IPL 2025: ಪ್ಲೇಆಫ್‌ಗೂ ಮುನ್ನ RCB ಶಿಬಿರ ಸೇರಿದ ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿ!
ಜಿಂಬಾಬ್ವೆಯ ಸ್ಟಾರ್ ವೇಗಿ ಮುಜರಬಾನಿ ಅವರನ್ನು ಸ್ವಾಗತಿಸಿರುವ ಆರ್‌ಸಿಬಿ, ಸೋಮವಾರ ಬೆಳಿಗ್ಗೆ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಅವರ ಚಿತ್ರವನ್ನು ಹಂಚಿಕೊಂಡಿದೆ.

ಐಪಿಎಲ್ 2025ರ ಆವೃತ್ತಿಯ ಪ್ಲೇಆಫ್‌ಗೆ ಕಾಲಿಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಒಳ್ಳೆಯ ಸುದ್ದಿ ಲಭ್ಯವಾಗಿದೆ. ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಇದೀಗ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ.
ಆರ್‌ಸಿಬಿ ಈಗಾಗಲೇ ಪ್ಲೇಆಫ್ ತಲುಪಿದ್ದು, ಇತ್ತೀಚೆಗೆ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ ಪಂದ್ಯದಲ್ಲಿ ಸೋಲು ಕಂಡಿತ್ತು. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆದಿದ್ದರೆ, ಫೈನಲ್‌ಗೆ ತಲುಪಲು ತಂಡಕ್ಕೆ ಎರಡು ಅವಕಾಶಗಳು ಸಿಗುತ್ತಿದ್ದವು.
ಜಿಂಬಾಬ್ವೆಯ ಸ್ಟಾರ್ ವೇಗಿ ಮುಜರಬಾನಿ ಅವರನ್ನು ಸ್ವಾಗತಿಸಿರುವ ಆರ್‌ಸಿಬಿ, ಸೋಮವಾರ ಬೆಳಿಗ್ಗೆ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಅವರ ಚಿತ್ರವನ್ನು ಹಂಚಿಕೊಂಡಿದೆ.
ಆರ್‌ಸಿಬಿ ಮುಜರಬಾನಿಯನ್ನು ₹75 ಲಕ್ಷ ರೂಪಾಯಿಗೆ ಖರೀದಿಸಿದೆ. ಮಜರಬಾನಿ ಎತ್ತರದ ವೇಗದ ಬೌಲರ್ ಆಗಿದ್ದು, 70 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು 78 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜಿಂಬಾಬ್ವೆ ಪರ 13 ಟೆಸ್ಟ್ ಪಂದ್ಯಗಳು ಮತ್ತು 55 ಏಕದಿನ ಪಂದ್ಯಗಳನ್ನು (ODI) ಆಡಿದ್ದಾರೆ.
ಆರ್‌ಸಿಬಿ ತಂಡವನ್ನು ಸೇರುವ ಮೊದಲು, ಮುಜರಬಾನಿ ಇಂಗ್ಲೆಂಡ್ ವಿರುದ್ಧ ಜಿಂಬಾಬ್ವೆ ಪರ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದರು. ಈ ಪಂದ್ಯವು 22 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ನಡೆದ ಜಿಂಬಾಬ್ವೆಯ ಮೊದಲ ಟೆಸ್ಟ್ ಸರಣಿಯಾಗಿದೆ.
ಜಿಂಬಾಬ್ವೆ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಇಂಗ್ಲೆಂಡ್ ತಂಡವು ಇನಿಂಗ್ಸ್ ಮತ್ತು 45 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಮುಜರಬಾನಿ ಅವರು ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಅವರ ತಾತ್ಕಾಲಿಕ ಬದಲಿಯಾಗಿ ಆರ್‌ಸಿಬಿಗೆ ಸೇರಿದ್ದಾರೆ. ಜೂನ್ 11 ರಂದು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ದಕ್ಷಿಣ ಆಫ್ರಿಕಾದ ತಂಡದ ಭಾಗವಾಗಲು ಎನ್‌ಗಿಡಿ ಮೇ 26ರಂದು ತವರಿಗೆ ಹೊರಡಲಿದ್ದಾರೆ.
ಮುಜರಬಾನಿ ಐಪಿಎಲ್‌ನಲ್ಲಿ ಆಡುತ್ತಿರುವುದು ಇದೇ ಮೊದಲು. ಈ ರೀತಿಯ ದೊಡ್ಡ ಲೀಗ್‌ಗಳಲ್ಲಿ ಅನುಭವ ಇಲ್ಲದಿದ್ದರೂ, ಅವರ ವೇಗ ಮತ್ತು ಶಕ್ತಿಯು ನಿರ್ಣಾಯಕ ಪ್ಲೇಆಫ್ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗುತ್ತದೆ ಎಂದು ಆರ್‌ಸಿಬಿ ಆಶಿಸಿದೆ.
ಸದ್ಯ ಆರ್‌ಸಿಬಿ, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್‌ಗೆ ತಲುಪಿವೆ. ಈಗ ಮುಜರಬಾನಿ ಸೇರ್ಪಡೆಯೊಂದಿಗೆ, ಆರ್‌ಸಿಬಿ ಅಂತಿಮ ಹಂತಕ್ಕೆ ತಮ್ಮ ಬೌಲಿಂಗ್ ದಾಳಿಯನ್ನು ಬಲಪಡಿಸಲು ನೋಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



