ಕ್ರಿಕೆಟ್

India vs Ireland 2nd t20: ಭಾರತಕ್ಕೆ ಸೋಲು; 1 ರನ್ ನಿಂದ ಗೆದ್ದ ಐರ್ಲೆಂಡ್ ಗೆ ಸರಣಿ!

2 ನೇ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಎದುರಾಳಿ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಉರುಳಿಸಿ 154 ರನ್ ಗಳಿಗೆ ಸೀಮಿತಗೊಳಿಸಿತು.

India vs Ireland 2nd t20: ಭಾರತಕ್ಕೆ ಸೋಲು; 1 ರನ್ ನಿಂದ ಗೆದ್ದ ಐರ್ಲೆಂಡ್ ಗೆ ಸರಣಿ!
ಐರ್ಲೆಂಡ್ ಕ್ರಿಕೆಟ್ ತಂಡ — online desk
Published On :

ಐರ್ಲೆಂಡ್ ನಲ್ಲಿ ನಡೆದ ಭಾರತ- ಐರ್ಲೆಂಡ್ 2 ನೇ ಟಿ20 ಪಂದ್ಯದಲ್ಲೂ ಭಾರತ ಸೋಲು ಕಂಡಿದ್ದು, 1 ರನ್ ನಿಂದ ಗೆದ್ದ ಆತಿಥೇಯ ತಂಡ ಸರಣಿ ವಶಕ್ಕೆ ಪಡೆದುಕೊಂಡಿದೆ. ಸರಣಿಯ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಐರ್ಲೆಂಡ್ ವೈಟ್​ ವಾಶ್​ ಸಾಧಿಸಿದೆ.

2 ನೇ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಎದುರಾಳಿ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಉರುಳಿಸಿ 154 ರನ್ ಗಳಿಗೆ ಸೀಮಿತಗೊಳಿಸಿತು.

ಈ ಮಧ್ಯೆ ಮಳೆಯಿಂದಾಗಿ ಪಂದ್ಯ ಕೆಲವು ಕಾಲ ಸ್ಥಗಿತಗೊಂಡಿತ್ತು. ಆದರೆ ಕೆಲವೇ ಸಮಯದಲ್ಲಿ ಮಳೆ ಕಡಿಮೆಯಾಗಿ ಪಂದ್ಯ ಮತ್ತೆ ಪ್ರಾರಂಭವಾಯಿತು.

ರನ್ ಚೇಸಿಂಗ್ ನಲ್ಲಿ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿ, ಒನ್ ಡೌನ್‌ನಲ್ಲಿ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೆಚ್ಚಿಸಿತು. ಪರಿಣಾಮ ಭಾರತ ನಿಗದಿತ 20 ಒವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ( 1 ಎಸೆತ 0 ರನ್) ಅಭಿಷೇಕ್ ಶರ್ಮಾ (1 ಎಸೆತ 0 ರನ್) ರನ್ ಗಳಿಸದೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ನಡೆದಿದ್ದು ತೀವ್ರ ಹಿನ್ನಡೆಯಾಯಿತು. ಇದು ಉಳಿದ ಬ್ಯಾಟ್ಸ್ ಮನ್ ಗಳ ಮೇಲಿನ ಒತ್ತಡವನ್ನು ಹೆಚ್ಚಿಸಿತು. ಇಶಾನ್ ಕಿಶನ್ 11 ಎಸೆತಗಳಲ್ಲಿ 12 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 7 ಎಸೆತಗಳಲ್ಲಿ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದು, ಭಾರಿ ನಿರಾಶೆ ಮೂಡಿಸಿತು.

ತಿಲಕ್ ವರ್ಮಾ 46 ಎಸೆತಗಳಲ್ಲಿ 55 ರನ್ ಗಳಿಸಿದರು. ಅಕ್ಸರ್ ಪಟೇಲ್ 18 ಎಸೆತಗಳಲ್ಲಿ 14 ರನ್, 16 ಎಸೆತಗಳಲ್ಲಿ 20 ರನ್ ಗಳಿಸಿದ ಶಿವಮ್ ದುಬೆ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ವಿಫಲರಾದರು. ಹರ್ಷಿತ್ ರಾಣ 10 ಎಸೆತಗಳಲ್ಲಿ 21 ರನ್ ಗಳಿಸಿದರು. ಕೊನೆ ಕ್ಷಣದವರೆಗೂ ಭಾರತದ ಗೆಲುವಿನ ಕನಸು ಜೀವಂತವಾಗಿತ್ತು. ಆದರೆ ಹರ್ಷಿತ್ ರಾಣ ಕೊನೆಯ 1ಎಸೆತದಲ್ಲಿ ಬೌಂಡರಿ ಗಳಿಸಲು ಯತ್ನಿಸಿ ಕ್ಯಾಚ್ ಇತ್ತು ನಿರ್ಗಮಿಸಿದ್ದು ಐರ್ಲೆಂಡ್ ಕಡೆಗೆ ಪಂದ್ಯವನ್ನು ತಿರುಗಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.