ಇಷ್ಟೊಂದು ಗೊಂದಲಮಯ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನ್ನು ಹಿಂದೆಂದೂ ನೋಡಿಲ್ಲ: ಮೊಹಮ್ಮದ್ ಕೈಫ್
ಸದ್ಯ ಟಿ20 ವಿಶ್ವಕಪ್ ವಿಜೇತ ಭಾರತ, ಇಂಗ್ಲೆಂಡ್‌ನಲ್ಲಿ 4-0 ಅಂತರದ ಸರಣಿ ಸೋಲು ಅನುಭವಿಸುವ ಮೊದಲು ಐರ್ಲೆಂಡ್ ವಿರುದ್ಧ 2-0 ಅಂತರದಿಂದ ಸೋಲು ಕಂಡಿತ್ತು.

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿ ವೇಳೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವೈಭವ್ ಸೂರ್ಯವಂಶಿ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಸರಿಯಾಗಿ ನಿರ್ವಹಿಸದ ತಂಡದ ಆಡಳಿತ ಮಂಡಳಿಯನ್ನು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತರಾಟೆಗೆ ತೆಗೆದುಕೊಂಡಿದ್ದಾರೆ. 'ಇಷ್ಟು ಗೊಂದಲಮಯ ಭಾರತೀಯ ಕ್ರಿಕೆಟ್ ತಂಡದ ಆಡಳಿತವನ್ನು ನಾನು ಎಂದಿಗೂ ನೋಡಿಲ್ಲ' ಎಂದು ಹೇಳಿದ್ದಾರೆ.
ಸದ್ಯ ಟಿ20 ವಿಶ್ವಕಪ್ ವಿಜೇತ ಭಾರತ, ಇಂಗ್ಲೆಂಡ್‌ನಲ್ಲಿ 4-0 ಅಂತರದ ಸರಣಿ ಸೋಲು ಅನುಭವಿಸುವ ಮೊದಲು ಐರ್ಲೆಂಡ್ ವಿರುದ್ಧ 2-0 ಅಂತರದಿಂದ ಸೋಲು ಕಂಡಿತ್ತು. ಇದರಿಂದಾಗಿ ಭಾರತವು ಐಸಿಸಿ ಪುರುಷರ ಟಿ20ಐ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿತು.
ಈ ಪ್ರವಾಸವು ಅನಿಯಮಿತ ಆಯ್ಕೆ ನಿರ್ಧಾರಗಳಿಂದಲೇ ಹಾಳಾಗಿತ್ತು. ವಿಶೇಷವಾಗಿ 15 ವರ್ಷದ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಮತ್ತು ಈ ವರ್ಷದ ತವರಿನಲ್ಲಿ ನಡೆದ T20 ವಿಶ್ವಕಪ್ ವಿಜಯದಲ್ಲಿ ಪ್ಲೇಯರ್ ಆಫ್ ದ ಟೂರ್ನಮೆಂಟ್ ಆಗಿದ್ದ ವಿಕೆಟ್ ಕೀಪರ್-ಬ್ಯಾಟರ್ ಸ್ಯಾಮ್ಸನ್ ಅವರ ಆಯ್ಕೆಯ ವಿಚಾರದಲ್ಲಿ ತಂಡವು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ.
'ಇಷ್ಟು ಗೊಂದಲಕಾರಿ ಭಾರತೀಯ ಕ್ರಿಕೆಟ್ ತಂಡದ ನಿರ್ವಹಣೆಯನ್ನು ನಾನು ಹಿಂದೆಂದೂ ನೋಡಿಲ್ಲ. ವೈಭವ್ ಸೂರ್ಯವಂಶಿ ಮತ್ತು ಸಂಜು ಸ್ಯಾಮ್ಸನ್ ಅವರನ್ನು ನಿಭಾಯಿಸುವುದು ವೃತ್ತಿಪರತೆಯಿಂದ ದೂರವಿದೆ. ಒಬ್ಬರು ಪೀಳಿಗೆಯ ಪ್ರತಿಭೆ, ಇನ್ನೊಬ್ಬರು ವಿಶ್ವಕಪ್ ವಿಜೇತರು - ಅವರಿಬ್ಬರ ಮನಸ್ಸಿನಲ್ಲಿ ಅನುಮಾನಗಳು ಮೂಡುವುದಕ್ಕೆ ಬಿಡುವ ಬದಲು, ಆತ್ಮವಿಶ್ವಾಸವನ್ನು ನೀಡಬೇಕಾಗಿದೆ' ಎಂದು ಕೈಫ್ ಭಾನುವಾರ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದಿದ್ದಾರೆ.
