ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದ ಯಸ್ತಿಕಾ ಭಾಟಿಯಾ; ಲಾರ್ಡ್ಸ್‌ನಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಮಹಿಳಾ ಕ್ರಿಕೆಟರ್!
ಏಕೈಕ ಟೆಸ್ಟ್ ಪಂದ್ಯದ 3ನೇ ದಿನದಂದು ಔಟಾಗದೆ 39 ರನ್ ಗಳಿಸಿ ಇನಿಂಗ್ಸ್ ಆರಂಭಿಸಿದ ಭಾಟಿಯಾ, 145 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಗಳಿಸಿದರು.

ಲಂಡನ್: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಯಸ್ತಿಕಾ ಭಾಟಿಯಾ ಲಾರ್ಡ್ಸ್‌ನಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಗ್ಲೆಂಡ್ ವಿರುದ್ಧ ಸ್ಮರಣೀಯ 113 ರನ್ ಗಳಿಸಿ ಐಕಾನಿಕ್ ಹಾನರ್ಸ್ ಬೋರ್ಡ್‌ನಲ್ಲಿ ತಮ್ಮ ಹೆಸರು ಬರೆದರು ಮತ್ತು 'ಕ್ರಿಕೆಟ್ ತವರೂರಿ'ನಲ್ಲಿ ಭಾರತೀಯ ಕ್ರಿಕೆಟ್‌ನ ಶ್ರೀಮಂತ ಇತಿಹಾಸಕ್ಕೆ ಮತ್ತೊಂದು ಅದ್ಭುತ ಅಧ್ಯಾಯ ಸೇರಿಸಿದರು.
ಇಂಗ್ಲೆಂಡ್ ವಿರುದ್ಧದ ಭಾರತದ ಏಕೈಕ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಎಡಗೈ ಬ್ಯಾಟರ್ ಯಸ್ತಿಕಾ ಶತಕ ಬಾರಿಸಿದ್ದು, ಮಹಿಳಾ ಟೆಸ್ಟ್ ಕ್ರಿಕೆಟ್ ಪ್ರಾರಂಭವಾದಾಗಿನಿಂದ ಐತಿಹಾಸಿಕ ಲಾರ್ಡ್ಸ್‌ನಲ್ಲಿ ಶತಕ ದಾಖಲಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಟಿಯಾ ಪಾತ್ರರಾಗಿದ್ದಾರೆ.
ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ 13 ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿ ಸೇರಿದ್ದಾರೆ. ವಿನೂ ಮಂಕಡ್, ದಿಲೀಪ್ ವೆಂಗ್‌ಸರ್ಕಾರ್, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಕೆಎಲ್ ರಾಹುಲ್ ಮತ್ತು ಅಜಿಂಕ್ಯ ರಹಾನೆ ಲಾರ್ಡ್ಸ್‌ನಲ್ಲಿ ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ.
ಏಕೈಕ ಟೆಸ್ಟ್ ಪಂದ್ಯದ 3ನೇ ದಿನದಂದು ಔಟಾಗದೆ 39 ರನ್ ಗಳಿಸಿ ಇನಿಂಗ್ಸ್ ಆರಂಭಿಸಿದ ಭಾಟಿಯಾ, 145 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಗಳಿಸಿದರು.
158 ಎಸೆತಗಳಲ್ಲಿ 113 ರನ್ ಗಳಿಸಿದ ಅವರ ಇನಿಂಗ್ಸ್ 14 ಬೌಂಡರಿಗಳನ್ನು ಒಳಗೊಂಡಿತ್ತು. ಇಂಗ್ಲೆಂಡ್ ಸ್ಪಿನ್ನರ್ ಸೋಫಿ ಎಕಲ್‌ಸ್ಟನ್ ಅವರ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಮೈದಾನದಿಂದ ಹೊರನಡೆಯುವಾಗ ಪ್ರೇಕ್ಷಕರು ಮತ್ತು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಸದಸ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಹಲವಾರು ಇಂಗ್ಲೆಂಡ್ ಆಟಗಾರರು ಭಾಟಿಯಾ ಅವರ ಐತಿಹಾಸಿಕ ಪ್ರಯತ್ನವನ್ನು ಶ್ಲಾಘಿಸಿದರು.
ಈ ವರ್ಷದ ಆರಂಭದಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಭಾಟಿಯಾ, ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮೊದಲ T20I ನಲ್ಲಿ ಅರ್ಧಶತಕ ಗಳಿಸಿದರು ಮತ್ತು ಅವರ ಟೆಸ್ಟ್ ವೃತ್ತಿಜೀವನದ ಅತ್ಯಧಿಕ ಸ್ಕೋರ್‌ನೊಂದಿಗೆ ಪ್ರವಾಸವನ್ನು ಕೊನೆಗೊಳಿಸಿದರು.
ಭಾರತದ ಎರಡನೇ ಇನಿಂಗ್ಸ್‌ನಲ್ಲಿ ಸ್ಮೃತಿ ಮಂಧಾನ (70) ಮತ್ತು ರಿಚಾ ಘೋಷ್ ಅವರ ಅರ್ಧಶತಕಗಳು ಪ್ರವಾಸಿ ತಂಡವು 341/7ಕ್ಕೆ ಡಿಕ್ಲೇರ್ ಮಾಡಲು ಸಹಾಯ ಮಾಡಿತು ಮತ್ತು ಇಂಗ್ಲೆಂಡ್‌ಗೆ 457 ರನ್‌ಗಳ ಕಠಿಣ ಗುರಿಯನ್ನು ನೀಡಿತು.
ಈ ಪಂದ್ಯದ ಆರಂಭದಲ್ಲಿ, ಇಂಗ್ಲೆಂಡ್‌ನ ಮೊದಲ ಇನಿಂಗ್ಸ್‌ನಲ್ಲಿ 5/37 ರೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ವೇಗಿ ಕ್ರಾಂತಿ ಗೌಡ್, ಲಾರ್ಡ್ಸ್ ಹಾನರ್ಸ್ ಬೋರ್ಡ್‌ನಲ್ಲಿ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಭಾರತದ ಎರಡನೇ ಇನಿಂಗ್ಸ್‌ನಲ್ಲಿ 118 ರನ್ ನೀಡಿ 5 ವಿಕೆಟ್ ಪಡೆದ ಇಂಗ್ಲೆಂಡ್ ಸ್ಪಿನ್ನರ್ ಸೋಫಿ ಎಕಲ್‌ಸ್ಟನ್ ಕೂಡ ಗೌರವಕ್ಕೆ ಪಾತ್ರರಾದರು. ಲಾರ್ಡ್ಸ್‌ನಲ್ಲಿ ಟೆಸ್ಟ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯದಲ್ಲಿ 55.2 ಓವರ್‌ಗಳನ್ನು ಬೌಲಿಂಗ್ ಮಾಡುವ ಮೂಲಕ ಅವರು ಎಂಟು ವಿಕೆಟ್‌ಗಳನ್ನು ಕಬಳಿಸಿದರು.
ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 130/6 ಸ್ಕೋರ್ ಮಾಡಿ ಸಂಕಷ್ಟದಲ್ಲಿತ್ತು. ಕೇವಲ ನಾಲ್ಕು ವಿಕೆಟ್‌ಗಳು ಮಾತ್ರ ಬಾಕಿ ಇರುವಾಗ 327 ರನ್‌ಗಳ ಅವಶ್ಯಕತೆಯಿದ್ದು, ಭಾರತವು ಗೆಲುವಿನ ಅಂಚಿನಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



