೆ ಆರಂಭ ಕಂಡಿತು. ಆದರೆ, ಕೊನೆಯ ಲೀಗ್ ಪಂದ್ಯದವರೆಗೂ ಪ್ಲೇಆಫ್ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿ ಉಳಿಯುವಲ್ಲಿ ಯಶಸ್ವಿಯಾಯಿತು.

ಇದಕ್ಕೆ ವ್ಯತಿರಿಕ್ತವಾಗಿ, ಐಪಿಎಲ್ 2025ರಲ್ಲಿ ರನ್ನರ್ ಅಪ್ ಆಗಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು, ಐಪಿಎಲ್ 2026ರಲ್ಲಿ ಸತತ ಸೋಲುಗಳ ಮೂಲಕ ಕುಸಿತ ಕಂಡಿತು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೆಲುವು ಕಂಡರೂ ಕೂಡ ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಿದ್ದರಿಂದ ಪ್ಲೇಆಫ್‌‌ನಿಂದ ಹೊರಗುಳಿಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.