IPL 2025: CSK ವಿರುದ್ಧ ಸೋತ KKR ಗೆ ಪ್ಲೇಆಫ್ ಕನಸು ದೂರು!
ಇಂಡಿಯನ್ ಪ್ರಿಮಿಯರ್ ಲೀಗ್ (IPL 2025) 57ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ಎರಡು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.

ಕೋಲ್ಕತ್ತಾ: ಇಂಡಿಯನ್ ಪ್ರಿಮಿಯರ್ ಲೀಗ್ (IPL 2025) 57ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ಎರಡು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ಎಡಗೈ ಮಣಿಕಟ್ಟಿನ ಸ್ಪಿನ್ನರ್ ನೂರ್ ಅಹ್ಮದ್ (4/31) ವಿಕೆಟ್ ಕಬಳಿಸುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 179 ರನ್‌ಗಳಿಗೆ ಸೀಮಿತಗೊಳಿಸಿತು. 180 ರನ್ ಗಳ ಗುರಿ ಬೆನ್ನಟ್ಟಿ ಚೆನ್ನೈಗೆ ಆರಂಭಿಕ ಆಘಾತ ಎದುರಾಯಿತು. ಆಯೂಷ್ ಮ್ಹಾತ್ರೆ ಮತ್ತು ಡೆವೊನ್ ಕಾನ್ವೇ ಶೂನ್ಯಕ್ಕೆ ಔಟಾದರು. ಆದರೆ ಈ ವೇಳೆ ಊರ್ವಿಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡಕ್ಕೆ ಚೇತರಿಕೆ ತಂದುಕೊಟ್ಟರು. ಪಟೇಲ್ 11 ಎಸೆತಗಳಲ್ಲಿ 4 ಸಿಕ್ಸರ್ 1 ಬೌಂಡರಿ ಸೇರಿದಂತೆ 31 ರನ್ ಸಿಡಿಸಿದರು. ಡೆವಾಲ್ಡ್ ಬ್ರೆವಿಸ್ ಸಹ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 52 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಶಿವಂ ದುಬೆ ಸಹ ಸ್ಫೋಟಕ ಬ್ಯಾಟಿಂಗ್ ಮಾಡಿ 45 ರನ್ ಬಾರಿಸಿ ಔಟಾದರು. ಎಂಎಸ್ ಧೋನಿ ಅಜೇಯ 17 ರನ್ ಗಳಿಸಿದ್ದು ಅಂತಿಮವಾಗಿ ಅನ್ಶುಲ್ ಕಾಂಬೋಜ್ ಬೌಂಡರಿ ಬಾರಿಸುವ ಮೂಲಕ ಇನ್ನು ಎರಡು ಎಸೆತ ಬಾಕಿ ಇರುವಂತೆ ತಂಡಕ್ಕೆ ಗೆಲುವು ತಂದುಕೊಟ್ಟರು.
ಟಾಸ್ ಗೆದ್ದ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಕೋಲ್ಕತ್ತಾ ಪರ ರಹಮಾನಲ್ಲಾ ಗುರ್ಬಾಜ್ 11, ಸುನಿಲ್ ನಾರಾಯಣ್ 26 ಮತ್ತು ನಾಯಕ ಅಜಿಂಕ್ಯ ರಹಾನೆ 48 ರನ್ ಗಳಿಸಿದರು. ರಘುವಂಶಿ ಕೇವಲ ಒಂದು ರನ್ ಗಳಿಸಿ ಔಟಾದರು. ನೂರ್ ಅಹ್ಮದ್ ಎಸೆತದಲ್ಲಿ ನಾರಾಯಣ್ ಅವರನ್ನು ನಾಯಕ ಎಂ.ಎಸ್. ಧೋನಿ ಸ್ಟಂಪ್ ಔಟ್ ಮಾಡಿದರು. ರಘುವಂಶಿ ಅವರನ್ನು ಧೋನಿ ಕ್ಯಾಚ್ ಮೂಲಕ ಔಟ್ ಮಾಡಿದರು. ಮನೀಶ್ ಪಾಂಡೆ 28 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದರೆ, ಆಂಡ್ರೆ ರಸೆಲ್ 21 ಎಸೆತಗಳಲ್ಲಿ 38 ರನ್ ಗಳಿಸಿದರು. ನೂರ್ ಅಹ್ಮದ್ ಅವರು ರಸೆಲ್ ಮತ್ತು ರಿಂಕು ಸಿಂಗ್ ಅವರ ವಿಕೆಟ್‌ಗಳನ್ನು ಸಹ ಪಡೆದರು.
ರಿಂಕು ಸಿಂಗ್ ಕೇವಲ ಒಂಬತ್ತು ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ರಸೆಲ್ ತಮ್ಮ ಸ್ಫೋಟಕ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ರವೀಂದ್ರ ಜಡೇಜ ಬೌಲಿಂಗ್ ನಲ್ಲಿ ಔಟ್ ಆದ ನಾಯಕ ರಹಾನೆ 33 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಗಳನ್ನು ಬಾರಿಸಿದರು. ನಾರಾಯಣ್ 17 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. 28 ಎಸೆತಗಳ ಅಜೇಯ ಇನ್ನಿಂಗ್ಸ್‌ನಲ್ಲಿ ಮನೀಶ್ ಪಾಂಡೆ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಗುರ್ಬಾಜ್ ಒಂಬತ್ತು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 11 ರನ್ ಗಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



