ರನ್‌ಗಳು, ಟ್ರೋಫಿಗಳು, ಪ್ರಶಸ್ತಿಗಳು ಬರುತ್ತವೆ ಹೋಗುತ್ತವೆ; ಆದರೆ...: ಸ್ಮೃತಿ ಮಂಧಾನಾ ಬರ್ತ್ ಡೇಗೆ ಜೆಮಿಮಾ ಬರೆದ ಭಾವುಕ ಫೋಸ್ಟ್ ವೈರಲ್!
ಜೆಮಿಮಾ ರೊಡ್ರಿಗಸ್ ಅವರು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪತ್ರವನ್ನು ಪೋಸ್ಟ್ ಮಾಡಿದ್ದು, ತಮ್ಮ ವೃತ್ತಿಪರ ಪ್ರಯಾಣದಲ್ಲಿ ವಿವಿಧ ಅನುಭವಗಳ ಮೂಲಕ ಸ್ಮೃತಿ ಮಂಧನಾ ಹಾಗೂ ತಮ್ಮ ಸಂಬಂಧ ಗಟ್ಟಿಯಾಗಿದೆ ಎಂದು ಒತ್ತಿ ಹೇಳಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧನಾ ಅವರು 30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರ ಆಪ್ತ ಗೆಳತಿ ಹಾಗೂ ಸಹ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಅವರು ಹೃದಯಸ್ಪರ್ಶಿ ಸಂದೇಶದ ಮೂಲಕ ಶುಭ ಕೋರಿದ್ದಾರೆ.
ಜೆಮಿಮಾ ರೊಡ್ರಿಗಸ್ ಅವರು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪತ್ರವನ್ನು ಪೋಸ್ಟ್ ಮಾಡಿದ್ದು, ತಮ್ಮ ವೃತ್ತಿಪರ ಪ್ರಯಾಣದಲ್ಲಿ ವಿವಿಧ ಅನುಭವಗಳ ಮೂಲಕ ಸ್ಮೃತಿ ಮಂಧನಾ ಹಾಗೂ ತಮ್ಮ ಸಂಬಂಧ ಗಟ್ಟಿಯಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಮಂಧಾನ ಅವರ ಬೆಂಬಲಕ್ಕೆ ಅಪಾರ ಕೃತಜ್ಞತೆಯನ್ನು ಸಲ್ಲಿಸಿದ ಜೆಮಿಮಾ, "ನನ್ನ ಅತ್ಯಂತ ಕಠಿಣ ದಿನಗಳಲ್ಲಿ ನನ್ನನ್ನು ಪ್ರೀತಿಸುವುದರಿಂದ ಹಿಡಿದು, ನನ್ನ ಯಶಸ್ಸಿನ ಅತ್ಯುನ್ನತ ಕ್ಷಣದಲ್ಲಿ ನನ್ನನ್ನು ಎತ್ತಿ ಸಂಭ್ರಮಿಸಲು ಅತಿ ವೇಗವಾಗಿ ಓಡಿ ಬರುವವರೆಗೆ... ನನ್ನ ಜೀವನದಲ್ಲಿ ನೀನಿರುವುದಕ್ಕೆ ನಾನು ಎಷ್ಟು ಕೃತಜ್ಞಳಾಗಿದ್ದೇನೆ ಎಂದು ಹೇಳಲು ಬೇರೆ ಪದಗಳೇ ಇಲ್ಲ ಎಂದು ಹೇಳಿದ್ದಾರೆ.
ರನ್‌ಗಳು, ಟ್ರೋಫಿಗಳು, ಪ್ರಶಸ್ತಿಗಳು ಬರುತ್ತವೆ ಮತ್ತು ಹೋಗುತ್ತವೆ; ಆದರೆ ನಮ್ಮ ನಡುವೆ ಇರುವ ಪ್ರೀತಿ ಮತ್ತು ಕಾಳಜಿ ಎಂದಿಗೂ ಶಾಶ್ವತ:) ನನ್ನ(ಈಗ ವೃದ್ಧೆಯಾಗಿರುವ) ಹಿರಿಯ ಅಕ್ಕನಿಗೆ ಜನ್ಮದಿನದ ಶುಭಾಶಯಗಳು!! ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಪ್ರೀತಿಸುತ್ತೇನೆ!!" ಎಂದು ಜೆಮಿಮಾ ಬರೆದುಕೊಂಡಿದ್ದಾರೆ. ಜೊತೆಗೆ ತಾವಿಬ್ಬರು ಜೊತೆಯಾಗಿರುವ ಅನೇಕ ಫೋಟೋಗಳನ್ನು ಈ ಪೋಸ್ಟ್ ಜೊತೆಗೆ ಅಪ್ ಲೋಡ್ ಮಾಡಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳ ಮನೆ ಗೆದ್ದಿದೆ. ಸ್ಮೃತಿಗೆ ವ್ಯಾಪಕ ಶುಭಾಶಯಗಳು ಹರಿದು ಬರುವುದರೊಂದಿಗೆ ಈ ಸ್ನೇಹ ಇದೇ ರೀತಿ ಇರಲಿ ಎಂದು ಹಾರೈಸಿದ್ದಾರೆ.
2013 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸ್ಮೃತಿ ಮಂಧಾನ ಅವರು, ಮಹಿಳಾ ಕ್ರಿಕೆಟ್‌ನಲ್ಲಿ ಗಮನಾರ್ಹ ಸ್ಥಾನವನ್ನು ಗಳಿಸಿದ್ದಾರೆ. ಇತ್ತೀಚೆಗೆ, ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಐತಿಹಾಸಿಕ ಏಕೈಕ ಟೆಸ್ಟ್‌ನಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ, 300 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅತ್ಯಂತ ಕಿರಿಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