ಆರಂಭದಲ್ಲಿ ಸ್ಯಾಮ್ಸನ್ ಮೂರು ಪಂದ್ಯಗಳನ್ನು ಆಡಿದರು. ಆದರೆ, ಕಡಿಮೆ ರನ್‌ಗಳಿಗೆ ಔಟಾದರು ಮತ್ತು ನಂತರ ಭಾರತವು ಅವರನ್ನು ಕೈಬಿಟ್ಟಿತು. ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿತು. ಅವರು ತಮ್ಮ ಮೊದಲ ಮೂರು T20I ಪಂದ್ಯಗಳಲ್ಲಿ 20 ರನ್‌ಗಳನ್ನು ದಾಟಲು ಸಹ ಸಾಧ್ಯವಾಗಲಿಲ್ಲ. ಸೌತಾಂಪ್ಟನ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮತ್ತೆ ವೈಭವ್ ಸೂರ್ಯವಂಶಿ ಅವರನ್ನು ಕೂರಿಸಿ, ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಯಿತು.
ಜುಲೈ 23 ರಿಂದ ಜಿಂಬಾಬ್ವೆಯಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಸರಣಿಗೆ ಸ್ಯಾಮ್ಸನ್ ಅವರನ್ನು ತಂಡದಿಂದ ಹೊರಗಿಡಲಾಗಿದ್ದು, ಸೂರ್ಯವಂಶಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಈ ನಿರ್ಧಾರ ಕೂಡ ಇದೀಗ ಟೀಕೆಗೆ ಗುರಿಯಾಗಿದೆ.
'ಆಟಗಾರರನ್ನು ದೂಷಿಸಬೇಡಿ, IPLನಲ್ಲಿ ಬದಲಾವಣೆ ತನ್ನಿ': ಭಾರತದ T20I ವೈಫಲ್ಯದ ಬಳಿಕ ಸಂಜಯ್ ಮಂಜ್ರೇಕರ್ ಕರೆ
ಈಮಧ್ಯೆ, ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್, ಆಯ್ಕೆದಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರದರ್ಶನವನ್ನು ಮೀರಿ ನೋಡಬೇಕು. ದೇಶೀಯ ಟ್ರ್ಯಾಕ್‌ಗಳು ಫ್ಲ್ಯಾಟ್ ಆಗಿರುವುದರಿಂದ ವಿದೇಶಿ ಪರಿಸ್ಥಿತಿಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ತೊಡಕಾಗಿದೆ ಎಂದು ವಾದಿಸಿದರು.
'ವಿದೇಶಗಳಲ್ಲಿ ನಡೆದ ಈ ಟಿ20 ಹಿನ್ನಡೆಗೆ ಆಟಗಾರರನ್ನು ಹೊಣೆಗಾರರನ್ನಾಗಿ ಮಾಡುವುದು ಸುಲಭದ ಕೆಲಸ. ಐಪಿಎಲ್ ಅನ್ನು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಪ್ರಯೋಜನಕಾರಿಯಾಗುವಂತೆ ರೂಪಿಸಿದವರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಾದ ಕೆಲಸ' ಎಂದಿದ್ದರು.
'ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಐಪಿಎಲ್ ಪ್ರಭಾವ ಇಲ್ಲದೆ ಕಲ್ಪಿಸಿಕೊಳ್ಳುವುದು ಮತ್ತು ಭಾರತ ತಂಡಕ್ಕಾಗಿ ಅದನ್ನು ಮೀರಿ ಆಯ್ಕೆ ಮಾಡುವುದು ಆಯ್ಕೆದಾರರಿಗೆ ಸವಾಲಾಗಿದೆ. ಬಹಳಷ್ಟು ಟಿ20 ಕ್ರಿಕೆಟ್ ಈಗ ವಿದೇಶದಲ್ಲಿರುತ್ತದೆ. ತವರಿನಲ್ಲಿ ಆಡುವ ಮೋಜಿನ ಓಟ ಮುಗಿದಿದೆ' ಎಂದು ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


