T20 world cup 2026: ವಿರಾಟ್ ದಾಖಲೆ ಮುರಿದ ಸಂಜು ಸ್ಯಾಮ್ಸನ್; Elite Group ಗೆ ಸೇರ್ಪಡೆ
ಭಾರತ ತಂಡದ ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅತ್ಯುತ್ತಮ ಸ್ಕೋರ್ ದಾಖಲಿಸಿ ತಂಡದ ಬೃಹತ್ ರನ್ ಗಳಿಕೆಗೆ ನೆರವಾದರು.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಫೈನಲ್ಸ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎದುರಾಳಿ ನ್ಯೂಜಿಲ್ಯಾಂಡ್ ತಂಡಕ್ಕೆ ಗೆಲ್ಲಲು 256 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ.
ಭಾರತ ತಂಡದ ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ (46 ಎಸೆತಗಳಲ್ಲಿ 89 ರನ್) ಹಾಗೂ ಅಭಿಷೇಕ್ ಶರ್ಮಾ ಅತ್ಯುತ್ತಮ ಸ್ಕೋರ್ ದಾಖಲಿಸಿ ತಂಡದ ಬೃಹತ್ ರನ್ ಗಳಿಕೆಗೆ ನೆರವಾದರು.
ಅಭಿಷೇಕ್ ಶರ್ಮಾ- ಸಂಜು ಸ್ಯಾಮ್ಸನ್ ಜೋಡಿ ಪಾಕಿಸ್ತಾನದ ದಾಖಲೆ ಮುರಿದು ಹೊಸ ವಿಶ್ವದಾಖಲೆ ನಿರ್ಮಿಸಿತು. ಇದಷ್ಟೇ ಅಲ್ಲದೇ ಅಭಿಷೇಕ್ ಶರ್ಮಾ 18 ಎಸೆತಗಳಲ್ಲಿ 50 ರನ್ ಗಳಿಸಿ ಅತಿ ವೇಗವಾಗಿ ಅರ್ಧ ಶತಕ ದಾಖಲಿಸಿ ಇಂಗ್ಲೆಂಡ್ ಆಟಗಾರ ಬೆಥೆಲ್ ಅವರ ದಾಖಲೆಯನ್ನು ಪುಡಿಗಟ್ಟಿದರೆ, ಭಾರತ ಕ್ರಿಕೆಟ್ ತಂಡದ ಪಾಲಿನ ಆಪತ್ಬಾಂಧವನಾಗಿರುವ ಸಂಜು ಸ್ಯಾಮ್ಸನ್ ಸಹ ದಾಖಲೆ ನಿರ್ಮಿಸಿದರು.

T20 ವಿಶ್ವಕಪ್ 2026 ಫೈನಲ್: 19 ಸಿಕ್ಸರ್, 37 ಬೌಂಡರಿ.. ಮತ್ತೊಂದು 250+ ಸ್ಕೋರ್; ಹಲವು ದಾಖಲೆ ನಿರ್ಮಿಸಿದ ಭಾರತ
ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಸಂಜು ಸ್ಯಾಮ್ಸನ್
ಟಿ20 ವಿಶ್ವಕಪ್ ನಲ್ಲಿ ಕಳೆದ 5 ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿರುವ ಸಂಜು ಸ್ಯಾಮ್ಸನ್ 3 ಪಂದ್ಯಗಳಲ್ಲಿ ಸತತ 50 ರನ್ ಗಳನ್ನು ಪೂರ್ಣಗೊಳಿಸಿ, ವಿಶ್ವಕಪ್ ಪಂದ್ಯದಲ್ಲಿ ಸತತ 50 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಷ್ಟೇ ಅಲ್ಲದೇ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಟಿ20 ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆಯನ್ನು ಸಂಜು ಸ್ಯಾಮ್ಸನ್ ಮುರಿದಿದ್ದಾರೆ.
ಕೊಹ್ಲಿ 2016-2021 ರಲ್ಲಿ ಸತತವಾಗಿ 50 ರನ್ ಗಳಿಸಿದ್ದರು. ಇದರ ಹೊರತಾಗಿ ಶ್ರೀಲಂಕಾ ತಂಡದ ಆಟಗಾರ ಮಹೇಲಾ ಜಯವರ್ಧನೆ (2010) ಪಾಕಿಸ್ತಾನದ ಬಾಬರ್ ಆಜಂ (2021) ಕೆಎಲ್ ರಾಹುಲ್ (2021) ಕುಸಾಲ್ ಮೆಂಡಿಸ್ (2026) ಸಾಹಿಬ್ಜಾದಾ ಫರ್ಹಾನ್ (2026) ಸತತ 50 ರನ್ ಗಳಿಸಿರುವ ಆಟಗಾರರಾಗಿದ್ದಾರೆ.
ಸೆಮೀಸ್; ಫೈನಲ್ಸ್ ನಲ್ಲಿ 50 ರನ್
ಸತತ 50 ರನ್ ಗಳಿಸಿರುವ ದಾಖಲೆ ಮಾತ್ರವಲ್ಲದೇ ಸೆಮೀಫೈನಲ್ಸ್ ಹಾಗೂ ಫೈನಲ್ಸ್ ನಲ್ಲಿ 50 ರನ್ ಗಳಿಸಿರುವ ದಾಖಲೆಯನ್ನೂ ಸಂಜು ಸ್ಯಾಮ್ಸನ್ ನಿರ್ಮಿಸಿದ್ದಾರೆ. ಈ ಮೂಲಕ ಎಲೀಟ್ ಕ್ಲಬ್ ಗೆ ಸಂಜು ಸ್ಯಾಮ್ಸನ್ ಸೇರ್ಪಡೆಯಾಗಿದ್ದಾರೆ. 2009 ರಲ್ಲಿ ಪಾಕ್ ಆಟಗಾರ ಶಾಹಿದ್ ಅಫ್ರೀದಿ ಹಾಗೂ 2014 ರಲ್ಲಿ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಸೆಮೀಸ್ ಹಾಗೂ ಫೈನಲ್ಸ್ ಎರಡೂ ಪಂದ್ಯಗಳಲ್ಲಿ 50 ರನ್ ಗಳಿಸಿದ ಆಟಗಾರರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


