'T20 World Cup ಎಂದರೆ ಭಾರತ ವಿರುದ್ಧ ಆಡುವುದು ಮಾತ್ರವಲ್ಲ, ಮಂಡಳಿ ನಿರ್ಧಾರಕ್ಕೆ ಎಲ್ಲ ಆಟಗಾರರು ಬದ್ಧ': ಪಾಕ್ ನಾಯಕ
'ಭಾರತವನ್ನು ಹೊರತುಪಡಿಸಿ, ನಮಗೆ ಇನ್ನೂ ಮೂರು ಗುಂಪು ಪಂದ್ಯಗಳಿವೆ. ಆದ್ದರಿಂದ ನಾವು ಅವೆಲ್ಲವನ್ನೂ ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತೇವೆ' ಎಂದು ಅವರು ಹೇಳಿದರು.

ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ವಿರುದ್ಧದ ಟಿ20 ವಿಶ್ವಕಪ್ 2026ರ ಪಂದ್ಯವನ್ನು ಬಹಿಷ್ಕರಿಸುವ ಕುರಿತು ಸರ್ಕಾರ ಅಥವಾ ಕ್ರಿಕೆಟ್ ಮಂಡಳಿಯು ನೀಡುವ ಯಾವುದೇ ಸೂಚನೆಗಳನ್ನು ಆಟಗಾರರು ಪಾಲಿಸುತ್ತಾರೆ ಎಂದು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಸೋಮವಾರ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ನಂತರ ಭಾನುವಾರ ತಂಡದ ವ್ಯವಸ್ಥಾಪಕರು ಈ ನಿರ್ಧಾರದ ಬಗ್ಗೆ ಆಟಗಾರರಿಗೆ ತಿಳಿಸಿದರು ಎಂದು ಲಾಹೋರ್ನಿಂದ ಕೊಲಂಬೊಗೆ ತಂಡದೊಂದಿಗೆ ಹೊರಡುವ ಮೊದಲು ಸಲ್ಮಾನ್ ಮಾಧ್ಯಮಗಳಿಗೆ ತಿಳಿಸಿದರು.
'ನಾವು ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡ ಆಟಗಾರರು ಮತ್ತು ನಮ್ಮ ಸರ್ಕಾರ ಮತ್ತು ಮಂಡಳಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಎಲ್ಲ ಆಟಗಾರರು ಅದಕ್ಕೆ ಸಮ್ಮತಿಸುತ್ತಾರೆ. ಟಿ20 ವಿಶ್ವಕಪ್ ಕೇವಲ ಭಾರತದ ವಿರುದ್ಧ ಆಡುವುದು ಮಾತ್ರವಲ್ಲ, ತಂಡವು ಉತ್ತಮ ಪ್ರದರ್ಶನ ನೀಡುವ ಮತ್ತು ಪಂದ್ಯಾವಳಿಯಲ್ಲಿ ಪ್ರತಿಯೊಂದು ತಂಡದ ವಿರುದ್ಧದ ಎಲ್ಲ ಪಂದ್ಯಗಳನ್ನು ಗೆಲ್ಲುವ ಗುರಿಯೊಂದಿಗೆ ಶ್ರೀಲಂಕಾಕ್ಕೆ ತೆರಳುತ್ತಿದೆ' ಎಂದು ಹೇಳಿದರು.
'ಭಾರತವನ್ನು ಹೊರತುಪಡಿಸಿ, ನಮಗೆ ಇನ್ನೂ ಮೂರು ಗುಂಪು ಪಂದ್ಯಗಳಿವೆ. ಆದ್ದರಿಂದ ನಾವು ಅವೆಲ್ಲವನ್ನೂ ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತೇವೆ' ಎಂದು ಅವರು ಹೇಳಿದರು.
ಶಾಹಿದ್ ಅಫ್ರಿದಿ, ಮುಹಮ್ಮದ್ ಯೂಸುಫ್ ಮತ್ತು ರಶೀದ್ ಲತೀಫ್ ಅವರಂತಹ ಮಾಜಿ ನಾಯಕರು ಮತ್ತು ಮೊಯಿನ್ ಖಾನ್, ಸರ್ಫರಾಜ್ ಅಹ್ಮದ್ ಮತ್ತು ಮೊಹ್ಸಿನ್ ಖಾನ್ ಅವರಂತಹ ಮಾಜಿ ಆಟಗಾರರು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಬೆಂಬಲಿಸಿದ್ದಾರೆ.
'ಐಸಿಸಿ ಬಾಂಗ್ಲಾದೇಶಕ್ಕೆ ಏನು ಮಾಡಿದೆ ಅಥವಾ ಇತ್ತೀಚಿನ ವರ್ಷಗಳಲ್ಲಿ ಅವರು ಭಾರತೀಯ ಕ್ರಿಕೆಟ್ ಮಂಡಳಿಯ ಮುಂದೆ ತಲೆಬಾಗಿದ್ದಾರೆ. ಯಾರಾದರೂ ಒಂದು ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ' ಎಂದು ಲತೀಫ್ ಹೇಳಿದರು.
ಕ್ರೀಡೆಯೊಂದಿಗೆ ರಾಜಕೀಯ ಬೆರೆಸುವುದರಲ್ಲಿ ನಂಬಿಕೆಯಿಲ್ಲದ ನನಗೆ ಭಾರತದೊಂದಿಗೆ ಆಡದಿದ್ದಕ್ಕೆ ಪಾಕಿಸ್ತಾನದ ಮೇಲೆ ನಿರಾಸೆಗೊಂಡಿದ್ದರೂ, ಆ ನಿರ್ಧಾರಕ್ಕೆ ಕಾರಣಗಳು ಏನೆಂಬುದು ನನಗೆ ತಿಳಿದಿದೆ ಎಂದು ಆಫ್ರಿದಿ ಹೇಳಿದರು.
ಫೆಬ್ರುವರಿ 7 ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್ 206ರ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡ ಕೊಲಂಬೊಗೆ ತೆರಳಿತು. ತಂಡವು ಇಂದು ಸಂಜೆ ಶ್ರೀಲಂಕಾ ರಾಜಧಾನಿಯನ್ನು ತಲುಪುವ ನಿರೀಕ್ಷೆಯಿದೆ.
ಟೂರ್ನಮೆಂಟ್ನ ನಾಕೌಟ್ ಹಂತದ ಸಮಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಮತ್ತೊಂದು ಪಂದ್ಯವನ್ನು ಆಡಬೇಕಾದಂತ ಪರಿಸ್ಥಿತಿ ಉಂಟಾದರೆ, ಮಂಡಳಿಯು ಸರ್ಕಾರದ ಸೂಚನೆಗಳನ್ನು ಅನುಸರಿಸುತ್ತದೆ ಎಂದು ಪಿಸಿಬಿಯ ಉನ್ನತ ಮೂಲವೊಂದು ತಿಳಿಸಿದೆ.
ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ, ಪಾಕಿಸ್ತಾನ ಫೆಬ್ರುವರಿ 7 ರಂದು ನೆದರ್ಲ್ಯಾಂಡ್ಸ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಫೆಬ್ರುವರಿ 10 ರಂದು ಯುಎಸ್ಎ ಮತ್ತು ಫೆಬ್ರುವರಿ 18 ರಂದು ನಮೀಬಿಯಾ ವಿರುದ್ಧದ ಪಂದ್ಯಗಳನ್ನು ಆಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



