IPL 2026: LSG ವಿರುದ್ಧ RCB ಗೆ ತವರಿನಲ್ಲಿ 5 ವಿಕೆಟ್ ಭರ್ಜರಿ ಗೆಲುವು
ಮೊದಲು ಬ್ಯಾಟಿಂಗ್ ಮಾಡಿದ ಎಲ್ ಎಸ್ ಜಿ ತಂಡ, ನಿಗದಿತ 20 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 146 ರನ್ ಗಳ ಸಾಧಾರಣ ಮೊತ್ತ ಗಳಿಸಿತು.
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲ್ಎಸ್ ಜಿ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಗಳಿದೆ.
ಮೊದಲು ಬ್ಯಾಟಿಂಗ್ ಮಾಡಿದ ಎಲ್ ಎಸ್ ಜಿ ತಂಡ, ನಿಗದಿತ 20 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 146 ರನ್ ಗಳ ಸಾಧಾರಣ ಮೊತ್ತ ಗಳಿಸಿತು. 147 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಆರ್ ಸಿಬಿ 15 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಎದುರಾಳಿ ತಂಡದ ವಿರುದ್ಧ ಗೆಲುವು ಸಾಧಿಸಿದೆ.
ತಂಡದ ಪರ ಆರಂಭಿಕ ಆಟಗಾರರಾದ ಮಿಚೆಲ್ ಮಾರ್ಷ್ 32 ಎಸೆತಗಳಲ್ಲಿ 40 ರನ್, ಐಡೆನ್ ಮಾರ್ಕ್ರಾಮ್ 8 ಎಸೆತಗಳಲ್ಲಿ 12 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ತಂಡಕ್ಕೆ ಈ ಆರಂಭವನ್ನು ಉತ್ತಮ ರನ್ ಗಳಿಗೆ ಕೊಂಡೊಯ್ಯುವುದಕ್ಕೆ ಒನ್ ಡೌನ್ ವೈಫಲ್ಯ ಎದುರಾಯಿತು. ನಾಯಕ ರಿಷಭ್ ಪಂತ್ 6 ಎಸೆತಗಳಲ್ಲಿ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ನಿಕೋಲಸ್ ಪೂರನ್ 7 ಎಸೆತಗಳಲ್ಲಿ 1 ರನ್ ಗಳಿಸಿ ಔಟ್ ಆದರು. ನಂತರ ಬಂದ ಆಯುಷ್ ಬದೋನಿ 24 ಎಸೆತಗಳಲ್ಲಿ 38 ರನ್, ಮುಕುಲ್ ಚೌಧರಿ 28 ಎಸೆತಗಳಲ್ಲಿ 39 ರನ್ ಗಳಿಸಿದ್ದು ತಂಡ ಚೇತರಿಸಿಕೊಳ್ಳಲು ಸಾಧ್ಯವಾಯಿತಾದರೂ ಎಲ್ಎಸ್ ಜಿಗೆ ಬೃಹತ್ ರನ್ ಗಳಿಸುವುದು ಸಾಧ್ಯವಾಗಲಿಲ್ಲ.
ಆರ್ ಸಿಬಿ ಪರ ಭುವನೇಶ್ವರ್ ಕುಮಾರ್ 27 ರನ್ ನೀಡಿ 3 ವಿಕೆಟ್ ಪಡೆದರೆ, ರಶಿಕ್ ಸಲಾಮ್ ದರ್ 24 ರನ್ ನೀಡಿ 4 ವಿಕೆಟ್ ಗಳಿಸಿದರು. ಕೃನಾಲ್ ಪಾಂಡ್ಯ 38 ರನ್ ನೀಡಿ 2 ವಿಕೆಟ್ ಗಳಿಸಿದರು.
ಎಲ್ ಎಸ್ ಜಿ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿಗೆ ಫಿಲಿಪ್ ಸಾಲ್ಟ್ 8 ಎಸೆತಗಳನ್ನು ಎದುರಿಸಿ ಕೇವಲ 7 ರನ್ ಗಳಿಗೆ ಔಟ್ ಆಗಿದ್ದು ನಿರಾಶೆ ಮೂಡಿಸಿತು. ಆದರೆ ಮತ್ತೋರ್ವ ಆರಂಭಿಕ ಆಟಗಾರರಾಗಿ ಕ್ರೀಸ್ ಗೆ ಇಳಿದಿದ್ದ ಇಂಪ್ಯಾಕ್ಟ್ ಪ್ಲೇಯರ್ ವಿರಾಟ್ ಕೊಹ್ಲಿ, 34 ಎಸೆತಗಳಲ್ಲಿ 49 ರನ್ ಗಳಿಸಿದ್ದು, ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು, ನಂತರ ದೇವದತ್ ಪಡಿಕ್ಕಲ್ 11 ಎಸೆತಗಳಿಗೆ 10 ರನ್ ಗಳಿಸಿ ಔಟಾದರೆ, ರಜತ್ ಪಾಟಿದಾರ್ 13 ಎಸೆತಗಳಲ್ಲಿ 27 ರನ್, ಜಿತೇಶ್ ಶರ್ಮಾ ಕೇವಲ 9 ಎಸೆತಗಳಲ್ಲಿ 23 ರನ್ ಗಳಿಸಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿತು. ಟಿಮ್ ಡೇವಿಡ್ 8 ಎಸೆತಗಳಲ್ಲಿ 14 ರನ್ ರೊಮಾರಿಯೊ ಶೆಫರ್ಡ್ 8 ಎಸೆತಗಳಲ್ಲಿ 14 ರನ್ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

