0,0,W,0,W,W: ಲಾರ್ಡ್ಸ್‌ನಲ್ಲಿ ಅಬ್ಬರಿಸಿದ ಓಲಿ ರಾಬಿನ್ಸನ್; ವೈಭವ್ ಸೂರ್ಯವಂಶಿ ವಿಷಯ ಚರ್ಚೆ, ಯಾಕೆ ಗೊತ್ತಾ?
ಭಾರತದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಹಾಗೂ ಓಲಿ ರಾಬಿನ್ಸನ್ ನಡುವೆ ಕ್ರಿಕೆಟ್ ಅಭಿಮಾನಿಗಳು ಚರ್ಚಿಸಲು ಆರಂಭಿಸಿದ್ದಾರೆ.

ಲಾರ್ಡ್ಸ್: ತನ್ನ ವೃತ್ತಿಜೀವನವೇ ಮುಗಿಯಿತು ಎಂಬ ಆತಂಕದ ಕಾರ್ಮೋಡದಲ್ಲಿದ್ದ ಇಂಗ್ಲೆಂಡ್ ವೇಗಿ ಓಲಿ ರಾಬಿನ್ಸನ್, ಗುರುವಾರ ನ್ಯೂಜಿಲೆಂಡ್ ವಿರುದ್ಧಆರಂಭವಾದ ಟೆಸ್ಟ್ ಪಂದ್ಯದ ಮೊದಲ ದಿನವೇ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
ತಮ್ಮ ಮೊದಲ ಓವರ್‌ನಲ್ಲೇ ಯಾವುದೇ ರನ್ ನೀಡದೆ 3 ವಿಕೆಟ್ (0,0,W,0,W,W) ಪಡೆದು ಅಬ್ಬರಿಸಿದರು. ಹೌದು ತಮ್ಮ ಮೊದಲ ಹಾಗೂ ಎರಡನೇ ಎಸೆತಕ್ಕೆ ಯಾವುದೇ ರನ್ ನೀಡದ ಓಲಿ ರಾಬಿನ್ಸನ್, 3ನೇ ಎಸೆತದಲ್ಲಿ ಡೆವೊನ್ ಕಾನ್ವೆ ವಿಕೆಟ್ ಪಡೆದರು.
ಇನ್ನೂ 4ನೇ ಎಸೆತದಲ್ಲೂ ಯಾವುದೇ ರನ್ ನೀಡದ ರಾಬಿನ್ಸನ್, 5 ಮತ್ತು 6ನೇ ಎಸೆತದಲ್ಲಿ ಕ್ರಮವಾಗಿ ಕೇನ್ ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ ಅವರ ವಿಕೆಟ್ ಪಡೆದರು. ಈ ಮಾರಕ ಬೌಲಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ನಡುವೆ ಭಾರತದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಹಾಗೂ ಓಲಿ ರಾಬಿನ್ಸನ್ ನಡುವೆ ಕ್ರಿಕೆಟ್ ಅಭಿಮಾನಿಗಳು ಚರ್ಚಿಸಲು ಆರಂಭಿಸಿದ್ದಾರೆ. ಒಂದು ವೇಳೆ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಪರಿಸ್ಥಿತಿಯಲ್ಲಿದ್ದಿದ್ದರೆ ರಾಬಿನ್ಸನ್ ಅವರ ಆ ಮಾರಕ ದಾಳಿಯನ್ನು ಹೇಗೆ ಎದುರಿಸಿ ಕ್ರೀಸ್ ನಲ್ಲಿ ಉಳಿಯುತ್ತಿದ್ದರು ಎಂಬುದಾಗಿ ಚರ್ಚೆ ನಡೆಸುತ್ತಿದ್ದಾರೆ.
ಲಾರ್ಡ್ಸ್ ಮೈದಾನದ ಈ ಸವಾಲಿನ ಪಿಚ್‌ನಲ್ಲಿ ಇಂಗ್ಲೆಂಡ್ ವೇಗಿಯ ಮಾರಕ ದಾಳಿಯನ್ನು ಎದುರಿಸಲು ವೈಭವ್ ಸೂರ್ಯವಂಶಿಗೆ ಆಗುತ್ತಿರಲಿಲ್ಲ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ವೈಭವ್ ಇನ್ನೂ ಭಾರತ ತಂಡಕ್ಕೇ ಪದಾರ್ಪಣೆ ಮಾಡಿಲ್ಲ, ಅಷ್ಟರಲ್ಲೇ ಇಂತಹ ಕಠಿಣ ಪಿಚ್‌ಗಳಲ್ಲಿ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಅಳೆಯುವುದು ಅಥವಾ ನಿರ್ಣಯಿಸುವುದು ಸರಿಯಲ್ಲ ಎಂದು ಕೆಲವರು ಯುವ ಆಟಗಾರನನ್ನು ಬೆಂಬಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



