ಕ್ರಿಕೆಟ್

'ಪರೋಕ್ಷ ಒತ್ತಡದಿಂದಾಗಿ ವೈಭವ್ ಸೂರ್ಯವಂಶಿಯನ್ನು ಆಡಿಸುವುದು ಅನಿವಾರ್ಯವಾಯಿತು; ಇದರಲ್ಲಿ ಗಂಭೀರ್ ಪಾತ್ರವಿರಲಿಲ್ಲ'

'ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಸಂಜು ಸ್ಯಾಮ್ಸನ್ ಅವರೇ ಎರಡನೇ ಟಿ20 ಪಂದ್ಯವನ್ನು ಆಡಲಿ ಎಂದು ನಿರ್ಧರಿಸಲಾಗಿತ್ತು'.

'ಪರೋಕ್ಷ ಒತ್ತಡದಿಂದಾಗಿ ವೈಭವ್ ಸೂರ್ಯವಂಶಿಯನ್ನು ಆಡಿಸುವುದು ಅನಿವಾರ್ಯವಾಯಿತು; ಇದರಲ್ಲಿ ಗಂಭೀರ್ ಪಾತ್ರವಿರಲಿಲ್ಲ'
ಗೌತಮ್ ಗಂಭೀರ್ - ವೈಭವ್ ಸೂರ್ಯವಂಶಿ — Photo | AFP/BCCI
Published On :

ವೈಭವ್ ಸೂರ್ಯವಂಶಿ ತಮ್ಮ ಬಹುನಿರೀಕ್ಷಿತ ಟಿ20 ಅಂತರರಾಷ್ಟ್ರೀಯ (T20I) ಪಂದ್ಯಕ್ಕೆ ಪದಾರ್ಪಣೆ ಮಾಡಿದ ಕೆಲವೇ ದಿನಗಳ ನಂತರ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರನ್ನು ಒಳಗೊಂಡ ಒಂದು ಸ್ಫೋಟಕ ವರದಿ ಹೊರಬಿದ್ದಿದೆ.

ಇಂಗ್ಲೆಂಡ್ ವಿರುದ್ಧದ ಭಾರತದ ಎರಡನೇ ಟಿ20 ಪಂದ್ಯದಲ್ಲಿ ಆಡುವ ಮೂಲಕ, ಭಾರತದ ಪರ ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ 15 ವರ್ಷದ ಆಟಗಾರ ಪಾತ್ರರಾದರು. ಇಂಗ್ಲೆಂಡ್ ವಿರುದ್ಧ ವೈಭವ್ ಮೂರು ಪಂದ್ಯಗಳಲ್ಲಿ ಆಡಿದರು. ಸಂಜು ಸ್ಯಾಮ್ಸನ್ ಬದಲಿಗೆ ವೈಭವ್‌ಗೆ ಅವಕಾಶ ನೀಡಲಾಯಿತು. ನಂತರ ಐದನೇ ಮತ್ತು ಅಂತಿಮ ಟಿ20ಐ ಪಂದ್ಯದಲ್ಲಿ ಮತ್ತೆ ಸಂಜು ಸ್ಯಾಮ್ಸನ್ ಅವರನ್ನು ಆಡಿಸಲಾಯಿತು. ಇದೀಗ, ಈ ಸರಣಿಯಲ್ಲಿ ವೈಭವ್ ಅವರನ್ನು ಆಡಿಸುವಂತೆ ಭಾರತೀಯ ಕ್ರಿಕೆಟ್ ತಂಡದ ಮೇಲೆ ಒತ್ತಡ ಹೇರಲಾಗಿತ್ತು ಮತ್ತು ಈ ವಿಷಯದಲ್ಲಿ ಗೌತಮ್ ಗಂಭೀರ್ ಅವರ ಯಾವುದೇ ಪಾತ್ರವಿರಲಿಲ್ಲ ಎಂದು ವರದಿಯೊಂದು ಹೇಳಿದೆ.

