ಸೆಮಿಸ್ ನಿರ್ಣಾಯಕ ಪಂದ್ಯದಲ್ಲಿ ಭಾರತ ಕಳಪೆ ಫೀಲ್ಡಿಂಗ್; 195 ರನ್ ಬಾರಿಸಿದ ವೆಸ್ಟ್ ಇಂಡೀಸ್!
2026ರ T20 ವಿಶ್ವಕಪ್‌ನ ಅಂತಿಮ ಸೂಪರ್ 8 ಪಂದ್ಯದಲ್ಲಿ ಭಾರತದ ವಿರುದ್ಧ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿದೆ.

2026ರ T20 ವಿಶ್ವಕಪ್‌ನ ಅಂತಿಮ ಸೂಪರ್ 8 ಪಂದ್ಯದಲ್ಲಿ ಭಾರತದ ವಿರುದ್ಧ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿದೆ. ರೋಸ್ಟನ್ ಚೇಸ್ ಮತ್ತು ಶಾಯ್ ಹೋಪ್ 53 ಎಸೆತಗಳಲ್ಲಿ 68 ರನ್‌ಗಳ ಆರಂಭಿಕ ಜೊತೆಯಾಟದೊಂದಿಗೆ ವೆಸ್ಟ್ ಇಂಡೀಸ್‌ಗೆ ಉತ್ತಮ ಆರಂಭ ನೀಡಿದರು. 32 ರನ್ ಗಳಿಸಿದ್ದ ಹೋಪ್ ಅವರನ್ನು ಔಟ್ ಮಾಡಿ ವರುಣ್ ಚಕ್ರವರ್ತಿ ವಿಂಡೀಸ್ ಗೆ ಮೊದಲ ಆಘಾತ ನೀಡಿದರು. ಬುಮ್ರಾ ಒಂದೇ ಓವರ್‌ನಲ್ಲಿ ಶಿಮ್ರಾನ್ ಹೆಟ್ಮೈಯರ್ (27) ಮತ್ತು ರೋಸ್ಟನ್ ಚೇಸ್ (40) ಅವರನ್ನು ಔಟ್ ಮಾಡಿದರು. ಹಾರ್ದಿಕ್ ಪಾಂಡ್ಯ ರುದರ್ಫೋರ್ಡ್ ಅವರನ್ನು ಔಟ್ ಮಾಡಿದರು.
ವೆಸ್ಟ್ ಇಂಡೀಸ್ 4 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 196 ರನ್‌ಗಳ ಗುರಿಯನ್ನು ನೀಡಿದೆ. ಸೆಮಿಫೈನಲ್ ತಲುಪಲು ಭಾರತ ಇತಿಹಾಸ ನಿರ್ಮಿಸಬೇಕಾಗಿದೆ. ಈಡನ್ ಗಾರ್ಡನ್ಸ್‌ನಲ್ಲಿ ಟೀಮ್ ಇಂಡಿಯಾದ ಅತ್ಯಧಿಕ ರನ್ ಚೇಸ್ 158. ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತ್ತು.

'ಪಾಕಿಸ್ತಾನ ಹೊರಬಿದ್ದಿದ್ದು ಪರವಾಗಿಲ್ಲ, ಆದರೆ ಭಾರತ ಸೆಮಿಫೈನಲ್ಗೆ ಅರ್ಹತೆ ಪಡೆಯಲ್ಲ': ಪಾಕ್ ಮಾಜಿ ಆಟಗಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


