Cricket Legend or a Dog? ರಿಕಿ ಪಾಂಟಿಂಗ್’ ಬಗ್ಗೆ ಆಡಮ್ ಗಿಲ್‌ಕ್ರಿಸ್ಟ್ ಪೋಸ್ಟ್ ವೈರಲ್!
ನೀವು ಹಳೆಯ ಸಂಗಾತಿಗಳನ್ನು ಅನಿರೀಕ್ಷಿತವಾಗಿ ಭೇಟಿಯಾದಾಗ ಯಾವಾಗಲೂ ಅದ್ಭುತವಾಗಿರುತ್ತದೆ ಎಂಬ ಶೀರ್ಷಿಕೆ ಕೊಟ್ಟು ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ದಂತಕಥೆ ಆಡಮ್ ಗಿಲ್‌ಕ್ರಿಸ್ಟ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಚಿತ್ರವಾದ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಕ್ರಿಕೆಟ್ ಪ್ರೇಮಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.
ಹೌದು. ಗಿಲ್ ಕ್ರಿಸ್ಟ್ ನಗರದಲ್ಲಿ ಸುತ್ತಾಡುವಾಗ ಮಾಜಿ ಹಳೆಯ ಸ್ನೇಹಿತನನ್ನು ಅಥವಾ ಶ್ವಾನವೊಂದನ್ನು ಭೇಟಿಯಾಗಿದ್ದಾರೆ. ನೀವು ಹಳೆಯ ಸಂಗಾತಿಗಳನ್ನು ಅನಿರೀಕ್ಷಿತವಾಗಿ ಭೇಟಿಯಾದಾಗ ಯಾವಾಗಲೂ ಅದ್ಭುತವಾಗಿರುತ್ತದೆ ಎಂಬ ಶೀರ್ಷಿಕೆ ಕೊಟ್ಟು ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ, ನಾಯಿಯ ಕುತ್ತಿಗೆಗೆ ಹಾಕಲಾದ ಬೆಲ್ಟ್ ನಲ್ಲಿ ರಿಕಿ ಪಾಂಟಿಂಗ್ ಎಂದು ಪಂಚ್ ಲೈನ್ ನೀಡಿದ್ದಾರೆ.
ಅಷ್ಟೇ ಅಲ್ಲದೇ ನಾಲ್ಕನೇ ಫೋಟೋದಲ್ಲಿ ರಿಕಿ ಪಾಂಟಿಂಗ್ ಅವರ ಮುಖದ ಫೋಟೋವನ್ನು ನಾಯಿಯ ತಲೆಯ ಮೇಲೆ ಹಾಕಿದ್ದಾರೆ.
ಇನ್ಸಾಟಾಗ್ರಾಮ್ ನಲ್ಲಿ @goldenrickyponting ಖಾತೆ ಹೊಂದಿರುವ ನಾಯಿ, ರಿಕಿ ಪಾಂಟಿಂಗ್ ಮುಖವಾಡದೊಂದಿಗೆ ಪೋಸ್ ನೀಡಲು ಹೆಚ್ಚು ಸಂತೋಷಪಟ್ಟಂತೆ ಕಾಣುತಿತ್ತು.
ಈ ಪೋಸ್ಟ್ ತ್ವರಿತಗತಿಯಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ವಿಚಿತ್ರವಾದ ಮುಖವಾಡ ಹಾಗೂ ನಾಯಿಯ ಸಂಭಾವ್ಯ "ಆಕ್ರಮಣಕಾರಿ ನಾಯಕತ್ವ ಗುಣದ ಬಗ್ಗೆ ತಮಾಷೆ ಮಾಡುವಂತಹ ಕಾಮೆಂಟ್ ಮಾಡುತ್ತಿದ್ದಾರೆ.
ಗಿಲ್ ಕ್ರಿಸ್ಟ್ ಈ ಪೋಸ್ಟ್ ಹೆಚ್ಚಿನ ಒತ್ತಡದ ಪಂದ್ಯಗಳ ನಡುವೆ ಆಸ್ಟ್ರೇಲಿಯ ಕ್ರಿಕೆಟ್‌ನ ಸುವರ್ಣ ಯುಗದ ದೈತ್ಯರ ನಡುವಿನ ಶಾಶ್ವತ ಬಂಧವನ್ನು ಹಾಸ್ಯದ ರೂಪದಲ್ಲಿ ನೆನಪಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



