ತೆರಿಗೆ ಪಾವತಿಯಲ್ಲೂ ಅಗ್ರಸ್ಥಾನಕ್ಕೇರಿದ Rishabh Pant; ಈ ವರ್ಷ ರಿಷಭ್ ಪಂತ್ ಕಟ್ಟಿದ ಟ್ಯಾಕ್ಸ್ ಎಷ್ಟು ಗೊತ್ತಾ?
ರಿಷಭ್ ಪಂತ್ ಅವರು ದೆಹಲಿ ಪರ ಆಡುತ್ತಿದ್ದರೂ, ಅವರು ಉತ್ತರಾಖಂಡದ ನಿವಾಸಿಯಾಗಿದ್ದು, ಈಗ ಆ ರಾಜ್ಯದ ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿದ್ದಾರೆ.

ಪ್ರಸ್ತುತ ಭಾರತದ ಟೆಸ್ಟ್ ತಂಡದಲ್ಲಿ ಮಾತ್ರ ಆಡುತ್ತಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು, ಗಾಯದ ಸಮಸ್ಯೆ ಹಾಗೂ ಕಳಪೆ ಫಾರ್ಮ್ನಿಂದಾಗಿ ಏಕದಿನ ಮತ್ತು ಟಿ20 ತಂಡದಲ್ಲಿ ಆಡಿದ್ದು ಬಹಳ ವಿರಳ. ಆದಾಗ್ಯೂ ಪಂತ್ ಅವರ ಆದಾಯದ ಹರಿವು ಕಡಿಮೆ ಆಗಿಲ್ಲ. ವರ್ಷದಿಂದ ವರ್ಷಕ್ಕೆ ಅವರ ಆದಾಯ ಹೆಚ್ಚುತ್ತಲೇ ಇದೆ.
ರಿಷಭ್ ಪಂತ್ ಅವರು ದೆಹಲಿ ಪರ ಆಡುತ್ತಿದ್ದರೂ, ಅವರು ಉತ್ತರಾಖಂಡದ ನಿವಾಸಿಯಾಗಿದ್ದು, ಈಗ ಆ ರಾಜ್ಯದ ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿದ್ದಾರೆ. ಏಕೆಂದರೆ 2025-26ರ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 23.84 ಕೋಟಿ ತೆರಿಗೆ ಪಾವತಿಸುವ ಮೂಲಕ ಉತ್ತರಾಖಂಡದಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ರಿಷಭ್ ಪಂತ್ ಅವರು ಸತತ ಎರಡನೇ ಬಾರಿಗೆ ಉತ್ತರಾಖಂಡದ ಅತಿ ಹೆಚ್ಚು ತೆರಿಗೆದಾರರಾಗಿ ಹೊರಹೊಮ್ಮಿದ್ದಾರೆ.
ರಿಷಭ್ ಪಂತ್ ಅವರ ನಿವ್ವಳ ಮೌಲ್ಯ 150 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಕ್ರಿಕೆಟ್ ಅವರ ಆದಾಯದ ಪ್ರಮುಖ ಮೂಲವಾಗಿದೆ. ಅವರು ಬಿಸಿಸಿಐ ಮತ್ತು ಐಪಿಎಲ್‌ನಿಂದ ಗಣನೀಯ ಸಂಬಳವನ್ನು ಗಳಿಸುತ್ತಾರೆ. ಪಂತ್ ಹಲವಾರು ಬ್ರಾಂಡ್‌ಗಳ ಅಂಬಾಸಿಡರ್ ಕೂಡ ಆಗಿದ್ದಾರೆ.
ಉತ್ತರಾಖಂಡ್ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರು ಈ ವಿವರಗಳನ್ನು ಬಹಿರಂಗಪಡಿಸಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪಂತ್ ಅತಿ ಹೆಚ್ಚು ತೆರಿಗೆ ಪಾವತಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