'ದೈನಿಕ್ ಜಾಗರಣ್' ವರದಿ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಭವ್ ಸೂರ್ಯವಂಶಿಯನ್ನು ಆಡಿಸುವಂತೆ ಭಾರತದ ಆಡಳಿತ ಮಂಡಳಿ ಮೇಲೆ 'ಪರೋಕ್ಷ ಒತ್ತಡ'ವಿತ್ತು. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರೂ, ಮೊದಲ ಆರು ಪಂದ್ಯಗಳಿಗೆ ಸಂಜು ಸ್ಯಾಮ್ಸನ್ ಅವರನ್ನೇ ಮುಂದುವರಿಸಲು ಆಯ್ಕೆಗಾರರು ನಿರ್ಧರಿಸಿದ್ದರು. ಮೊದಲ ಆರು ಪಂದ್ಯಗಳಲ್ಲಿ ಸಂಜು ವಿಫಲರಾದರೆ ಮಾತ್ರ ಸೂರ್ಯವಂಶಿಗೆ ಅವಕಾಶ ನೀಡಬೇಕು ಎಂಬ ವಿಷಯಕ್ಕೆ ಗಂಭೀರ್ ಮತ್ತು ಅಗರ್ಕರ್ ಇಬ್ಬರೂ ಸಮ್ಮತಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

'ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಸಂಜು ಸ್ಯಾಮ್ಸನ್ ಅವರೇ ಎರಡನೇ ಟಿ20 ಪಂದ್ಯವನ್ನು ಆಡಲಿ ಎಂದು ನಿರ್ಧರಿಸಲಾಗಿತ್ತು. ಆದರೆ, ಪರೋಕ್ಷ ಒತ್ತಡದ ಕಾರಣದಿಂದಾಗಿ ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಲಾಯಿತು' ಎಂದು ವರದಿಯಲ್ಲಿ ತಿಳಿಸಲಾಗಿದೆ.

ಐರ್ಲೆಂಡ್ ವಿರುದ್ಧ ಎರಡು ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯಗಳಲ್ಲಿ ಕ್ರಮವಾಗಿ 5, 0 ಮತ್ತು 1 ರನ್‌ಗಳನ್ನು ಗಳಿಸಿದ ನಂತರ ಸ್ಯಾಮ್ಸನ್ ಅವರನ್ನು ಭಾರತದ ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಯಿತು. ಸೂರ್ಯವಂಶಿಯವರು ತಮ್ಮ ಅವಕಾಶಕ್ಕಾಗಿ ಕಾಯುವಂತೆ ಸೂಚಿಸಿ, 'ಟಿ20 ವಿಶ್ವಕಪ್ 2026'ರ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆದ ಸ್ಯಾಮ್ಸನ್ ಅವರನ್ನೇ ತಂಡದ ಆಡಳಿತ ಮಂಡಳಿಯು ಆರಂಭಿಕ ಕ್ರಮಾಂಕದಲ್ಲಿ ಬ್ಯಾಟಿಂಗ್ ಮುಂದುವರಿಸಲು ಬೆಂಬಲಿಸಲಾಗಿತ್ತು. ಆದರೆ, ಎರಡನೇ ಟಿ20 ಪಂದ್ಯದಲ್ಲಿ ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿ ಕಣಕ್ಕಿಳಿದರು ಮತ್ತು ಮುಂದಿನ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 13 ಹಾಗೂ 15 ರನ್‌ಗಳನ್ನು ಗಳಿಸಿದರು; ಆದರೆ ಐದನೇ ಟಿ20 ಪಂದ್ಯದಲ್ಲಿ ಅವರನ್ನು ಮತ್ತೆ ಹೊರಗಿಡಲಾಯಿತು.

ಸ್ಯಾಮ್ಸನ್ ಬದಲಿಗೆ ಮೂರು ಪಂದ್ಯಗಳಿಗೆ ಆಯ್ಕೆಯಾಗಿದ್ದ ಸೂರ್ಯವಂಶಿಗೆ ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಆಡಲು ಅವಕಾಶ ನೀಡಬೇಕಿತ್ತು ಎಂದು ಆಯ್ಕೆಗಾರರ ​​ಆಪ್ತ ಮೂಲಗಳು ಅಭಿಪ್ರಾಯಪಟ್ಟಿವೆ ಎಂದು ವರದಿಯೊಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.