Vaibhav Sooryavanshi: ಟೀಂ ಇಂಡಿಯಾಗೆ ದೊಡ್ಡ ತಲೆನೋವಾದ ವೈಭವ್; ಸ್ಟಾರ್ ಓಪನರ್ ಕೈಬಿಡುವಂತೆ ಕೈಫ್ ಸಂದೇಶ!
ಈ ಸಂದಿಗ್ಧತೆಯ ಕುರಿತು ಮಾತನಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಆರಂಭಿಕರಾಗಿ ಸಂಜು ಸ್ಯಾಮ್ಸನ್ ಜೊತೆ ಕಣಕ್ಕಿಳಿಯಲು ವೈಭವ್ ಸೂರ್ಯವಂಶಿ ಅವರೇ ಭಾರತದ ಅತ್ಯುತ್ತಮ ಆಯ್ಕೆಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐರ್ಲೆಂಡ್ ವಿರುದ್ಧ ಬೆಲ್ಫಾಸ್ಟ್ನಲ್ಲಿ ಶುಕ್ರವಾರ ನಡೆಯಲಿರುವ ಟಿ20 ಸರಣಿಯ ಆರಂಭಿಕ ಪಂದ್ಯಕ್ಕೂ ಮುನ್ನ ಭಾರತ ತಂಡದ ಮ್ಯಾನೇಜ್ಮೆಂಟ್ಗೆ, ಆಡುವ ಹನ್ನೊಂದು 11 ಆಟಗಾರರ ಆಯ್ಕೆ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸದ್ಯ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರು ಭಾರತ ತಂಡದ ಆರಂಭಿಕ ಜೋಡಿಯಾಗಿ ಭದ್ರವಾಗಿ ನೆಲೆಯೂರಿದ್ದಾರೆ. ಆದರೆ, ಟೀಮ್ ಮ್ಯಾನೇಜ್ಮೆಂಟ್ ಈಗ ಅಭಿಷೇಕ್ ಶರ್ಮಾ ಅವರನ್ನು ಆರಂಭಿಕ ಸ್ಥಾನದಿಂದ ಕೆಳಗಿಳಿಸಿ, ಆ ಜಾಗಕ್ಕೆ 15 ವರ್ಷದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಬೇಕು ಎಂಬ ಗಂಭೀರ ಚರ್ಚೆ ಆರಂಭವಾಗಿದೆ.
ಈ ಸಂದಿಗ್ಧತೆಯ ಕುರಿತು ಮಾತನಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಆರಂಭಿಕರಾಗಿ ಸಂಜು ಸ್ಯಾಮ್ಸನ್ ಜೊತೆ ಕಣಕ್ಕಿಳಿಯಲು ವೈಭವ್ ಸೂರ್ಯವಂಶಿ ಅವರೇ ಭಾರತದ ಅತ್ಯುತ್ತಮ ಆಯ್ಕೆಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ನಾನು ಹೇಳುತ್ತಿರುವುದು ಅದನ್ನೇ" ಎಂದು ಕೈಫ್ ವಿಡಿಯೋದಲ್ಲಿ ತಿಳಿಸಿದ್ದು, ಭಾರತೀಯ ತಂಡವನ್ನು ಅಭಿಷೇಕ್ ಮತ್ತು ಸ್ಯಾಮ್ಸನ್ ಅವರ ಸ್ಟಾರ್ ಓಪನರ್ ಜೋಡಿಯಿಂದ ಹೊರಬಂದು ಸೂರ್ಯವಂಶಿಗೆ ಸ್ಥಳಾವಕಾಶ ನೀಡುವಂತೆ ಹೇಳಿದ್ದಾರೆ.
ವೈಭವ್ ಸೂರ್ಯವಂಶಿಗೆ ಜಾಗ ಮಾಡಿಕೊಡಲು ಅಭಿಷೇಕ್ ಮತ್ತು ಸ್ಯಾಮ್ಸನ್ ಜೋಡಿಯನ್ನು ಬದಲಾಯಿಸಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೈಫ್, ನಾನು ಅದನ್ನೇ ಹೇಳುತ್ತಿದ್ದೇನೆ. ಹಿಂದೆ ಸೂರ್ಯಕುಮಾರ್ ಯಾದವ್ ವಿಶ್ವಕಪ್ ಗೆದ್ದರು, ನಂತರ ಮ್ಯಾನೇಜ್ಮೆಂಟ್ ಮುಂದೆ ಸಾಗಿತು. ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿ ಗೆದ್ದರು, ಆ ಬಳಿಕವೂ ತಂಡ ಮುಂದೆ ಸಾಗಿತು ಅಲ್ಲವೇ..? ಹಾಗಾಗಿ ನೀವು ಯಾವಾಗಲೂ ಭವಿಷ್ಯವನ್ನು ನೋಡಬೇಕು. ದೀರ್ಘಕಾಲದವರೆಗೆ ತಂಡಕ್ಕೆ ಯಾರು ಸೇವೆ ಸಲ್ಲಿಸಬಲ್ಲರು ಮತ್ತು ಸದ್ಯ ಲಭ್ಯವಿರುವ ಆಟಗಾರರಲ್ಲಿ ಯಾರು ಅತ್ಯುತ್ತಮ ಆಟಗಾರ ಎಂಬುದನ್ನು ಗಮನಿಸಬೇಕು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



