T20 World Cup: ಪಾಕ್ ಮೂಲದ ನಾಲ್ವರು ಆಟಗಾರರಿಗೆ ಭಾರತದಿಂದ 'ವೀಸಾ' ನಿರಾಕರಣೆ; USA ಕ್ರಿಕೆಟ್ ಹೇಳಿದ್ದೇನು!
2026 ರ ಟಿ-20 ವಿಶ್ವಕಪ್ಗಾಗಿ ಫೆಬ್ರವರಿ 7 ರಿಂದ ಶ್ರೀಲಂಕಾದೊಂದಿಗೆ ಜಂಟಿಯಾಗಿ ಆತಿಥ್ಯ ವಹಿಸಲಿರುವ ಭಾರತಕ್ಕೆ ಪ್ರಯಾಣಿಸಲು ಪಾಕಿಸ್ತಾನಿ ಮೂಲದ ನಾಲ್ವರು ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವಾಷಿಂಗ್ಟನ್: ಮುಂಬರುವ 2026 ರ T20 ವಿಶ್ವಕಪ್ಗೆ ತೆರಳಲು ಪಾಕಿಸ್ತಾನಿ ಮೂಲದ ನಾಲ್ವರು ಆಟಗಾರರಿಗೆ ಭಾರತದಿಂದ ವೀಸಾ ನಿರಾಕರಿಸಲಾಗಿದೆ ಎಂಬ ಹೇಳಿಕೆಯನ್ನು USA ಕ್ರಿಕೆಟ್ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ. ವೀಸಾ ವಿಳಂಬವಾಗಿದೆ ಮತ್ತು ನಿರಾಕರಿಸಲಾಗಿಲ್ಲ ಎಂದು ಅವರು ಹೇಳಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿಯೊಂದು ಹೇಳಿದೆ.
2026 ರ ಟಿ-20 ವಿಶ್ವಕಪ್ಗಾಗಿ ಫೆಬ್ರವರಿ 7 ರಿಂದ ಶ್ರೀಲಂಕಾದೊಂದಿಗೆ ಜಂಟಿಯಾಗಿ ಆತಿಥ್ಯ ವಹಿಸಲಿರುವ ಭಾರತಕ್ಕೆ ಪ್ರಯಾಣಿಸಲು ಪಾಕಿಸ್ತಾನಿ ಮೂಲದ ನಾಲ್ವರು ಆಟಗಾರರಾದ ಶಯಾನ್ ಜಹಾಂಗೀರ್, ಮೊಹಮ್ಮದ್ ಮೊಹ್ಸಿನ್ ಮತ್ತು ಎಹ್ಸಾನ್ ಆದಿಲ್ ಅವರಿಗೆ ವೀಸಾ ನಿರಾಕರಿಸಲಾಗಿದೆ ಎಂದು USA ವೇಗಿ ಅಲಿ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾರೆ ಎಂದು ಟೆಲಿಕಾಂ ಏಷ್ಯಾ ಸ್ಪೋರ್ಟ್ ವರದಿಯಲ್ಲಿ ಹೇಳಿತ್ತು.
"ವೀಸಾ ಸಮಸ್ಯೆಯನ್ನು ICC ನಡೆಸುತ್ತಿರುವ USA ಕ್ರಿಕೆಟ್ ಅಸೋಸಿಯೇಷನ್ ನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸುತ್ತೇನೆ ಮತ್ತು ವೀಸಾವನ್ನು ತಿರಸ್ಕರಿಸಲಾಗಿದೆ ಎಂದು ಒಬ್ಬ ಆಟಗಾರ ತಪ್ಪಾಗಿ ತಿಳಿಸಿದ್ದಾರೆ ಎಂದು ಯುಎಸ್ಎ ಅಧಿಕಾರಿಯೊಬ್ಬರು www.telecomasia.net ಗೆ ತಿಳಿಸಿದ್ದಾರೆ.
ವೀಸಾ 'ವಿಳಂಬ'ಗೊಂಡಿರುವ ಎಲ್ಲಾ ನಾಲ್ವರು ಪಾಕಿಸ್ತಾನದಲ್ಲಿ ಹುಟ್ಟಿದ್ದು, ಪ್ರಸ್ತುತ ಅಮೆರಿಕದ ನಾಗರಿಕರಾಗಿದ್ದಾರೆ. ಆದಾಗ್ಯೂ, ಭಾರತದ ವೀಸಾ ನಿಯಮಗಳಡಿ ಪಾಕಿಸ್ತಾನದಲ್ಲಿ ಜನಿಸಿದ ಪ್ರಜೆಗಳು ತಮ್ಮ ಹುಟ್ಟಿದ ದೇಶದ ಪಾಸ್ಪೋರ್ಟ್ನಲ್ಲಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ವೀಸಾ ವಿಳಂಬವಾಗಿದೆ. ಆದರೆ ತಿರಸ್ಕರಿಸಲಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾ ಟ್ವೆಂಟಿ-20 ವಿಶ್ವಕಪ್ ಆತಿಥ್ಯ ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ವೀಸಾ ಸಮಸ್ಯೆ ತಲೆ ಎತ್ತುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



