T20 World Cup 2026: ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು; ದಕ್ಷಿಣ ಆಫ್ರಿಕಾ ಕೋಚ್ ಬೇಸರ!
ಜಾಗತಿಕ ಮಟ್ಟದಲ್ಲಿ ಪ್ರಮುಖ ನಾಕೌಟ್ ಪಂದ್ಯಗಳಲ್ಲಿಯೇ ವಿಫಲವಾಗುವ ಮೂಲಕ 'ಚೋಕರ್ಸ್' ಎಂದು ಕರೆಯಲ್ಪಡುವ ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಕೂಡ ಅದೇ ರೀತಿಯಲ್ಲಿ ಎಡವಿತು.

ದಕ್ಷಿಣ ಆಫ್ರಿಕಾದ ಕೋಚ್ ಶುಕ್ರಿ ಕಾನ್ರಾಡ್ ಬುಧವಾರ ಯಾವುದೇ ನೆಪ ಹೇಳದೆ, ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ತಂಡದ ಒಂಬತ್ತು ವಿಕೆಟ್‌ಗಳ ಸೋಲು ಅತ್ಯಂತ ಕೆಟ್ಟ ರೀತಿಯಲ್ಲಿತ್ತು ಎಂದು ಕರೆದರು. 2024ರ ರನ್ನರ್-ಅಪ್ ದಕ್ಷಿಣ ಆಫ್ರಿಕಾ ಕೋಲ್ಕತ್ತಾದಲ್ಲಿ ನಡೆದ ನಾಕೌಟ್ ಪಂದ್ಯದವರೆಗೂ ಅಜೇಯವಾಗಿ ಮುನ್ನಡೆದಿತ್ತು. ಆದರೆ, ನ್ಯೂಜಿಲೆಂಡ್ 7.1 ಓವರ್‌ಗಳು ಬಾಕಿ ಇರುವಾಗಲೇ 170 ರನ್‌ಗಳ ಗುರಿಯನ್ನು ಬೆನ್ನಟ್ಟಿ ಭರ್ಜರಿ ಜಯ ಕಂಡಿತು. ಈ ಮೂಲಕ ದಕ್ಷಿಣ ಆಫ್ರಿಕಾದ ವಿಶ್ವಕಪ್ ಪ್ರಯಾಣ ಹೀನಾಯ ಸೋಲಿನೊಂದಿಗೆ ಕೊನೆಗೊಂಡಿತು. ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಫಿನ್ ಅಲೆನ್ 33 ಎಸೆತಗಳಲ್ಲಿ ಅತಿ ವೇಗದ ಟಿ20 ವಿಶ್ವಕಪ್ ಶತಕ ಬಾರಿಸಿ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ಗೆ ತಮ್ಮ ತಂಡವನ್ನು ಕೊಂಡೊಯ್ದರು.
ಜಾಗತಿಕ ಮಟ್ಟದಲ್ಲಿ ಪ್ರಮುಖ ನಾಕೌಟ್ ಪಂದ್ಯಗಳಲ್ಲಿಯೇ ವಿಫಲವಾಗುವ ಮೂಲಕ 'ಚೋಕರ್ಸ್' ಎಂದು ಕರೆಯಲ್ಪಡುವ ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಕೂಡ ಅದೇ ರೀತಿಯಲ್ಲಿ ಎಡವಿತು. ಪಂದ್ಯಾವಳಿ ಆರಂಭದಿಂದಲೂ ದಕ್ಷಿಣ ಆಫ್ರಿಕಾ ಉತ್ತಮ ಪ್ರದರ್ಶ ನೀಡಿತ್ತು.
ದಕ್ಷಿಣ ಆಫ್ರಿಕಾ ಒತ್ತಡದಲ್ಲಿ ಕುಸಿದಿಲ್ಲ, ಬದಲಿಗೆ ಅವರು ಸಂಪೂರ್ಣವಾಗಿ ಆಡಲಿಲ್ಲ. ಇದು ಭಾರಿ ಸೋಲು. ದಕ್ಷಿಣ ಆಫ್ರಿಕಾ ಒತ್ತಡದಲ್ಲಿ 'ಉಸಿರುಗಟ್ಟಿದ' ಕಾರಣ ಸೋಲಿಲ್ಲ, ಬದಲಾಗಿ ಎದುರಾಳಿ ತಂಡದ ಮುಂದೆ ಸಂಪೂರ್ಣವಾಗಿ ಸೋಲೊಪ್ಪಿಕೊಂಡಿದೆ ಎಂದು ಕೋಚ್ ಕಾನ್ರಾಡ್ ಸುದ್ದಿಗಾರರಿಗೆ ತಿಳಿಸಿದರು.
