ಕ್ರಿಕೆಟ್

IPL 2025: ಫೈನಲ್‌ನಲ್ಲಿ RCB ಗೆಲ್ಲದಿದ್ದರೆ ಪತಿಗೆ ಡಿವೋರ್ಸ್! ಅಭಿಮಾನಿಯ ಸಂದೇಶ ವೈರಲ್!

ಆರ್ ಸಿಬಿ ಆಟಗಾರರು ಹಾಗೂ ಅಭಿಮಾನಿಗಳು ಸಂತಸದ ಹೊಳೆಯಲ್ಲಿ ತೇಲುತ್ತಿರುವಂತೆಯೇ ವಿಚಿತ್ರ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಸುದ್ದಿಯಾಗಿದೆ.

IPL 2025: ಫೈನಲ್‌ನಲ್ಲಿ RCB ಗೆಲ್ಲದಿದ್ದರೆ ಪತಿಗೆ ಡಿವೋರ್ಸ್! ಅಭಿಮಾನಿಯ ಸಂದೇಶ ವೈರಲ್!
ಫೋಸ್ಟರ್ ಹಿಡಿದು ನಿಂತಿರುವ ಮಹಿಳೆ
Published On :

ಮುಲ್ಲನಪುರ: ಚಂಡೀಗಢದ ಮುಲ್ಲನಪುರ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ 2025 ಟೂರ್ನಿಯ ಕ್ವಾಲಿಫೈಯರ್-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಎಂಟು ವಿಕೆಟ್‌ಗಳ ಜಯ ದಾಖಲಿಸಿತು.

ಇದರಿಂದ ಆರ್ ಸಿಬಿ ಆಟಗಾರರು ಹಾಗೂ ಅಭಿಮಾನಿಗಳು ಸಂತಸದ ಹೊಳೆಯಲ್ಲಿ ತೇಲುತ್ತಿರುವಂತೆಯೇ ವಿಚಿತ್ರ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಸುದ್ದಿಯಾಗಿದೆ.

ಹೌದು. ಐಪಿಎಲ್‌ನಲ್ಲಿ ಇದುವರೆಗೆ ಪ್ರಶಸ್ತಿ ಗೆಲ್ಲದಿದ್ದರೂ ಆರ್‌ಸಿಬಿ ಅತಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ. ಇದೀಗ ತಂಡ ಫೈನಲ್‌ಗೆ ತಲುಪಿದ್ದು, ಈ ವರ್ಷ ಟ್ರೋಫಿ ಗೆಲ್ಲುವ ಮೂಲಕ ಆರ್‌ಸಿಬಿ ಪ್ರಶಸ್ತಿ ಬರ ನೀಗಿಸದಿದ್ದರೆ ಪತಿಗೆ ವಿಚ್ಛೇದನ ನೀಡುವುದಾಗಿ ಮಹಿಳೆಯೊಬ್ಬರು ಸ್ಟೇಡಿಯಂನಲ್ಲಿ ಭಿತ್ತಿಪತ್ರ ಹಿಡಿದು ನಿಂತಿರುವುದು ಕಂಡುಬಂದಿದೆ.

ಇದು ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಆರ್ ಸಿಬಿ ಗೆದ್ದ ತಕ್ಷಣವೇ ಈ ಫೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಮಧ್ಯೆ ಪ್ರಬಲ ಆಲ್-ರೌಂಡ್ ಪ್ರದರ್ಶನ ತೋರಿದ ಆರ್ ಸಿಬಿ ಇನ್ನು 60 ಎಸೆತಗಳು ಬಾಕಿ ಇರುವಂತೆಯೇ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಆರ್‌ಸಿಬಿ ಈಗಾಗಲೇ ಫೈನಲ್‌ ತಲುಪಿದ್ದು, ಈಗ ಕ್ವಾಲಿಫೈಯರ್ 2 ರ ವಿಜೇತರನ್ನು ಕಾಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.