ಕ್ರಿಕೆಟ್

T20 ವಿಶ್ವಕಪ್ 2026: ತಾರಿಖ್ ಭರ್ಜರಿ ಬೌಲಿಂಗ್, USA ವಿರುದ್ಧ ಪಾಕಿಸ್ತಾನಕ್ಕೆ 32 ರನ್ ಜಯ

ಪಾಕಿಸ್ತಾನ ತಂಡ ನೀಡಿದ್ದ 191 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಅಮೆರಿಕ ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

T20 ವಿಶ್ವಕಪ್ 2026: ತಾರಿಖ್ ಭರ್ಜರಿ ಬೌಲಿಂಗ್, USA ವಿರುದ್ಧ ಪಾಕಿಸ್ತಾನಕ್ಕೆ 32 ರನ್ ಜಯ
ಪಾಕಿಸ್ತಾನಕ್ಕೆ ಜಯ
Published On :

ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯ ಇಂದಿನ ಪಂದ್ಯದಲ್ಲಿ ಅಮೆರಿಕ ವಿರುದ್ಧ ಪಾಕಿಸ್ತಾನ ತಂಡ 32 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೀಡಿದ್ದ 191 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಅಮೆರಿಕ ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಪಾಕಿಸ್ತಾನದ ಎದುರು 32 ರನ್ ಗಳ ಅಂತರದ ಹೀನಾಯ ಸೋಲು ಕಂಡಿತು.

ಯುಎಸ್ಎ ಬ್ಯಾಟಿಂಗ್

ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಅಮೆರಿಕ, ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ ಗೆ 42 ರನ್ ಹರಿದುಬಂತು. ಆದರೆ 13 ರನ್ ಗಳಿಸಿದ್ದ ಆರಂಭಿಕ ಆಟಗಾರ ಆಂಡ್ರಿಸ್ ಗೌಸ್ ಮಹಮದ್ ನವಾಜ್ ಬೌಲಿಂಗ್ ನಲ್ಲಿ ಔಟಾದರು.

ಶಯಾನ್ ಜಹಂಗೀರ್ 49 ರನ್ ಗಳಿಸಿದರೆ, ಮಿಲಿಂಗ್ ಕುಮಾರ್ 29ರನ್, ಶುಭಂ ರಂಜನೆ 51 ರನ್ ಗಳಿಸಿ ಅಮೆರಿಕ ಬ್ಯಾಟಿಂಗ್ ಗೆ ಜೀವತುಂಬಿದರು.

ಆದರೆ ಉಳಿದಾವ ಆಟಗಾರಿಂದ ಅವರಿಗೆ ಸಾಥ್ ದೊರೆಯಲಿಲ್ಲ. ಮಧ್ಯಮ ಮತ್ತು ಕೆಳ ಕ್ರಮಾಂಕ ದಿಢೀರ್ ಪತನವಾಯಿತು. ಸಂಜಯ್ ಕೃಷ್ಣಮೂರ್ತಿ, ಮಹಮದ್ ಮೊಹ್ಸಿನ್ ಶೂನ್ಯ ಸುತ್ತಿದರೆ, ಹರ್ಮೀತ್ ಸಿಂಗ್ 6 ರನ್ ಮಾತ್ರ ಕಲೆಹಾಕಿ ನಿರಾಶೆ ಮೂಡಿಸಿದರು.

ಅಂತಿಮವಾಗಿ ಅಮೆರಿಕ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿ 32 ರನ್ ಅಂತರದ ಸೋಲು ಕಂಡಿತು.

ಪಾಕ್ ಪರ ತಾರಿಖ್ ಭರ್ಜರಿ ಬೌಲಿಂಗ್

ಇನ್ನು ಪಾಕಿಸ್ತಾನ ಪರ ಉಸ್ಮಾನ್ ತಾರಿಖ್ ಭರ್ಜರಿ ಬೌಲಿಂಗ್ ಮಾಡಿದರು. 4 ಓವರ್ ಎಸೆದ ತಾರಿಖ್ 27 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಶದಾಬ್ ಖಾನ್ 2, ಮಹಮದ್ ನವಾಜ್, ಅಬ್ರಾರ್ ಅಹ್ಮದ್, ಶಾಹೀನ್ ಅಫ್ರಿದಿ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.