U19 World Cup 2026, IND vs PAK: ಪಾಕ್ ನಾಯಕನ ಕೈಕುಲುಕದ ಭಾರತ ಕ್ಯಾಪ್ಟನ್ ಆಯುಷ್ ಮ್ಹಾತ್ರೆ!
ಭಾರತ ಬಹುತೇಕ ಸೆಮಿಫೈನಲ್ ತಲುಪಿದ್ದರೂ, ಭಾರಿ ಅಂತರದ ಸೋಲನ್ನು ತಪ್ಪಿಸಬೇಕಾಗಿದೆ. ಈಮಧ್ಯೆ, ಪಾಕಿಸ್ತಾನವು ಭಾರತವನ್ನು ಬೇಗನೆ ಕಟ್ಟಿಹಾಕಿ 30 ಓವರ್‌ಗಳ ಒಳಗೆ ಬೆನ್ನಟ್ಟಿದರೆ, ಸೆಮಿಫೈನಲ್ ಪ್ರವೇಶಿಸುವ ಅವಕಾಶ ಹೊಂದಿದೆ.
ಹಿರಿಯರ ತಂಡವೇ ಆಗಿರಲಿ, ಮಹಿಳಾ ತಂಡವೇ ಆಗಿರಲಿ ಯೂತ್ ಏಕದಿನ ಪಂದ್ಯಗಳೇ ಆಗಿರಲಿ, ಭಾರತವನ್ನು ಪ್ರತಿನಿಧಿಸಿದರೆ ಪಾಕಿಸ್ತಾನದ ಸಹ ಆಟಗಾರರೊಂದಿಗೆ ಕೈಕುಲುಕುವುದು ದೂರದ ಮಾತು. 2025ರ ಏಷ್ಯಾಕಪ್ ನಂತರ ಭಾರತವು ಹಲವು ಬಾರಿ ಮುಖಾಮುಖಿಯಾದ ಪಾಕ್ ಆಟಗಾರರ ಜೊತೆಗೆ ಕೈಕುಲುಕಿಯೇ ಇಲ್ಲ. ಇದೀಗ ಜಿಂಬಾಬ್ವೆಯಲ್ಲಿ ನಡೆಯುತ್ತಿರುವ 2026ರ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ಅಂಡರ್-19 ಸೂಪರ್ ಸಿಕ್ಸ್ ಪಂದ್ಯದಲ್ಲೂ ಹ್ಯಾಂಡ್‌ಶೇಕ್ ಇಲ್ಲದೆ ಮುಂದುವರೆದಿದೆ.
ಟಾಸ್ ಸಮಯದಲ್ಲಿ, ಇಬ್ಬರೂ ನಾಯಕರು ಪರಸ್ಪರ ಕೈಕುಲುಕುವ ಮೂಲಕ ಸ್ವಾಗತಿಸುವುದು ವಾಡಿಕೆ. ಆದರೆ, ಭಾರತದ ಆಯುಷ್ ಮ್ಹಾತ್ರೆ ಮತ್ತು ಪಾಕಿಸ್ತಾನದ ಫರ್ಹಾನ್ ಯೂಸುಫ್ ಬುಲವಾಯೊದಲ್ಲಿ ಪಿಚ್‌ಗೆ ನಡೆದಾಗ ಆ ದೃಶ್ಯ ನಿರೀಕ್ಷಿತವಾಗಿ ಕಾಣೆಯಾಗಿತ್ತು. ಹ್ಯಾಂಡ್‌ಶೇಕ್ ಇರಲಿಲ್ಲ. ಆದರೆ, ಟಾಸ್ ಗೆದ್ದ ಪಾಕಿಸ್ತಾನ ಚೇಸಿಂಗ್ ಆಯ್ದುಕೊಂಡಿತು.
ಭಾರತ ಬಹುತೇಕ ಸೆಮಿಫೈನಲ್ ತಲುಪಿದ್ದರೂ, ಭಾರಿ ಅಂತರದ ಸೋಲನ್ನು ತಪ್ಪಿಸಬೇಕಾಗಿದೆ. ಈಮಧ್ಯೆ, ಪಾಕಿಸ್ತಾನವು ಭಾರತವನ್ನು ಬೇಗನೆ ಕಟ್ಟಿಹಾಕಿ 30 ಓವರ್‌ಗಳ ಒಳಗೆ ಬೆನ್ನಟ್ಟಿದರೆ, ಸೆಮಿಫೈನಲ್ ಪ್ರವೇಶಿಸುವ ಅವಕಾಶ ಹೊಂದಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ, ಭಾರತವು ಪಾಕಿಸ್ತಾನದ ಆಟಗಾರರೊಂದಿಗೆ ಕೈಕುಲುಕುವುದನ್ನು ನಿರಾಕರಿಸಿತು. ಆದರೆ, ಎರಡೂ ತಂಡಗಳು ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಾತ್ರ ಪರಸ್ಪರ ಆಡಬಹುದು.
2025ರ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾದರೂ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ್ದರು. ಅದಾದ ಬಳಿಕ 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಇದೇ ದಾರಿಯನ್ನು ಅನುಸರಿಸಿದರು ಮತ್ತು ಫಾತಿಮಾ ಸನಾ ಅವರೊಂದಿಗೆ ಕೈಕುಲುಕಿರಲಿಲ್ಲ. ಪುರುಷರ ಅಂಡರ್ 19 ಏಷ್ಯಾ ಕಪ್ 2025ರಲ್ಲಿಯೂ ಇದೇ ರೀತಿ ಆಯಿತು. ಇದೀಗ ಅಂಡರ್ 19 ಏಕದಿನ ವಿಶ್ವಕಪ್ 2025ರಲ್ಲಿಯೂ ಇದೇ ಮುಂದುವರಿದಿದೆ.
ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲೂ ಸಹ, ಯಾವುದೇ ಹಸ್ತಲಾಘವ ಇರಲಿಲ್ಲ. ಭಾರತ ಮತ್ತು ಬಾಂಗ್ಲಾದೇಶದ ಸಂಬಂಧಗಳು ಉತ್ತಮವಾಗಿಲ್ಲ. ಬಾಂಗ್ಲಾದೇಶವು ಭಾರತಕ್ಕೆ ಬರುವುದು ಸುರಕ್ಷಿತವಲ್ಲ ಎಂದು ಭಾವಿಸಿದ ಕಾರಣ 2026ರ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದಿದೆ. ಆದಾಗ್ಯೂ, ನಂತರ, ಅಂಡರ್-19 ಟೂರ್ನಮೆಂಟ್‌ನಲ್ಲಿ ನಾಯಕರು ಕೈಕುಲುಕದಿರಲು ಕಾರಣವನ್ನು ಬಿಸಿಬಿ ದೃಢಪಡಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

