T20 ವಿಶ್ವಕಪ್ 2026 ಫೈನಲ್: 'ಎಲ್ಲಾ ಅವಳ ಕಾಲ್ಗುಣ'.. ಹಾರ್ದಿಕ್ ಪಾಂಡ್ಯಾಗೆ 'ಲೇಡಿ ಲಕ್' mahieka sharma.. ಹೇಳಿದ್ದೇನು?
ಈ ಗೆಲವು ಸಾಕಷ್ಟು ಭಾವನಾತ್ಮಕವಾಗಿದೆ. ಆದಾಗ್ಯೂ, ಭಾರತದಲ್ಲಿ ವಿಶ್ವ ಕಪ್ ಗೆದ್ದ ನಂತರ ಜನರ ಉತ್ಸಾಹ ಅದ್ಭುತವಾಗಿದೆ. ನಿನ್ನೆಯಿಂದ ನಾವು ಮಾಡಿದ ಪ್ರಯತ್ನವನ್ನು ನೋಡಿದಾಗ ಚಾಂಪಿಯನ್ಗಳು ನಾವೇ ಎಂದು ತಿಳಿದಿತ್ತು..

ಅಹ್ಮದಾಬಾದ್: T20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಮೂರನೇ ಬಾರಿಗೆ ಭಾರತ ತಂಡ ಪ್ರಶಸ್ತಿ ಎತ್ತಿಹಿಡಿದಿದ್ದು, ಇದಕ್ಕೆ ಪ್ರೇಯಸಿ ಮಹಿಕಾಶರ್ಮಾ ಕಾರಣ ಎಂದು ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಹೇಳಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳ ಬೃಹತ್ ಅಂತರದಿಂದ ಸೋಲಿಸಿದ ಭಾರತ, ಐತಿಹಾಸಿಕ ಟಿ20 ವಿಶ್ವಕಪ್ ಪ್ರಶಸ್ತಿ ಜಯಿಸಿತು.
ಈ ಗೆಲುವಿನ ಸಂಭ್ರಮದ ನಡುವೆ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಅವರ ಗೆಳತಿ ಮಹಿಕಾ ಶರ್ಮಾ ಕುರಿತು ಆಡಿರುವ ಮಾತುಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಹಾರ್ದಿಕ್ ಹೇಳಿದ್ದೇನು?
ಪ್ರಶಸ್ತಿ ಗೆಲುವಿನ ನಂತರ ಮಾತನಾಡಿದ ಪಾಂಡ್ಯ, 'ನನ್ನಲ್ಲಿ ಇನ್ನೂ 10 ವರ್ಷಗಳ ಕ್ರಿಕೆಟ್ ಉಳಿದಿವೆ. ಹಾಗೆಯೇ ನಾನು 10 ಐಸಿಸಿ ಪ್ರಶಸ್ತಿಗಳನ್ನು ಗೆಲ್ಲಲು ಬಯಸುತ್ತೇನೆ.
ಅದೇ ನನ್ನ ಗುರಿ. ಈ ಗೆಲವು ಸಾಕಷ್ಟು ಭಾವನಾತ್ಮಕವಾಗಿದೆ. ಆದಾಗ್ಯೂ, ಭಾರತದಲ್ಲಿ ವಿಶ್ವ ಕಪ್ ಗೆದ್ದ ನಂತರ ಜನರ ಉತ್ಸಾಹ ಅದ್ಭುತವಾಗಿದೆ. ನಿನ್ನೆಯಿಂದ ನಾವು ಮಾಡಿದ ಪ್ರಯತ್ನವನ್ನು ನೋಡಿದಾಗ ಚಾಂಪಿಯನ್ಗಳು ನಾವೇ ಎಂದು ತಿಳಿದಿತ್ತು ಎಂದರು.
ಅಂತೆಯೇ, 'ಆ ಓವರ್ ಎಸೆಯುವಾಗ ನನ್ನ ಕಣ್ಣಮುಂದೆ 2024 ರ ಟಿ20 ವಿಶ್ವಕಪ್ ಫೈನಲ್ನ ಕ್ಷಣಗಳು ಸುಳಿದವು. ಅಂದು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಓವರ್ನಲ್ಲಿ ಎಷ್ಟು ಒತ್ತಡವಿತ್ತೋ, ಇಂದೂ ಅಷ್ಟೇ ಇತ್ತು.
ಆ ನೆನಪುಗಳು ನನಗೆ ಶಾಂತವಾಗಿರಲು ಮತ್ತು ಸರಿಯಾದ ಜಾಗಕ್ಕೆ ಬೌಲಿಂಗ್ ಮಾಡಲು ಸಹಾಯ ಮಾಡಿದವು. ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ನಾನು ಇಂಗ್ಲೆಂಡ್ ವಿರುದ್ಧ 19 ನೇ ಓವರ್ ಬೌಲಿಂಗ್ ಮಾಡುವಾಗ, 2024 ರ ವಿಶ್ವಕಪ್ ಫೈನಲ್ ಬಗ್ಗೆ ಯೋಚಿಸುತ್ತಿದ್ದೆ. ಬ್ಯಾಟಿಂಗ್ ಮಾಡಲು ಹೋದಾಗ ನಾನು ಕಿಶನ್ ಮತ್ತು ಅಭಿಷೇಕ್ ಹತ್ತಿರ ಈ ವಿಚಾರದ ಬಗ್ಗೆ ಮಾತನಾಡಿದೆ ಎಂದರು.
ಮಹಿಕಾ ಬಗ್ಗೆ ಮಾತು
ಪಂದ್ಯದ ಉದ್ದಕ್ಕೂ ಹಾರ್ದಿಕ್ ನೆರಳಿನಂತೆ ಇದ್ದ ಗೆಳತಿ ಮಹೀಕಾ ಶರ್ಮಾ ತಮ್ಮ ಈ ಗೆಲುವಿನ ಹಿಂದಿನ ಶಕ್ತಿ ಎಂದು ಹಾರ್ದಿಕ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಮಹೀಕಾ ನನ್ನ ಜೀವನದಲ್ಲಿ ಬಂದಾಗಿನಿಂದ, ನಾನು ಗೆಲ್ಲುತ್ತಿದ್ದೇನೆ ಎಂದು ಹಾರ್ದಿಕ್ ಪಾಂಡ್ಯಾ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