'ಈ ಎಲ್ಲ ವ್ಯಕ್ತಿಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ದಕ್ಷಿಣ ಆಫ್ರಿಕಾ ತಂಡವು ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗೆ ಬಂದಾಗ, ಅನೇಕ ಜನರು ಈ ತಂಡವು ಸೆಮಿಫೈನಲ್ ತಲುಪುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಹೀಗಾಗಿ, ಸೆಮಿಫೈನಲ್ ತಲುಪಿದ್ದು ಒಂದು ಸಾಧನೆಯಾಗಿದೆ' ಎಂದರು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡದ ಬೌಲರ್‌ಗಳು ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್‌ಗಳನ್ನು ಕಾಡಿದರು. ದಕ್ಷಿಣ ಆಫ್ರಿಕಾ ಆರಂಭದಲ್ಲಿಯೇ 77 ರನ್‌ಗಳಿಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು.
ಫಿನ್ ಅಲೆನ್ ಮತ್ತು ಟಿಮ್ ಸೈಫರ್ಟ್ (58) ರನ್ ಗಳಿಸಿ ಮೊದಲ ವಿಕೆಟ್ ವೇಳೆಗೆ 117 ರನ್ ಗಳಿಸಿ ತಂಡಕ್ಕೆ ಭರ್ಜರಿ ಅಡಿಪಾಯ ಹಾಕಿದರು. ನ್ಯೂಜಿಲೆಂಡ್ ಬ್ಯಾಟರ್‌ಗಳ ಮುಂದೆ ದಕ್ಷಿಣ ಆಪ್ರಿಕಾದ ಯಾವುದೇ ಬೌಲರ್‌ಗಳು ನಿಲ್ಲಲಿಲ್ಲ. ಅಲೆನ್ ಸತತ ಎರಡು ಬೌಂಡರಿ, ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ ಗೆಲುವಿನ ರನ್ ಗಳಿಸಿ ಈಡನ್ ಗಾರ್ಡನ್ಸ್‌ನಲ್ಲಿ ತಂಡವನ್ನು ಗೆಲ್ಲಿಸುವುದರೊಂದಿಗೆ ತಾವು ಶತಕ ಪೂರೈಸಿದರು.
'ದಕ್ಷಿಣ ಆಫ್ರಿಕಾ ತಂಡವು ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿದ್ದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನ ಒಂದು ಪ್ರಮುಖ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿತು. ತಮ್ಮ ಹೆಚ್ಚಿನ ಪಂದ್ಯಗಳನ್ನು ಒಂದೇ ಸ್ಥಳದಲ್ಲಿ (ಅಹಮದಾಬಾದ್‌ನಲ್ಲಿ) ಆಡಿರುವುದು ತಂಡದ ಮೇಲೆ ಪರಿಣಾಮ ಬೀರಿರಬಹುದು. ಆದರೆ, ಅದನ್ನು ಸೋಲಿಗೆ ನೆಪವಾಗಿ ಬಳಸಲು ತಾವು ಬಯಸುವುದಿಲ್ಲ' ಎಂದು ಶುಕ್ರಿ ಕಾನ್ರಾಡ್ ಹೇಳಿದರು.
ದಕ್ಷಿಣ ಆಫ್ರಿಕಾ ತನ್ನ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಅಹಮದಾಬಾದ್‌ನಲ್ಲಿ ಆಡಿತು. ಇದರಲ್ಲಿ ಸೂಪರ್ 8 ಹಂತದಲ್ಲಿ ಹಾಲಿ ಚಾಂಪಿಯನ್ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಗೆಲುವುಗಳು ಸೇರಿವೆ.
'ದಕ್ಷಿಣ ಆಫ್ರಿಕಾ ತಂಡವು ಕೆಟ್ಟ ರಾತ್ರಿಯನ್ನು ಎದುರಿಸಿತು. ಏಕೆಂದರೆ, ನ್ಯೂಜಿಲೆಂಡ್ ಅತ್ಯುತ್ತಮವಾಗಿ ಆಡಿತು ಮತ್ತು ಪಂದ್ಯದ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿತು. ಅವರಿಗೆ (ದಕ್ಷಿಣ ಆಫ್ರಿಕಾ) ಚೇತರಿಸಿಕೊಳ್ಳಲು ಯಾವುದೇ ಅವಕಾಶವನ್ನು ನೀಡಲಿಲ್ಲ' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



