T20 ವಿಶ್ವಕಪ್ 2026: 4 ಓವರ್ ನಲ್ಲಿ 53 ರನ್... ಸೈಲೆಂಟ್ ಮಾಡಲು ಬಂದು ತಮ್ಮ ತಂಡವೇ ಸೈಲೆಂಟ್ ಆಗುವಂತೆ ಮಾಡಿದ Sam Curran
ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್ ಅಂತರದಲ್ಲಿ ರೋಚಕವಾಗಿ ಮಣಿಸಿದ ಭಾರತ ಫೈನಲ್ ಗೆ ಲಗ್ಗೆ ಇಟ್ಟಿದೆ.

ಮುಂಬೈ: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳನ್ನು ಸೈಲೆಂಟ್ ಮಾಡುವುದಾಗಿ ಅತ್ಯುತ್ಸಾಹ ತೋರಿದ್ದ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ತಮ್ಮ ಕಳಪೆ ಬೌಲಿಂಗ್ ಮೂಲಕ ತಮ್ಮದೇ ತಂಡ ಸೈಲೆಂಟ್ ಆಗುವಂತೆ ಮಾಡಿದ್ದರು.
ಹೌದು.. ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ರನ್ ಅಂತರದಲ್ಲಿ ರೋಚಕವಾಗಿ ಮಣಿಸಿದ ಭಾರತ ಫೈನಲ್ ಗೆ ಲಗ್ಗೆ ಇಟ್ಟಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ಮುಂಬೈ ವಾಂಖೆಡೆ ಕ್ರೀಡಾಂಗಣಕ್ಕೆ ಬರುವ ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುತ್ತೇವೆ ಎಂದು ಹೇಳಿದ್ದರು.
ಭಾರತದ ವಿರುದ್ದದ ಸೆಮಿ ಫೈನಲ್ ಪಂದ್ಯದ ಸಿದ್ಧತೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಯಾಮ್ ಕರನ್, ಚಿಂತೆ ಬೇಡ.. ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುತ್ತೇವೆ. ನಮ್ಮ ಬಳಿ ಮ್ಯಾಜಿಕ್ ಬುಲೆಟ್ ಇದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಭಾರತದ ವಿರುದ್ದ ಗೆಲುತ್ತದೆ ಎಂದು ಹೇಳಿದ್ದರು.
'ಸಾವಿರಾರು ಅಭಿಮಾನಿಗಳು ವಾಂಖೆಡೆ ಕ್ರೀಡಾಂಗಣಕ್ಕೆ ಬರುತ್ತಾರೆ. ನಾವು ಅವರೆಲ್ಲರನ್ನೂ ಮೌನವಾಗಿಡಲು ನಮ್ಮದೇಯಾದ ಪ್ಲಾನ್ ರೆಡಿ ಮಾಡುತ್ತಿದ್ದೇವೆ. ಭಾರತ ಸೋತರೆ, ಅವರೆಲ್ಲರು ತಮ್ಮ ಕೈಗಳನ್ನು ತಲೆಯ ಮೇಲಿಟ್ಟುಕೊಂಡು ಸುಮ್ಮನೇ ಕುಳಿತುಕೊಳ್ಳುತ್ತಾರೆ. ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಮರೆಯಲಾಗದ ಸೋಲನ್ನು ನಾಳೆ ಅನುಭವಿಸಲಿದೆ' ಎಂದು ಸ್ಯಾಮ್ ಕರನ್ ಭವಿಷ್ಯ ನುಡಿದಿದ್ದರು.
4 ಓವರ್ ನಲ್ಲಿ 53 ರನ್.. ತಮ್ಮದೇ ತಂಡ ಸೈಲೆಂಟ್ ಆಗುವಂತೆ ಮಾಡಿದ Sam Curran
ಸ್ಯಾಮ್ ಕರನ್ ಅವರ ಈ ಹೇಳಿಕೆ ವ್ಯಾಪಕ ವೈರಲ್ ಆಗಿತ್ತು. ಬಳಿಕ ನಡೆದ 2ನೇ ಸೆಮೀ ಫೈನಲ್ ಪಂದ್ಯದಲ್ಲಿ ಭಾರತ 7 ರನ್ ಅಂತರದಲ್ಲಿ ಗೆದ್ದು ಫೈನಲ್ ಗೂ ಲಗ್ಗೆ ಇಟ್ಟಿದೆ. ಈ ನಡುವೆ ಮತ್ತೆ ಸ್ಯಾಮ್ ಕರನ್ ಅವರನ್ನು ಭಾರತೀಯ ಅಭಿಮಾನಿಗಳು ವ್ಯಾಪಕ ಟ್ರೋಲ್ ಮಾಡುತ್ತಿದ್ದಾರೆ.
2ನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ತಮ್ಮ ಕೋಟಾದ 4 ಓವರ್ ನಲ್ಲಿ ಬರೊಬ್ಬರಿ 53 ರನ್ ನೀಡಿದ್ದರು. ಅವರ ಈ ಕಳಪೆ ಬೌಲಿಂಗ್ ನಿಂದಾಗಿ ಭಾರತ ಬೃಹತ್ ಮೊತ್ತ ಪೇರಿಸುವಂತಾಯಿತು.
ಸ್ಯಾಮ್ ಕರನ್ ಮಾತ್ರವಲ್ಲದೇ ಇಂಗ್ಲೆಂಡ್ ಎಲ್ಲ ಬೌಲರ್ ಗಳು ಸರಾಸರಿ 13 ರಂತೆ ರನ್ ನೀಡಿದ್ದರು. ಇದು ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಬೌಲಿಂಗ್ ಮಾತ್ರವಲ್ಲದೇ ಸ್ಯಾಮ್ ಕರನ್ ಬ್ಯಾಟಿಂಗ್ ನಲ್ಲೂ ವೈಫಲ್ಯ ಅನುಭವಿಸಿದರು. ಇಂಗ್ಲೆಂಡ್ ಗೆಲುವಿಗೆ ನಿರ್ಣಾಯಕವಾಗಿದ್ದ ಕೊನೆಯ 6 ಓವರ್ಗಳ ವೇಳೆ ಬ್ಯಾಟಿಂಗ್ಗೆ ಆಗಮಿಸಿದ ಸ್ಯಾಮ್ ಕರನ್ 14 ಎಸೆತಗಳನ್ನು ಎದುರಿಸಿ ಕೇವಲ 18 ರನ್ಗಳನ್ನು ಮಾತ್ರ ಕಲೆಹಾಕಿದರು.
ಆ ಮೂಲಕ ಸ್ಯಾಮ್ ಕರನ್ ಭಾರತೀಯ ಅಭಿಮಾನಿಗಳನ್ನು ಸೈಲೆಂಟ್ ಮಾಡುತ್ತೇವೆ ಎಂದು ಹೇಳಿ ತಮ್ಮದೇ ತಂಡ ಸೈಲೆಂಟ್ ಆಗುವಂತೆ ಮಾಡಿದ್ದಾರೆ ಎಂದು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



