T20 ವಿಶ್ವಕಪ್ 2026: ಇಂಗ್ಲೆಂಡ್ ಬಗ್ಗುಬಡಿದ ವೆಸ್ಟ್ ಇಂಡೀಸ್; 30 ರನ್ ಭರ್ಜರಿ ಜಯ
ವೆಸ್ಟ್ ಇಂಡೀಸ್ ನೀಡಿದ್ದ 197 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 19 ಓವರ್ ನಲ್ಲಿ 166ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ 30 ರನ್ ಗಳ ಹೀನಾಯ ಸೋಲುಕಂಡಿದೆ.

ಮುಂಬೈ: ಟಿ20 ವಿಶ್ವಕಪ್ 2026 ಟೂರ್ನಿಯ ಇಂದಿನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 30 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 197 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 19 ಓವರ್ ನಲ್ಲಿ 166ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ 30 ರನ್ ಗಳ ಹೀನಾಯ ಸೋಲುಕಂಡಿದೆ.
ಇಂಗ್ಲೆಂಡ್ ಪರ ಫಿಲ್ ಸಾಲ್ಟ್ (30), ಜಾಸ್ ಬಟ್ಲರ್ (21), ಜೇಕಬ್ ಬೆತಲ್ (33) ಮತ್ತು ಸ್ಯಾಮ್ ಕರನ್ (43) ಗೆಲುವಿಗಾಗಿ ಯತ್ನಿಸಿದರಾದರೂ ನಿರೀಕ್ಷಿತ ಗುರಿ ತಲುಪಲಾಗಲಿಲ್ಲ. ಅಂತಿಮ ಹಂತದಲ್ಲಿ ನಿಯಮಿತವಾಗಿ ವಿಕೆಟ್ ಗಳು ಸತತವಾಗಿ ಪತನವಾಗಿದ್ದು ಇಂಗ್ಲೆಂಡ್ ಸೋಲಿಗೆ ಕಾರಣವಾಯಿತು.
ವೆಸ್ಟ್ ಇಂಡೀಸ್ ಪರ ಗುಡಕೇಶ್ ಮೋಟಿ 3 ವಿಕೆಟ್ ಪಡೆದರೆ, ರೋಸ್ಟನ್ ಚೇಸ್ 2 ವಿಕೆಟ್ ಪಡೆದರು. ಶಮರ್ ಜೊಸೆಫ್, ರೊಮಾರಿಯೋ ಶೆಫರ್ಡ್ ಮತ್ತು ಅಕೀಲ್ ಹೊಸೇನ್ ತಲಾ 1 ವಿಕೆಟ್ ಪಡೆದರು.
ವೆಸ್ಟ್ ಇಂಡೀಸ್ ಭರ್ಜರಿ ಬ್ಯಾಟಿಂಗ್
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ಭರ್ಜರಿ ಪ್ರದರ್ಶನ ನೀಡಿತು. ನಾಯಕ ಶಾಯ್ ಹೋಪ್ ಅವರು ಶೂನ್ಯ ಸುತ್ತಿದರೆ, ಬ್ರಾಂಡನ್ ಕಿಂಗ್ 1 ರನ್ ಗಳಿಸಿ ಔಟಾದರು. ಆರಂಭಿಕ ಆಘಾತದ ಹೊರತಾಗಿಯೂ ವೆಸ್ಟ್ ಇಂಡೀಸ್ ಶಿಮ್ರಾನ್ ಹೇಟ್ಮರ್ (23), ರೋಸ್ಟನ್ ಚೇಸ್ (34), ಶೆರ್ಫಾನ್ ರೂದರ್ ಫೋರ್ಡ್ (76) ಮತ್ತು ಜೇಸನ್ ಹೋಲ್ಡರ್ (33) ಉತ್ತಮ ಬ್ಯಾಟಿಂಗ್ ಮೂಲಕ ತಂಡದ ಮೊತ್ತ 190ರ ಗಡಿ ದಾಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



