2 ಟೆಸ್ಟ್ ಪಂದ್ಯಗಳಲ್ಲಿ 3 ಶತಕ; Sri Lanka ಬ್ಯಾಟರ್ ಐತಿಹಾಸಿಕ ಸಾಧನೆ, ಎಲೈಟ್ ಗ್ರೂಪ್ ಸೇರಿದ Sonal Dinusha
ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ದಿನುಷಾ 197 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಮೂರು ಶತಕ ದಾಖಲಿಸಿದ ವಿಶ್ವದ ಕೆಲವೇ ಬ್ಯಾಟರ್‌ಗಳ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಕೊಲಂಬೊ: ಭಾರತ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಶ್ರೀಲಂಕಾದ ಎಡಗೈ ಬ್ಯಾಟರ್ ಸೋನಲ್ ದಿನುಷಾ ಅಪರೂಪದ ದಾಖಲೆ ನಿರ್ಮಿಸಿದ್ದು, ಎಲೈಟ್ ಗ್ರೂಪ್ ಸೇರಿದ್ದಾರೆ.
ಹೌದು.. ಗುರುವಾರ ಎರಡನೇ ಟೆಸ್ಟ್‌ನ ಐದನೇ ದಿನ ಮತ್ತೊಂದು ಶತಕ ಸಿಡಿಸಿದ ದಿನುಷಾ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಶತಕ ಬಾರಿಸಿದ ಶ್ರೀಲಂಕಾದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ದಿನುಷಾ 197 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಮೂರು ಶತಕ ದಾಖಲಿಸಿದ ವಿಶ್ವದ ಕೆಲವೇ ಬ್ಯಾಟರ್‌ಗಳ ವಿಶೇಷ ಪಟ್ಟಿಗೆ ಅವರು ಸೇರ್ಪಡೆಯಾಗಿದ್ದಾರೆ.
ಈ ಪಟ್ಟಿಯಲ್ಲಿ ಶ್ರೀಲಂಕಾದ ಅರವಿಂದ ಡಿ ಸಿಲ್ವಾ ಮತ್ತು ಕುಮಾರ್ ಸಂಗಕ್ಕಾರ, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಹಾಗೂ ಹಶೀಮ್ ಆಮ್ಲಾ, ಪಾಕಿಸ್ತಾನದ ಯೂನಿಸ್ ಖಾನ್, ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಶೇನ್ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಸೇರಿದಂತೆ ಪ್ರಮುಖ ಬ್ಯಾಟರ್‌ಗಳಿದ್ದಾರೆ.
ದಿನುಷಾ ಈ ಸಾಧನೆ ಮಾಡಿದ ಒಟ್ಟಾರೆ 9ನೇ ಬ್ಯಾಟರ್ ಹಾಗೂ ಮೂರನೇ ಶ್ರೀಲಂಕಾದ ಆಟಗಾರರಾಗಿದ್ದಾರೆ.
ಎರಡೂ ಇನಿಂಗ್ಸ್‌ಗಳಲ್ಲಿ ಶತಕ
ಈ ಸರಣಿಯಲ್ಲಿ ದಿನುಷಾ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದರು. ಮೊದಲ ಟೆಸ್ಟ್ ಇನಿಂಗ್ಸ್‌ನಲ್ಲಿ 103 ರನ್ ಗಳಿಸಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲೂ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಭಾರತ ವಿರುದ್ಧದ ಒಂದೇ ಟೆಸ್ಟ್‌ನಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಗೂ ದಿನುಷಾ ಸೇರ್ಪಡೆಯಾಗಿದ್ದಾರೆ.
ಭಾರತ ವಿರುದ್ಧ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಒಟ್ಟಾರೆ 12ನೇ ಬ್ಯಾಟರ್ ದಿನುಷಾ. 2015ರ ಜನವರಿಯ ಬಳಿಕ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಯೂ ಅವರಿಗೆ ಸಿಕ್ಕಿದೆ. ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋ 2022ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ವಿರುದ್ಧ 106 ಮತ್ತು ಅಜೇಯ 114 ರನ್ ಗಳಿಸಿದ್ದರು.
ಬೃಹತ್ ಮೊತ್ತ ಕಲೆಹಾಕಿದ್ದ ಭಾರತ
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 503/9ಕ್ಕೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ದೇವದತ್ ಪಡಿಕ್ಕಲ್ 117 ರನ್ ಹಾಗೂ ಧ್ರುವ್ ಜುರೆಲ್ ಅಜೇಯ 115 ರನ್ ಗಳಿಸಿ ಭಾರತದ ಬೃಹತ್ ಮೊತ್ತಕ್ಕೆ ಪ್ರಮುಖ ಕೊಡುಗೆ ನೀಡಿದರು.
ರಿಷಭ್ ಪಂತ್ ಕೂಡ ವೇಗದ 63 ರನ್ ಗಳಿಸಿದರು. ಪ್ರತ್ಯುತ್ತರವಾಗಿ ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 290 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ 213 ರನ್‌ಗಳ ಭರ್ಜರಿ ಮುನ್ನಡೆ ದೊರೆಯಿತು.
ದಿನುಷಾ ಮತ್ತೆ ಭಾರತದ ಬೌಲರ್‌ಗಳಿಗೆ ಕಾಟ
ಫಾಲೋಆನ್‌ಗೆ ಒಳಗಾದ ಶ್ರೀಲಂಕಾ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಪ್ರತಿರೋಧ ತೋರಿತು. ಪಸಿಂದು ಸೂರಿಯಬಂಧಾರ 92 ರನ್ ಗಳಿಸಿದರೆ, ದಿನುಷಾ ಮತ್ತೊಮ್ಮೆ ಭಾರತದ ಬೌಲರ್‌ಗಳನ್ನು ಕಾಡಿದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 229/6 ರನ್ ಗಳಿಸಿತ್ತು. ಮಳೆಯ ಕಾರಣ ದಿನದಾಟಕ್ಕೂ ಅಡ್ಡಿಯಾಯಿತು.
ಐದನೇ ದಿನ ದಿನುಷಾ ಶತಕ ಪೂರೈಸುವ ಮೂಲಕ ಭಾರತದ ಗೆಲುವಿನ ಹಾದಿಗೆ ಮತ್ತಷ್ಟು ಅಡ್ಡಿಯಾದರು. ಕೆಳಕ್ರಮಾಂಕದ ಬ್ಯಾಟರ್‌ಗಳಿಂದಲೂ ಅವರಿಗೆ ಉತ್ತಮ ಬೆಂಬಲ ಸಿಕ್ಕಿದ್ದು, ಶ್ರೀಲಂಕಾ ಭಾರತದ ಗೆಲುವಿನ ನಿರೀಕ್ಷೆಯನ್ನು ಮತ್ತಷ್ಟು ತಡಮಾಡಿತು. ಒಂದೇ ಸರಣಿಯಲ್ಲಿ ಮೂರು ಶತಕಗಳೊಂದಿಗೆ ದಾಖಲೆ ಬರೆದ ದಿನುಷಾ ಇದೀಗ ಶ್ರೀಲಂಕಾ ಕ್ರಿಕೆಟ್‌ನ ಎಲೈಟ್ ಬ್ಯಾಟರ್‌ಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



